ಸಾರಾಂಶ
ಕನ್ನಡಪ್ರಭ ವಾರ್ತೆ ನಾಲತವಾಡ ಕಾಂಗ್ರೆಸ್ ಸರ್ಕಾರ ಹಗರಣಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದು, ಯಾವಾಗ ಸಮಯದಲ್ಲಾದರೂ ಚುನಾವಣೆ ಆಗಬಹುದು ತಯಾರಾಗಿರಿ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು. ಪಟ್ಟಣದ ಡಿಗ್ಗಿ ಮಂಗಳ ಕಾರ್ಯಾಲಯದಲ್ಲಿ ಅಭಿಮಾನಿಗಳು ಏರ್ಪಡಿಸಿದ್ದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಚುನಾವಣೆಯಲ್ಲಿ ಸೋತಿದ್ದೇನೆ ಎಂಬ ನೋವಿಲ್ಲ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಂಡ ಕನಸು ಬಾಕಿ ಉಳಿದುಕೊಂಡಿದೆ ಎಂಬ ನೋವಿದೆ. ನನ್ನ ಅಧಿಕಾರಾವಧಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಮಾಡಿದ್ದೇನೆ. ನಾನು ಯಾರಿಗೂ ಮೋಸ ಮಾಡಿಲ್ಲ ಎಂಬ ತೃಪ್ತಿ ನನಗೆ ಇದೆ ಎಂದರು.
ಕನ್ನಡಪ್ರಭ ವಾರ್ತೆ ನಾಲತವಾಡ
ಕಾಂಗ್ರೆಸ್ ಸರ್ಕಾರ ಹಗರಣಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದು, ಯಾವಾಗ ಸಮಯದಲ್ಲಾದರೂ ಚುನಾವಣೆ ಆಗಬಹುದು ತಯಾರಾಗಿರಿ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.ಪಟ್ಟಣದ ಡಿಗ್ಗಿ ಮಂಗಳ ಕಾರ್ಯಾಲಯದಲ್ಲಿ ಅಭಿಮಾನಿಗಳು ಏರ್ಪಡಿಸಿದ್ದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಚುನಾವಣೆಯಲ್ಲಿ ಸೋತಿದ್ದೇನೆ ಎಂಬ ನೋವಿಲ್ಲ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಂಡ ಕನಸು ಬಾಕಿ ಉಳಿದುಕೊಂಡಿದೆ ಎಂಬ ನೋವಿದೆ. ನನ್ನ ಅಧಿಕಾರಾವಧಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಮಾಡಿದ್ದೇನೆ. ನಾನು ಯಾರಿಗೂ ಮೋಸ ಮಾಡಿಲ್ಲ ಎಂಬ ತೃಪ್ತಿ ನನಗೆ ಇದೆ ಎಂದರು.
ಸೋತ ನಂತರ ಯಾರು ನನ್ನವರು ಎಂದು ಅರ್ಥಮಾಡಿಕೊಂಡಿದ್ದೇನೆ. ನನ್ನ ಅಧಿಕಾರಾವಧಿಯಲ್ಲಿ ಪಕ್ಷಾತೀತವಾಗಿ ಕೆಲಸ ಮಾಡಿದ್ದೇನೆ. ನಾಲತವಾಡ ಪಟ್ಟಣಕ್ಕೆ 800 ಮನೆಗಳನ್ನು ತಂದು ಬಡವರಿಗೆ ಹಂಚಿದ್ದೇನೆ. ಆದರೆ, ಶಾಸಕರು ಜಿಪಿಎಸ್ ಮಾಡಲು ತಡೆ ಹಿಡಿದಿದ್ದಾರೆ. ಯಾಕೆ ಅಂತ ಈಗ ಅರ್ಥ ಆಗುತ್ತಿದೆ. ಇತ್ತೀಚೆಗೆ ಶಾಸಕರು ನಾಲತವಾಡ ಪಪಂನಲ್ಲಿ ಸದಸ್ಯರಿಗೆ ತಿಳಿಸದೇ ಸಭೆ ನಡೆಸಿದ್ದಾರೆ. ಈ ಸಭೆ ಹಲವು ಅನುಮಾನಗಳನ್ನು ಹುಟ್ಟಿಹಾಕಿದೆ ಎಂದು ಹೇಳಿದರು.ಶಾಸಕರು ಜಿಪಿಎಸ್ ಮಾಡಲು ತಡೆ ಹಿಡಿಯುವುದರ ಹಿಂದೆ 300 ಮನೆಗಳು ಕಾರಣಗಳಿವೆ. ಹಲವಾರು ವರ್ಷಗಳಿಂದ ನಾಡಗೌಡರ ಜಾಗದಲ್ಲಿ ವಾಸವಾಗಿರುವ 300 ಕುಟುಂಬಗಳಲ್ಲಿ ಕೆಲವರು ಆಶ್ರಯ ಮನೆಗಳಿಗೆ ಆಯ್ಕೆಯಾಗಿದ್ದು, ಜಿಪಿಎಸ್ ಮಾಡಲು ಅವಕಾಶ ನೀಡಿದರೆ ಅವರು ನಮ್ಮ ಜಾಗದಲ್ಲಿ ಮನೆ ಕಟ್ಟಿಸಿಕೊಳ್ಳುತ್ತಾರೆ ಎಂಬ ಒಂದೇ ಕಾರಣಕ್ಕೆ ಜಿಪಿಎಸ್ ತಡೆ ಹಿಡಿದಿದ್ದಾರೆ. ಇಂದಿರಾ ಗಾಂಧಿಯವರ ಉಳುವವನೇ ಭೂ ಒಡೆಯ ಎಂಬ ಕಾನೂನು ತಂದು ಜಮೀನಿನಲ್ಲಿ ಉಳುಮೆ ಮಾಡುವವನೇ ಎಂಬಂತೆ ವಾಸಿಸುವನೇ ಮನೆ ಒಡೆಯನಾಗುತ್ತಾನೆ. ಹಲವು ವರ್ಷಗಳಿಂದ ಬಡ ಕುಟುಂಬಗಳು ಮನೆಯಲ್ಲಿ ವಾಸಿಸುತ್ತಿದ್ದಾರೆ. ಶಾಸಕರೇ ಮೊದಲು ಅವರಿಗೆ ಜಾಗವನ್ನು ಬಿಟ್ಟುಕೊಡಿ ಎಂದು ಒತ್ತಾಯಿಸಿದರು.ನನ್ನ ಅಧಿಕಾರಾವಧಿಯಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದಿದ್ದೇನೆ. ಇವರು ಐದು ವರ್ಷಗಳ ಕಾಲ ಅದರಲ್ಲಿಯೇ ಕಾಲ ಕಳೆಯುತ್ತಾರೆ ಎಂದು ನಡಹಳ್ಳಿ ಟೀಕಿಸಿದರು.
ಜನ್ಮದಿನ ಆಚರಣೆ: ಬಿಜೆಪಿ ಕಾರ್ಯಕರ್ತರು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹಾಗೂ ಬಿಜೆಪಿ ಮುಖಂಡ ಚಂದ್ರಶೇಖರ ಗಂಗನಗೌಡರ ಅವರ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಇಬ್ಬರು ಏಕಕಾಲದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಜಿಪಂ ಮಾಜಿ ಉಪಾಧ್ಯಕ್ಷ ಗಂಗಾಧರ ನಾಡಗೌಡ, ಕೆಂಚಪ್ಪ ಬಿರಾದಾರ, ಬಿಜೆಪಿ ಹಿರಿಯ ಮುಖಂಡ ಎಂ.ಎಸ್.ಪಾಟೀಲ, ಮುತ್ತು ಅಂಗಡಿ ಮಾತನಾಡಿದರು, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಗಿರೀಶಗೌಡ ಪಾಟೀಲ ಮಾತನಾಡಿದರು. ಶಿಕ್ಷರಾದ ರಾಜು ಡಂಬಳ, ಬಾಬು ಹಾದಿಮನಿ ನಿರೂಪಿಸಿದರು.ಈ ವೇಳೆ ಮುಖಂಡರಾದ ಮಲಕೇಂದ್ರಗೌಡ, ನ್ಯಾಯವಾದಿ ಬಿ.ಎಂ.ತಾಳಿಕೋಟಿ, ಖಾಜಾಹುಸೇನ ಎತ್ತಿನಮನಿ, ಸಂಗಣ್ಣ ಕುಳಗೇರಿ, ಸಂಗಣ್ಣ ಮೇಟಿ, ಜಿ.ಮಹಾಂತಗೌಡ ಗಂಗನಗೌಡರ, ಸಂಗಣ್ಣ ಹಾವರಗಿ, ವೀರೇಶ ಚಲವಾದಿ, ಹಾಗೂ ಇನ್ನಿತರರು ಇದ್ದರು.
--------------------------------------