ಸಾರಾಂಶ
ಒಂದು ಕಡೆ ತಾಲೂಕಿನಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆ ನಡೆದಿರುವ ವೇಳೆಯಲ್ಲಿಯೇ ಇತ್ತ ಆನೆಗಳು ರೈತರ ಜಮೀನಿಗೆ ದಾಂಗುಡಿ ಇಟ್ಟು ಹಾನಿ ಮಾಡಿದೆ.
ಚನ್ನಪಟ್ಟಣ: ರೈತರ ಜಮೀನುಗಳ ಮೇಲೆ ದಾಳಿ ನಡೆಸಿದ ಪುಂಡಾನೆಗಳು ಸುಮಾರು 50ಕ್ಕೂ ಹೆಚ್ಚು ತೆಂಗಿನ ಸಸಿಗಳನ್ನು ನಾಶಪಡಿಸಿರುವ ಘಟನೆ ತಾಲೂಕಿನ ಯಲಚಿಪಾಳ್ಯದಲ್ಲಿ ನಡೆದಿದೆ.ಗ್ರಾಮದ ಪರಮೇಶ್ವರ ಹಾಗೂ ಕೆಂಪಯ್ಯ ಎಂಬುವವರ ಜಮೀನಿನ ಮೇಲೆ ದಾಳಿ ನಡೆಸಿದ ಆನೆಗಳು ಜಮೀನಿನಲ್ಲಿ ಹಾಕಿದ್ದ ಸುಮಾರು 50 ಹೆಚ್ಚು ಸಸಿಗಳನ್ನು ನಾಶಮಾಡಿವೆ. ಇದೇ ವೇಳೆ ಜಮೀನಿನಲ್ಲಿ ಅಳವಡಿಸಿದ್ದ ನೀರಿನ ಪೈಪ್‌ಗಳನ್ನು ಸಹ ಕಿತ್ತುಹಾಕಿ ಹಾನಿ ಮಾಡಿವೆ.ಒಂದು ಕಡೆ ತಾಲೂಕಿನಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆ ನಡೆದಿರುವ ವೇಳೆಯಲ್ಲಿಯೇ ಇತ್ತ ಆನೆಗಳು ರೈತರ ಜಮೀನಿಗೆ ದಾಂಗುಡಿ ಇಟ್ಟು ಹಾನಿ ಮಾಡಿದೆ. ಆನೆಗಳ ಕಾಟಕ್ಕೆ ಶಾಶ್ವತ ಪರಿಹಾರ ಒದಗಿಸುವಂತೆ ರೈತರು ಆಗ್ರಹಿಸಿದ್ದಾರೆ.ಪೊಟೋ೨೩ಸಿಪಿಟಿ೨: ತಾಲೂಕಿನ ಯಲಚಿಪಾಳ್ಯದ ರೈತರ ಜಮೀನಿನಲ್ಲಿದ್ದ ತೆಂಗಿನ ಸಸಿಗಳನ್ನು ಆನೆಗಳು ನಾಶ ಮಾಡಿರುವುದು.