ಆನೆದಂತ ಚೋರರ ಸೆರೆ: 9 ದಂತ ವಶ
KannadaprabhaNewsNetwork | Published : Oct 13 2023, 12:15 AM IST
ಆನೆದಂತ ಚೋರರ ಸೆರೆ: 9 ದಂತ ವಶ
ಸಾರಾಂಶ
ಕನಕಪುರ: ಅಕ್ರಮವಾಗಿ ಆನೆ ದಂತ ಮಾರಾಟಕ್ಕೆ ಸಾಗಿಸುತ್ತಿದ್ದ 8 ಮಂದಿಯನ್ನು ಬಂಧಿಸಿ, 9 ಆನೆ ದಂತಗಳನ್ನು ಬೆಂಗಳೂರು ಅರಣ್ಯ ಸಂಚಾರ ದಳದ ವಲಯ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕನಕಪುರ: ಅಕ್ರಮವಾಗಿ ಆನೆ ದಂತ ಮಾರಾಟಕ್ಕೆ ಸಾಗಿಸುತ್ತಿದ್ದ 8 ಮಂದಿಯನ್ನು ಬಂಧಿಸಿ, 9 ಆನೆ ದಂತಗಳನ್ನು ಬೆಂಗಳೂರು ಅರಣ್ಯ ಸಂಚಾರ ದಳದ ವಲಯ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ತಮಿಳುನಾಡು ಮೂಲದ ಐಯ್ಯನ್ ಕುಟ್ಟಿ ಕುಜಂತಾಯ್ (53), ಕೃಷ್ಣಮೂರ್ತಿ ಗೋಪಾಲ್ (35), ಬೆಂಗಳೂರು ಮೂಲದ ಯು.ರತ್ನ(46), ನಾರಾಯಣಸ್ವಾಮಿ(50) ಎ.ದಿನೇಶ್(42) ಎಂ.ರವಿ(44), ಎಸ್.ಮನೋಹರ್ ಪಾಂಡೆ(61), ಆಂಧ್ರಪ್ರದೇಶದ ವೆಂಕಟೇಶ್(51) ಬಂಧಿತರು. ತಾಲೂಕಿನ ಹುಣಸನಹಳ್ಳಿ ವ್ಯಾಪ್ತಿಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿ ಅಕ್ರಮವಾಗಿ ಆನೆ ದಂತಗಳನ್ನು ಮಾರಾಟಕ್ಕೆ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಅರಣ್ಯ ಸಂಚಾರ ದಳದ ವಲಯ ಅರಣ್ಯ ಅಧಿಕಾರಿ ಹಾಗು ಸಿಬ್ಬಂದಿ ಮತ್ತು ಅರಣ್ಯ ಅಪರಾಧ ನಿಯಂತ್ರಣ ವಿಭಾಗದ ಸಿಬ್ಬಂದಿ ಹುಣಸನಹಳ್ಳಿ- ಕನಕಪುರ ರಸ್ತೆಯ ಮರಿದೇವರ ದೊಡ್ಡಿ ತಿರುವಿನಲ್ಲಿ ವಾಹನಗಳ ತಪಾಸಣೆ ಮಾಡುತ್ತಿದ್ದ ವೇಳೆ ಆರೋಪಿಗಳು ಆನೆ ದಂತಗಳೊಂದಿಗೆ ಸಿಕ್ಕಿ ಬಿದ್ದಿದ್ದಾರೆ. ಇವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.