ತಾಳೂರು ಕೃಷಿಪತ್ತಿನ ಸಂಘಕ್ಕೆ ಚುನಾವಣೆ

| Published : Feb 23 2025, 12:32 AM IST

ಸಾರಾಂಶ

ತಾಳೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಾಸನ ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಜಗದೀಶ್ ಕಬ್ಬಿನಹಳ್ಳಿರವರ ಬಣ ಮೇಲುಗೈ ಸಾಧಿಸಿದೆ. ೧೨ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಿಂದುಳಿ ವರ್ಗ-ಎ ಮೀಸಲು ಸ್ಥಾನಕ್ಕೆ ಟಿ. ಬಿ. ರಾಜಶೇಖರ್, ಹಿಂದುಳಿದ ವರ್ಗ-ಬಿ ಎಸ್. ಆರ್. ಹರೀಶ್, ಮಹಿಳಾ ಸಾಮಾನ್ಯ-ವಸಂತಮ್ಮ ಹಾಗೂ ನೀಲಮ್ಮ, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಕ್ಕೆ ರತ್ನಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದರು.

ಆಲೂರು: ತಾಳೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಾಸನ ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಜಗದೀಶ್ ಕಬ್ಬಿನಹಳ್ಳಿರವರ ಬಣ ಮೇಲುಗೈ ಸಾಧಿಸಿದೆ.

೧೨ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಿಂದುಳಿ ವರ್ಗ-ಎ ಮೀಸಲು ಸ್ಥಾನಕ್ಕೆ ಟಿ. ಬಿ. ರಾಜಶೇಖರ್, ಹಿಂದುಳಿದ ವರ್ಗ-ಬಿ ಎಸ್. ಆರ್. ಹರೀಶ್, ಮಹಿಳಾ ಸಾಮಾನ್ಯ-ವಸಂತಮ್ಮ ಹಾಗೂ ನೀಲಮ್ಮ, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಕ್ಕೆ ರತ್ನಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ ೭ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಸಿಎಂ ಶ್ರೀನಿವಾಸ್, ಎಂ. ಜಿ. ಸೋಮಶೇಖರ್, ಜಿ. ಕೆ. ವೆಂಕಟೇಶ್, ಬಿ. ವೈ. ಶಿವೇಗೌಡ, ಟಿ. ಇ. ಧರ್ಮ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಮಂಜುನಾಥ್ ಹಾಗೂ ಸಾಲಗಾರರ ಕ್ಷೇತ್ರದಿಂದ ಮಂಜುನಾಥ್ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಕುಮಾರ್, ಕಾರ್ಯದರ್ಶಿ ಸುರೇಶ್, ತಾಳೂರು ಗ್ರಾ. ಪಂ. ಸದಸ್ಯ ಷಡಾಕ್ಷರಿ, ಪುಟ್ಟಸ್ವಾಮಿ ನಾಯಕ್, ನಿಂಗೇಗೌಡ, ಆನಂದ್ ಉಪಸ್ಥಿತರಿದ್ದರು.