ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು ಕಾಡಾನೆ ದಾಳಿಯಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ರೈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ಸೇರಿಸಲು ಕುಟುಂಬದವರ ಜೊತೆ ಚರ್ಚಿಸಲಾಗಿದೆ ಎಂದು ವಲಯಧಿಕಾರಿ ವಾಸು ತಿಳಿಸಿದ್ದಾರೆ.ಹನೂರು ತಾಲೂಕಿನ ಬಿ ಆರ್ ಟಿ ವಲಯ ಅರಣ್ಯ ಪ್ರದೇಶದ ಲೊಕ್ಕನಹಳ್ಳಿ ಗ್ರಾಮದ ರೈತ ಬಸವಣ್ಣ ಗುರುವಾರ ತಡರಾತ್ರಿ ಆನೆ ದಾಳಿಯಿಂದ ಜಮೀನಿನಲ್ಲಿ ಕಾವಲು ಕಾಯುತ್ತಿದ್ದಾಗ ಗಾಯಗೊಂಡು ಕಾಮಗೆರೆ ಹೋಲಿ ಕ್ರಾಸ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ರೈತ ಬಸವಣ್ಣನಿಗೆ ಕಾಡಾನೆ ದಾಳಿಯಿಂದ ಪಕ್ಕೆಲುಬು ಮುರಿದಿರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಸೋಮವಾರ ದಾಖಲಿಸಲು ರೈತ ಬಸವಣ್ಣನವರ ಕುಟುಂಬದವರ ಜೊತೆ ಚರ್ಚೆ ನಡೆಸಿರುವ ಅರಣ್ಯ ಅಧಿಕಾರಿಗಳು ರೈತನ ನೆರವಿಗೆ ಧಾವಿಸಿದ್ದಾರೆ.ಎಸಿಎಫ್ ಭೇಟಿ:ಆಸ್ಪತ್ರೆಯಲ್ಲಿ ದಾಖಲಾಗಿರುವುದರಿಂದ ಬಿ ಆರ್ ಟಿ ವಲಯದ ಎಸಿಎಫ್ ನಂದಗೋಪಾಲ್ ಹಾಗೂ ವಲಯ ಅರಣ್ಯ ಅಧಿಕಾರಿ ವಾಸು ಆಸ್ಪತ್ರೆಗೆ ಭೇಟಿ ನೀಡಿ ರೈತನ ಆರೋಗ್ಯ ವಿಚಾರಿಸಿ ಕುಟುಂಬದವರಿಗೆ ಅರಣ್ಯ ಇಲಾಖೆಯಿಂದ ಸಿಗುವ ಪರಿಹಾರ ನೀಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಕಾಡಾನೆ ದಾಳಿಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೈತನ ಆಸ್ಪತ್ರೆಯ ವೆಚ್ಚವನ್ನು ಸಹ ಅರಣ್ಯ ಇಲಾಖೆ ಭರಿಸಲಿದೆ ಕುಟುಂಬದವರು ಸೂಕ್ತ ದಾಖಲಾತಿಗಳೊಂದಿಗೆ ನೀಡಿದರೆ ಸಂಪೂರ್ಣ ವೆಚ್ಚವನ್ನು ನೀಡಲಾಗುವುದು. ಜತೆಗೆ ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲು ಕುಟುಂಬದವರ ಜೊತೆ ಚರ್ಚೆ ನಡೆಸಲಾಗಿದೆ.ವಾಸು, ವಲಯ ಅರಣ್ಯ ಅಧಿಕಾರಿ, ಬಿ ಆರ್ ಟಿ