ಪಾರಂಪರಿಕ ಶ್ರೀರಂಗಟ್ಟಣ ದಸರಾ ಉತ್ಸವದ ಜಂಬೂ ಸವಾರಿಯಲ್ಲಿ ಭಾಗಿಯಾಗಲು ಆಗಮಿಸಿದ ಆನೆಗಳಿಗೆ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಶಾಸಕರೂ ಆದ ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ತಮ್ಮ ಪತ್ನಿ ಸುಮತಿ ಅವರೊಂದಿಗೆ ವಿಶೇಷ ಪೂಜೆ ನೆರವೇರಿಸಿ ಬರಮಾಡಿಕೊಂಡರು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಾರಂಪರಿಕ ಶ್ರೀರಂಗಟ್ಟಣ ದಸರಾ ಉತ್ಸವದ ಜಂಬೂ ಸವಾರಿಯಲ್ಲಿ ಭಾಗಿಯಾಗಲು ಆಗಮಿಸಿದ ಆನೆಗಳಿಗೆ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಶಾಸಕರೂ ಆದ ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ತಮ್ಮ ಪತ್ನಿ ಸುಮತಿ ಅವರೊಂದಿಗೆ ವಿಶೇಷ ಪೂಜೆ ನೆರವೇರಿಸಿ ಬರಮಾಡಿಕೊಂಡರು.ಪಟ್ಟಣದ ಐತಿಹಾಸಿಕ ದೇವಾಲಯಕ್ಕೆ ಬುಧವಾರ ಸಂಜೆ ಆಗಮಿಸಿದ ಧನಂಜಯ, ಲಕ್ಷ್ಮೀ ಹಾಗೂ ರೂಪ ಹೆಸರಿನ ಒಟ್ಟು ಮೂರು ಗಜಪಡೆ ಆಗಮಿಸಿದಾಗ ಶ್ರೀರಂಗನಾಥಸ್ವಾಮಿ ದೇವಾಲಯದ ಇಒ ಉಮಾ, ಪ್ರಧಾನ ಅರ್ಚಕ ವಿಜಯಸಾರಥಿ ಹಾಗೂ ಪ್ರಸನ್ನ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ ಮೈಸೂರು ವಲಯ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಭುಗೌಡ, ಮಂಡ್ಯ ಡಿಸಿಎಫ್ ರಘು ಮತ್ತು ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ಅವರ ಸಮ್ಮುಖದಲ್ಲಿ ಧಾರ್ಮಿಕ ಸಂಪ್ರದಾಯ ಪದ್ದತಿಯಲ್ಲಿ ಗಂಧದ ಲೇಪನದೊಂದಿಗೆ ತಿಲಕವಿಟ್ಟು ವಿಶೇಷ ಪೂಜೆಗಳನ್ನು ನೆರವೇರಿಸಿ ಬಾಳೆ-ಬೆಲ್ಲದ ಸಿಹಿ ತಿನ್ನಲು ನೀಡಲಾಯಿತು.
ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಲ್.ದಿನೇಶ್ ಗೂಳಿಗೌಡ, ಮಂಡ್ಯ ವಿವಿ ಉಪ ಕುಲಪತಿ ಕಲ್ಪಶ್ರೀ, ತಹಸೀಲ್ದಾರ್ ಚೇತನಾ ಯಾದವ್, ಪುರಸಭಾ ಮುಖ್ಯಾಧಿಕಾರಿ ಎಂ.ರಾಜಣ್ಣ, ಎಸಿಎಫ್ ಪ್ರಶಾಂತ್, ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ.ಕುಮಾರ್, ಸಿಡಿಪಿಒ ಸಕಲೇಶ್ವರ್, ಆರ್ಎಫ್ಒ ನಾಗರಾಜು ಅವರಿಂದ ಪುಷ್ಪನಮನ ಸಲ್ಲಿಸಲಾಯಿತು.ಶ್ರೀರಂಗನಾಥಸ್ವಾಮಿ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗುರುನಾಗೇಂದ್ರ ದತ್ತ, ಶ್ರೀನಿಮಿಷಾಂಬ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಸ್.ಎನ್.ದಯಾನಂದ್, ಯುವ ಕಾಂಗ್ರೆಸ್ ಮುಖಂಡ ರಜಿನಿಕಾಂತ್, ಮುಖಂಡ ಸುರೇಶ್ ಇತರರು ಇದ್ದರು.
ಜೇನುಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಮಂಡ್ಯ: ಕೊಡಗು ಜಿಲ್ಲೆ ಭಾಗಮಂಡಲ ಜೇನು ತರಬೇತಿ ಕೇಂದ್ರದಲ್ಲಿ ನವಂಬರ್ 4 ರಿಂದ ಫೆಬ್ರವರಿ 3ರವರೆಗೆ ರೈತ ಮಕ್ಕಳಿಗೆ ಮೂರು ತಿಂಗಳ ಜೇನುಗಾರಿಕೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅ.15 ರಿಂದ 28 ರವರೆಗೆ ಆಸಕ್ತ ಅಭ್ಯರ್ಥಿಗಳು ಇಲಾಖಾ ವೆಬ್ ಸೈಟ್ ಮೂಲಕ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಅ.30 ರ ಒಳಗೆ ಅರ್ಜಿ ಕೊಡಗು ಜಿಲ್ಲೆ ತೋಟಗಾರಿಕೆ ಉಪ ನಿರ್ದೇಶಕರ ಕಚೇರಿಗೆ (ಜಿಲ್ಲಾ ಪಂಚಾಯತ್) ಸಲ್ಲಿಸಬಹುದು. ಸಂದರ್ಶನವನ್ನು ಅ.31 ರಂದು ಕೊಡಗು ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ) ಅಧ್ಯಕ್ಷತೆಯಲ್ಲಿ ತೋಟಗಾರಿಕೆ ಉಪ ನಿರ್ದೇಶಕರು ಕಚೇರಿಯಲ್ಲಿ ನಡೆಸಲಾಗುವುದು ಎಂದು ಮಂಡ್ಯ ತೋಟಗಾರಿಕೆ ಜಂಟಿ ನಿರ್ದೇಶಕರು (ಜಿಪಂ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.