ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ 24 ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್ ಬೆಂಬಲಿತ ತಂಡದ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.ನೂತನ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಕೆ.ಸತೀಶ್, ಎಲ್ಲಾ ಇಲಾಖಾ ಮುಖ್ಯಸ್ಥರ ಮಾರ್ಗದರ್ಶನದಲ್ಲಿ ನನ್ನ ನೇತೃತ್ವದ ತಂಡಕ್ಕೆ ಆರ್ಶೀವಾದ ಮಾಡಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಹಿಂದಿನ ಅವಧಿಯಲ್ಲಿ ನಾವು ಮಾಡಿರುವ ಕೆಲಸವನ್ನು ಸರ್ಕಾರಿ ನೌಕರರು ಗುರುತಿಸಿದ್ದಾರೆ. ಒಟ್ಟು 66 ಸ್ಥಾನಗಳ ಪೈಕಿ 42 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದು 24 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಮ್ಮ ಬೆಂಬಲಿಗರು ಹೆಚ್ಚು ಗೆಲುವು ಸಾಧಿಸಿರುವುದು ನನಗೆ ಸಂತಸ ತಂದಿದೆ ಎಂದು ತಿಳಿಸಿದರು.ಗೆಲುವು ಸಾಧಿಸಿರುವ ಎಲ್ಲ ನಿರ್ದೇಶಕರು ಸತತವಾಗಿ ಆಯಾ ಇಲಾಖೆ ನೌಕರರುಗಳ ಸಹಕಾರ ಸಮನ್ವಯ ಸಾಧಿಸಿ ವಿಜಯಿಶಾಲಿಯಾಗಿದ್ದಾರೆ. ನಾವೆಲ್ಲರೂ ಒಟ್ಟಾಗಿ ಜಿಲ್ಲಾ ಸರ್ಕಾರಿ ನೌಕರರ ಸಂಘವನ್ನು ಮತ್ತಷ್ಟು ಸದೃಡಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ. ಚುನಾವಣೆಯಲ್ಲಿ ಭಾಗವಹಿಸಿ ಆಶೀರ್ವದಿಸಿದ ಎಲ್ಲ ನೌಕರ ಬಂಧುಗಳಿಗೆ ಅಭಿನಂದಿಸುವುದಾಗಿ ತಿಳಿಸಿದರು.
ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಸಿ.ವಿಜಯ್‌ಕುಮಾರ್ ನೂತನ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿ, ನಮ್ಮ ಸಂಘಟನೆ ಒಮ್ಮತದ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಶಿವಸ್ವಾಮಿ (169 ಮತಗಳು) ಮತ್ತು ಸತೀಶ್ (155 ಮತಗಳು) ಭರ್ಜರಿ ಗೆಲುವು ಸಾಧಿಸಿದ್ದಾರೆ ಎಂದರು.ಇದು ಸಂಘಟನೆಗೆ ಸಿಕ್ಕ ಗೆಲುವಾಗಿದೆ. ಸಂಘಟನೆಯ ಶಿಕ್ಷಕರೇ ನಮ್ಮ ನಾಯಕರು. ಶಿಕ್ಷಕರೇ ನಮಗೆ ಶಕ್ತಿ, ಶಿಕ್ಷಕರೇ ನಮಗೆ ಸ್ಪೂರ್ತಿ. ಸೇವೆಯೆ ನಮ್ಮ ಗುರಿ, ಸಂಘಟನೆಯೇ ನಮಗೆ ಶಕ್ತಿ ಎಂಬುದನ್ನು ನಮೆಲ್ಲ ಶಿಕ್ಷಕ ಬಂಧುಗಳು ಚುನಾವಣೆಯಲ್ಲಿ ನಿರೂಪಿಸಿದ್ದಾರೆ ಎಂದು ಹೇಳಿದರು.
ಈ ವೇಳೆ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಲ್.ಸಿ. ಮಹದೇವಯ್ಯ, ಶಿಕ್ಷಕರಾದ ಎಂ.ಎನ್.ದೇವರಾಜು, ಪ್ರಸನ್ನ, ರಾಮಲಿಂಗಯ್ಯ, ರೂಪೇಶ್, ಪ್ರಸನ್ನ, ಕೆ.ಎಸ್.ಗೋಪಾಲ್, ಜಿನ್ಹಾ, ಹರೀಶ್, ರವಿಕಮಾರ್, ಚಿಕ್ಕವೀರಯ್ಯ, ಅಬೂಬ್‌ಕರ್, ರಮೇಶ್, ಶಿವರಾಜು, ಸುಚಿತ್ರಾಕುಂಭಾರ್, ಜಗದೀಶ್, ರಂಗಸ್ವಾಮಿ, ಶಿವರಾಮಯ್ಯ, ರಾಜಶೇಖರ್, ವೆಂಕಟೇಶಯ್ಯ, ಮರಿಸ್ವಾಮಿ, ರವೀಂದ್ರ, ದರ್ಶನ್, ಪ್ರಭಾಕರ್, ಚಿಟ್ಟೆರಾಜು ಸೇರಿದಂತೆ ನೂರಾರು ಶಿಕ್ಷಕರುಗಳು ಹಾಜರಿದ್ದರು.ಎರಡು ಸ್ಥಾನಗಳಿಗೆ ಚುನಾವಣೆ:
ರಾಮನಗರ: ತೀವ್ರ ಕುತೂಹಲ ಕೆರಳಿಸಿದ್ದ ಪ್ರೌಢಶಾಲೆಗಳ ಎರಡು ನಿರ್ದೇಶಕರುಗಳ ಸ್ಥಾನಗಳಿಗೆ ತೀವ್ರ ಪೈಪೋಟಿ ನಡೆದು ಸರ್ಕಾರಿ ನೌಕರರಲ್ಲದವರು ಮಧ್ಯಪ್ರವೇಶ ಮಾಡಿದ್ದರಿಂದ ಅನಿವಾರ್ಯವಾಗಿ ಚುನಾವಣೆ ಎದುರಾಯಿತು.ಸ್ಪರ್ಧಿಸಿದ್ದ ಶಿವಸ್ವಾಮಿ (169 ಮತಗಳು) ಮತ್ತು ಸತೀಶ್ (155 ಮತಗಳು) ಅವರು ಭರ್ಜರಿ ಗೆಲುವು ಸಾಧಿಸುವ ಮೂಲಕ ಅವರ ಬೆಂಬಲಿತ ಅಭ್ಯರ್ಥಿಗಳನ್ನು ಹೀನಾಯವಾಗಿ ಸೋಲಿಸುವ ಮೂಲಕ ಅನವಶ್ಯಕವಾಗಿ ತಮಗೆ ಸಂಬಂಧಿಸಿಲ್ಲದ ಸಂಘಟನೆಯ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬ ಸ್ಪಷ್ಟ ಸಂದೇಶವನ್ನು ಪ್ರಜ್ಙಾವಂತ ಶಿಕ್ಷಕರು ಚುನಾವಣೆ ಮೂಲಕ ಉತ್ತರ ನೀಡಿದ್ದಾರೆ ಎಂಬ ಗುಸುಗುಸು ಮಾತುಗಳು ಶಿಕ್ಷಕ ವಲಯದಲ್ಲಿ ಕೇಳಿ ಬಂದಿದೆ.
ಆಯ್ಕೆಯಾದ ನಿರ್ದೇಶಕರು:2024-29ನೇ ಅವಧಿಯ ಜಿಲ್ಲಾ ಕಾರ್ಯಕಾರಿ ಸಮಿತಿಗೆ ಸರ್ಕಾರಿ ಪ್ರೌಢಶಾಲೆಗಳ 2 ಸ್ಥಾನದಿಂದ ಶಿವಸ್ವಾಮಿ ಮತ್ತು ಸತೀಶ್, ಶಾಲಾ ಶಿಕ್ಷಣ ಇಲಾಖೆ ಆಡಳಿತ ಕಚೇರಿಯಿಂದ ಸಿದ್ದಲಿಂಗಸ್ವಾಮಿ, ಪ್ರಾಥಮಿಕ ಶಾಲೆಯಿಂದ ಶಂಕರಾನಂದ, ಶಿವರುದ್ರಯ್ಯ, ಕಾಂತರಾಜು ಎಂ, ಪ್ರಭು ಆಯ್ಕೆಯಾಗಿದ್ದಾರೆ.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ ಡಾ.ನಾಗೇಶ್ ಎ.ಎಂ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಬೈರಪ.ಸಿ, ಜಲಸಂಪನ್ಮೂಲ ಇಲಾಖೆಯಿಂದ ಶಿವಕುಮಾರ್ ಎಸ್.ಎಂ, ಗ್ರಾಮೀಣಾಭಿವೃದ್ದಿ ಇಲಾಖೆ ಪಂಚಾಯತ್ ರಾಜ್ ಇಲಾಖೆ ಮತ್ತು ಸಿಬ್ಬಂದಿಯಿಂದ ಎಂ.ರಾಜೇಗೌಡ, ಅರಣ್ಯ ಇಲಾಖೆಯಿಂದ ಬೈರವ.ಕೆ ಆಯ್ಕೆಯಾದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಡಳಿತ ಕಚೇರಿಯಿಂದ ಎನ್.ಬಿ.ಜಗದೀಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಸ್ಪತ್ರೆ/ಸಿಬ್ಬಂದಿ ಇಲಾಖೆಯ 3 ಸ್ಥಾನಗಳಿಂದ ಶಿವಕುಮಾರ್.ಬಿ, ಲಿಂಗರಾಜು ಸಿ, ರಾಮಸ್ವಾಮಿ.ಕೆ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಜಿಲ್ಲಾಸ್ಪತ್ರೆ 2 ಸ್ಥಾನಗಳಿಂದ ಗಣೇಶ್.ಸಿ ಮತ್ತು ರವಿ.ಸಿ.ಕೆ, ತೋಟಗಾರಿಕೆ ಇಲಾಖೆಯಿಂದ ಸಿದ್ದರಾಜು, ಗ್ರಂಥಾಲಯ ಇಲಾಖೆಯಿಂದ ಅನಿತಾ.ಎಂ, ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಉಮೇಶ್.ಕೆ, ಭೂ ಮಾಪನ ಕಂದಾಯ ವ್ಯವಸ್ಥೆ ಇಲಾಖೆ ವತಿಯಿಂದ ಸುನಿಲ್‌ಕುಮಾರ್.ಎಸ್, ನ್ಯಾಯಾಂಗ ಇಲಾಖೆ 2 ಸ್ಥಾನಗಳಿಂದ ಚಂದ್ರಶೇಖರ್.ಎಸ್.ಆರ್ ಮತ್ತು ಮೋಹನ್ ಕೆ.ಆರ್, ಅವರುಗಳು ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಪಿ.ಸೋಮಲಿಂಗಯ್ಯ ತಿಳಿಸಿದರು.