11ಸಿಎಚ್ಎನ್51ಹನೂರು ತಾಲೂಕಿನ ಮರೂರು ಗ್ರಾಮದ ಜಮೀನಿನಲ್ಲಿದ್ದ ರೈತನೋರ್ವನ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ತೀವ್ರ ಗಾಯಗೊಂಡಿರುವುದು. | Kannada Prabha
Image Credit: KP
ತಮ್ಮ ಮನೆ ಬಳಿ ಹಲಸಿನ ಹಣ್ಣು ತಿನ್ನುತ್ತಿದ್ದ ಕಾಡಾನೆಯನ್ನು ಓಡಿಸಲು ಹೋದ ರೈತನ ಮೇಲೆ ಆನೆ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿರುವ ಘಟನೆಯು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮರೂರು ಗ್ರಾಮದಲ್ಲಿ ಸೋಮಾರ ನಡೆದಿದೆ.
ಹನೂರು: ತಮ್ಮ ಮನೆ ಬಳಿ ಹಲಸಿನ ಹಣ್ಣು ತಿನ್ನುತ್ತಿದ್ದ ಕಾಡಾನೆಯನ್ನು ಓಡಿಸಲು ಹೋದ ರೈತನ ಮೇಲೆ ಆನೆ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿರುವ ಘಟನೆಯು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮರೂರು ಗ್ರಾಮದಲ್ಲಿ ಸೋಮಾರ ನಡೆದಿದೆ.
ದಾಳಿಯಲ್ಲಿ ರೈತ ಅಂಕಪ್ಪ ಸ್ವಾಮಿ (75) ಅವರ ಕುತ್ತಿಗೆ ಮತ್ತು ಕೈಯ ಮೂಳೆ ಮುರಿದಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಧ್ಯಾಹ್ನ ಅಂಕಪ್ಪನವರ ಹೊಲಕ್ಕೆ ಬಂದ ಕಾಡಾನೆಯು ಹಲಸಿನ ಹಣ್ಣು ತಿನ್ನಲು ಯತ್ನಿಸಿದೆ. ಈ ವೇಳೆ ಅಂಕಪ್ಪ ಬೆದರಿಸಲು ಯತ್ನಿಸಿದ್ದಾರೆ. ಇದರಿಂದ ಕೆರಳಿದ ಆನೆ, ಅಂಕಪ್ಪರನ್ನು ಎತ್ತಿ ಬಿಸಾಡಿದೆ. ಪರಿಣಾಮ ಅವರ ಕೈ, ಕುತ್ತಿಗೆ ಮೂಳೆ ಮುರಿದಿದೆ. ತಕ್ಷಣ ರೈತನ ಕುಟುಂಬ ಅಂಕಪ್ಪರನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸೆ ಕೊಡಿಸಿ, ಮೈಸೂರಿಗೆ ವರ್ಗಾಯಿಸಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.