ಸಾರಾಂಶ
ಕಾಡಾನೆ ದಾಳಿ ನಡೆಸಿದ ವೇಳೆ ಕೂದಲೆಳೆ ಅಂತರದಲ್ಲಿ ವ್ಯಕ್ತಿಯೊಬ್ಬರು ಪಾರಾದ ಘಟನೆ ಅರಿಸಿಣ ಗುಪ್ಪೆ ಗ್ರಾಮದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕಾಡಾನೆ ದಾಳಿ ನಡೆಸಿದ ವೇಳೆ ಕೂದಳೆಲೆ ಅಂತರದಲ್ಲಿ ವ್ಯಕ್ತಿಯೊಬ್ಬರು ಪಾರಾದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಅರಿಸಿಣ ಗುಪ್ಪೆ ಗ್ರಾಮದಲ್ಲಿ ಶನಿವಾರ ನಡೆದಿದೆ.ಸಿದ್ದಲಿಂಗಾಪುರ ಸಮೀಪದ ಅರಿಸಿಣ ಗುಪ್ಪೆ ಗ್ರಾಮದ ಪುಟ್ಟರಾಜು ತಮ್ಮ ಹೊಲಕ್ಕೆ ನೀರು ಹಾಯಿಸಲು ಪೈಪ್ ಜೋಡಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಕಾಡಾನೆ ದಾಳಿಗೆ ಮುಂದಾಗಿದೆ.
ತಕ್ಷಣ ಪುಟ್ಟರಾಜು ಮನೆಯೊಳಗೇ ಓಡಿದ್ದಾರೆ. ಮನೆಯ ಸುತ್ತಲೂ ಅತ್ತಿಂದಿತ್ತ ಕಾಡಾನೆ ಓಡಾಡಿದೆ.ಮನೆಯೊಳಗೇ ಪುಟ್ಟರಾಜರವರ ಪತ್ನಿ, ತಾಯಿ ಇದ್ದರು. ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮನೆಯ ಮುಂಭಾಗ ನಿಲ್ಲಿಸಿದ್ದ ಬೈಕ್ ಪುಡಿ ಪುಡಿ ಮಾಡಿದೆ. ನಂತರ ಬಾಣಾವರ ಅರಣ್ಯ ಎರಪರೇ ಭಾಗಕ್ಕೆ ಕಾಡಾನೆ ತೆರಳಿದೆ.---------------------------------------
ವಿಕ್ರಂ ಬಡಾವಣೆಯಲ್ಲಿ ಹುಚ್ಚು ನಾಯಿ ಕಡಿತ: ನಿವಾಸಿಗಳಲ್ಲಿ ಆತಂಕಸುಂಟಿಕೊಪ್ಪ: ಇಲ್ಲಿನ ವಿಕ್ರಂ ಬಡಾವಣೆಯಲ್ಲಿ ಹುಚ್ಚು ನಾಯಿ ಹಸುವಿಗೆ ಕಚ್ಚಿದ್ದು ಇದರಿಂದ ಹಸು ಮೃತಪಟ್ಟಿದೆ. ಗ್ರಾಮದ ನಿವಾಸಿಗಳಲ್ಲಿ ಮುಂದೇನಾಗುವುದೋ ಎಂಬ ಭೀತಿ ಸೃಷ್ಟಿಸಿದೆ.
ಇತ್ತೀಚಿಗೆ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ 7ನೇ ಮೈಲ್ ಗ್ರಾಮದ ವಿಕ್ರಂ ಬಡಾವಣೆಯಲ್ಲಿ ಹುಚ್ಚು ನಾಯಿಯೊಂದು ಹಸು ಸೇರಿದಂತೆ ಇತರೆ ಪ್ರಾಣಿಗಳಿಗೆ ಕಚ್ಚಿದೆ ಎನ್ನಲಾಗುತ್ತಿದೆ. ಹುಚ್ಚುನಾಯಿ ಕಡಿತಕ್ಕೀಡಾದ ಹಸು ಸಾವನ್ನಪ್ಪಿದ್ದು, ಇದೀಗ ಸಾಕು ನಾಯಿಗಳು ಸೇರಿದಂತೆ ಇತರೆ ಪ್ರಾಣಿಗಳಿಗೆ ಕಚ್ಚಿರುವ ಸಂಶಯವನ್ನು ಈ ಭಾಗದ ನಿವಾಸಿಗಳಲ್ಲಿ ಮೂಡಿದೆ. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಈ ಬಗ್ಗೆ ಕಾನೂನು ಕ್ರಮ ಕೈಗೊಂಡು ಮುಂದಾಗುವ ಅನಾಹುತ ತಪ್ಪಿಸಬೇಕು ಎಂದು ಬಡಾವಣೆ ನಿವಾಸಿಗಳು ಆಗ್ರಹಿಸಿದ್ದಾರೆ.