ವಿದ್ಯುತ್ ನಿಗಮಗಳು ಖಾಸಗಿ ಕಂಪನಿಗಳ ಕೈಯಲ್ಲಿ ಹೋದರೆ ಲಾಭ ಮಾಡುವುದೇ ಅವರ ಏಕೈಕ ಉದ್ದೇಶವಾಗುತ್ತದೆ. ಹೊರತು ಬಡವರು, ರೈತರು ಅವರ ಕಣ್ಣಿಗೆ ಕಾಣುವದಿಲ್ಲ
ಮುನಿರಾಬಾದ್ : ವಿದ್ಯುತ್ ಖಾಸಗೀಕರಣದಿಂದ ಬಡವರು ಮತ್ತು ರೈತರಿಗೆ ಸಂಕಷ್ಟವಾಗುತ್ತದೆ ಎಂದು ಜೆಸ್ಕಾಂನ ಸಹಾಯಕ ಕಾರ್ಯ ಪಾಲಕ ಅಭಿಯಂತರ ವೀರೇಶ್ ಹೇಳಿದರು.
ಅವರು ಇಲ್ಲಿನ ಅಧೀಕ್ಷಕ ಅಭಿಯಂತರ ಕಚೇರಿಯಲ್ಲಿ ಜೆಸ್ಕಾಂ ನೌಕರರ ಖಾಸಗೀಕರಣ ವಿರುದ್ಧ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು.ಜೆಸ್ಕಾಂನ ವಿವಿಧ ಕಂಪನಿಗಳಿಗೆ ಬಡವರು ಹಾಗೂ ಅನ್ನದಾತರ ಬಗ್ಗೆ ಕಳಕಳಿ ಇದೆ. ಆದರೆ ವಿದ್ಯುತ್ ನಿಗಮಗಳು ಖಾಸಗಿ ಕಂಪನಿಗಳ ಕೈಯಲ್ಲಿ ಹೋದರೆ ಲಾಭ ಮಾಡುವುದೇ ಅವರ ಏಕೈಕ ಉದ್ದೇಶವಾಗುತ್ತದೆ. ಹೊರತು ಬಡವರು, ರೈತರು ಅವರ ಕಣ್ಣಿಗೆ ಕಾಣುವದಿಲ್ಲ ಬಡವರಿಗೆ ನೀಡುತ್ತಿರುವ ಕುಟಿರ ಜ್ಯೋತಿ ಹಾಗೂ ಭಾಗ್ಯ ಜ್ಯೋತಿ ಹಾಗೂ ರೈತರ ಪಂಪಸೆಟ್‌ಗಳಿಗೆ ನೀಡುತ್ತಿರುವ ಉಚಿತ ವಿದ್ಯುತ್‌ನ್ನು ಖಾಸಗಿ ಕಂಪನಿಗಳು ಬಂದ್ ಮಾಡುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಟಾಟಾ ಕಂಪನಿ 19 ಜಿಲ್ಲೆಗಳಲ್ಲಿ ಪ್ಯಾರಲಲ್ ಲೈಸೆನ್ಸ್ ಗಾಗಿ ಅರ್ಜಿ ಹಾಕಿದ್ದು. ಇದನ್ನು ಜೆಸ್ಕಾಂ ನೌಕರರ ಸಂಘ ವಿರೋಧಿಸುತ್ತದೆ ಹಾಗೂ ಸರ್ಕಾರ ಯಾವುದೇ ಕಾರಣಕ್ಕೂ ಟಾಟಾ ಕಂಪನಿಗೆ 19 ಜಿಲ್ಲೆಗಳಲ್ಲಿ ಪ್ಯಾರಲಲ್ ಲೈಸೆನ್ಸ್ ನೀಡಬಾರದು ಎಂದು ಒತ್ತಾಯಿಸಿದರು.ಕೆಪಿಟಿಸಿಎಲ್ ಸಂಘಟನಾ ಕಾರ್ಯದರ್ಶಿ ವಿಜಯಕುಮಾರ ಮಾತನಾಡಿ, ರಾಜ್ಯ ಸರ್ಕಾರವು ಕೆಪಿಟಿಸಿಎಲ್ ಹಾಗೂ ಜೆಸ್ಕಾಂ ನೌಕರರ ಹಿತ ಕಾಪಾಡುವ ನಿಟ್ಟಿನಲ್ಲಿ ಪ್ರಬಲವಾದ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದರು.
ಕಾರ್ಯಪಾಲಕ ಅಭಿಯಂತರ ರಾಘವೇಂದ್ರ ಮಾತನಾಡಿ, ಒರಿಸ್ಸಾ ರಾಜ್ಯದಲ್ಲಿ ವಿದ್ಯುತ್ ಸರಬರಾಜನ್ನು ಸಂಪೂರ್ಣ ಖಾಸಗೀಕರಣ ಮಾಡಲಾಗಿದೆ. ಅಲ್ಲಿ ಪ್ರವಾಹ ಬಂದಾಗ ಸಾವಿರಾರು ವಿದ್ಯುತ್ ಕಂಬಗಳು ನೀರಿನ ರಭಸಕ್ಕೆ ಕಿತ್ತು ಹೋದವು. ಆಗ ಖಾಸಗಿ ಕಂಪನಿಯವರು ಅದನ್ನು ದುರಸ್ತಿ ಮಾಡುವ ಗೋಜಿಗೆ ಹೋಗಲಿಲ್ಲ. ಜನರು ಅನೇಕ ದಿನ ಕತ್ತಲಲ್ಲಿ ಕಳೆಯಬೇಕಾದ ಪರಿಸ್ಥಿತಿ ಬಂತು. ಆಗ ಒರಿಸ್ಸಾ ಸರ್ಕಾರವು ನಮ್ಮ ಸರ್ಕಾರಕ್ಕೆ ಮನವಿ ಮಾಡಿದಾಗ ಸುಮಾರು 800 ಜನ ಅಧಿಕಾರಿಗಳು ಹಾಗೂ ಲೈನ್ ಮ್ಯಾನ್ ಗಳನ್ನು ಒರಿಸ್ಸಾಗಿ ಕಳಿಸಿ ಕೊಟ್ಟಿತ್ತು. ನಾವು ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿ ಕಿತ್ತು ಹೋದ ಲೈನ್ ಗಳನ್ನು ಪುನಃ ನಿರ್ಮಾಣ ಮಾಡಿ ಮತ್ತೆ ವಿದ್ಯುತ್ ಸರಬರಾಜು ಸುಗಮ ಗೊಳಿಸಿದೇವು. ಕಷ್ಟಕ್ಕೆ ಕರೆಯಬೇಡಿ ಊಟಕ್ಕೆ ಮರೆಯಬೇಡಿ ಎಂಬ ಗಾಧೆ ಇದೆ ಇದು ಖಾಸಗಿ ಕಂಪನಿಗೆ ಹೋಲುತ್ತದೆ ಅವರಿಗೆ ಜನರ ದುಡ್ಡು ಮಾತ್ರ ಬೇಕು ಆದರೆ ಜನರ ಕಷ್ಟ ಮಾತ್ರ ಬೇಕಾಗಿಲ್ಲ. ಒರಿಸ್ಸಾ ರಾಜ್ಯ ನೋಡಿ ನಾವೆಲ್ಲರೂ ಪಾಠ ಕಲಿಯಬೇಕಾಗಿದೆ ಎಂದರು.ಪ್ರತಿಭಟನೆಯಲ್ಲಿ ಜೆಸ್ಕಾಂನ 300 ಕ್ಕೂ ಅಧಿಕ ಜನ ನೌಕರರು, ರೈತ ಸಂಘದ ಪದಾಧಿಕಾರಿಗಳು ಹಾಗೂಕರವೇ ಸದಸ್ಯರು ಭಾಗವಹಿಸಿದ್ದರು
ಸಹಾಯಕ ಕಾರ್ಯಪಲಕ ಅಭಿಯಂತರರಾದ ಶ್ವೇತಾ, ಕರ್ನಾಟಕ ರಕ್ಷಣಾ ವೇದಿಕೆಯ ಕೊಪ್ಪಳ ಜಿಲ್ಲಾಧ್ಯಕ್ಷ ವಿಜಯಕುಮಾರ್, ರೈತ ಸಂಘದ ಮುಖಂಡ ಹುಲಿಗಪ್ಪ ಮಾತನಾಡಿದರು.ಅಧೀಕ್ಷಕ ಅಭಿಯಂತರ ರಮೇಶ್, ಶಾಖಾಧಿಕಾರಿ ವೀರೇಶ್, ಜೆಸ್ಕಾಂ ಕಲ್ಬುರ್ಗಿ ವಲಯದ ನೌಕರರ ಸಂಘದ ಉಪಾಧ್ಯಕ್ಷ ಮನೋಹರ್ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.