ಕೋಳಾಲ ಹಾಲು ಉತ್ಪಾದಕರ ಸಂಘಕ್ಕೆ ಆಯ್ಕೆ

| Published : Feb 06 2025, 11:45 PM IST

ಸಾರಾಂಶ

ತಾಲೂಕಿನ ಕೋಳಾಲ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಚಂದ್ರಪ್ಪ, ಉಪಾಧ್ಯಕ್ಷರಾಗಿ ನರಸಿಂಹಮೂರ್ತಿ ಅವಿರೋಧವಾಗಿ ಆಯ್ಕೆಯಾದರು.

ಕನ್ನಡಪ್ರಭವಾರ್ತೆ, ತುರುವೇಕೆರೆ

ತಾಲೂಕಿನ ಕೋಳಾಲ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಚಂದ್ರಪ್ಪ, ಉಪಾಧ್ಯಕ್ಷರಾಗಿ ನರಸಿಂಹಮೂರ್ತಿ ಅವಿರೋಧವಾಗಿ ಆಯ್ಕೆಯಾದರು.

ಹಿಂದಿನ ಅಧ್ಯಕ್ಷರಾಗಿದ್ದ ಜಯರಾಮ್, ಉಪಾಧ್ಯಕ್ಷರಾಗಿದ್ದ ಕಾಳಪ್ಪನಾಯಕ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರಿಂದಾಗಿ ಚುನಾವಣೆ ನಡೆಯಿತು. ಚುನಾವಣಾಧಿಕಾರಿಗಳಾಗಿ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಕರ್ತವ್ಯ ನಿರ್ವಹಿಸಿದರು. ಸದಸ್ಯರಾದ ಶಂಕರಲಿಂಗೇಗೌಡ, ಕೆ.ಎಂ.ಉಮೇಶ್, ಕಾಳಪ್ಪನಾಯಕ, ಕುಮಾರ್, ಧೃವಕುಮಾರ್, ಕೆ.ಎಸ್.ಕೃಷ್ಣಪ್ಪ, ವಿ.ಎನ್.ಜಯರಾಮ್, ದಾಕ್ಷಾಯಿಣಿ, ಪ್ರೇಮಾ, ಉಮೇಶ್, ಆರ್.ಪುನಿತ್ ಕುಮಾರ್ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಸಂಘದ ಕಾರ್ಯದರ್ಶಿ ಕೆ.ಬಿ.ರಮೇಶ್, ತಮ್ಮ ಸಂಘದಲ್ಲಿ ಒಟ್ಟು ೩೪೭ ಸದಸ್ಯರಿದ್ದಾರೆ. ಅವರಲ್ಲಿ ೧೦೩ ಮಂದಿ ಹಾಲು ಸರಬರಾಜು ಮಾಡುತ್ತಿದ್ದಾರೆ. ಪ್ರತಿದಿನ ಸುಮಾರು ೧೫೮೦ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ೭.೩೦ ಲಕ್ಷ ಲಾಭದಲ್ಲಿದೆ. ೨.೮೩ ಲಕ್ಷ ರೂಗಳನ್ನು ಬೋನಸ್ ರೂಪದಲ್ಲಿ ಹಾಲು ಉತ್ಪಾದಕರಿಗೆ ನೀಡಲಾಗಿದೆ ಎಂದು ತಿಳಿಸಿದರು. ನೂತನ ಅಧ್ಯಕ್ಷ ಚಂದ್ರಪ್ಪ ಮತ್ತು ಉಪಾಧ್ಯಕ್ಷ ನರಸಿಂಹಮೂರ್ತಿಯವರನ್ನು ಮುಖಂಡರಾದ ಶಿವರಾಜು, ಕೆ.ಎಂ.ನಾಗರಾಜು, ರೇಣುಕುಮಾರ್, ಮಹಲಿಂಗಯ್ಯ, ವಿಠಲಾಪುರದ ರಘು, ಮಹೇಶ್, ಕರಿಯಪ್ಪ, ನಾಗರಾಜು, ಕೆ.ಆರ್.ಮಹೇಶ್, ರಾಜೇಗೌಡ, ಕೆ.ಬಿ.ಪುಟೇಗೌಡ, ಪುನಿತ್, ಮಂಜೇಗೌಡ, ದಾನಿಗೌಡ, ತ್ಯಾಗರಾಜು,ಕೆ.ಎಂ,ರಾಮಕೃಷ್ಣ ಸೇರಿದಂತೆ ಹಲವಾರು ಮಂದಿ ಅಭಿನಂದಿಸಿದರು.