ಸಾರಾಂಶ
ಏಳಿಂಜೆ ಶ್ರೀ ದೇವಿ ಯುವತಿ ಮತ್ತು ಮಹಿಳಾ ಮಂಡಳಿ, ಶ್ರೀನಿವಾಸ ಆಸ್ಪತ್ರೆ ಮುಕ್ಕದ ಸಹಯೋಗದಲ್ಲಿ ಏಳಿಂಜೆಯಲ್ಲಿ ಉಚಿತ ವೈದ್ಯಕೀಯ ಶಿಬಿರ ಮತ್ತು ಅಂಚೆ ಜನಸಂಪರ್ಕ ಅಭಿಯಾನ ನಡೆಯಿತು.
ಕನ್ನಡಪ್ರಭವಾರ್ತೆ ಮೂಲ್ಕಿ
ಸರಿಯಾದ ಸಮಯದಲ್ಲಿ ಆರೋಗ್ಯ ತಪಾಸಣೆ ಮಾಡುವುದರಿಂದ ಆರೋಗ್ಯವನ್ನು ಕಾಪಾಡಲು ಸಾಧ್ಯವಿದೆ. ಉಚಿತ ವೈದ್ಯಕೀಯ ಶಿಬಿರದ ಪ್ರಯೋಜನವನ್ನು ಜನರು ಪಡೆದುಕೊಳ್ಳಬೇಕು ಎಂದು ನಿವೃತ್ತ ಉಪ ತಹಸೀಲ್ದಾರ್ ವೈ ಯೋಗೀಶ್ ರಾವ್ ಹೇಳಿದರು.ಏಳಿಂಜೆ ಶ್ರೀ ದೇವಿ ಯುವತಿ ಮತ್ತು ಮಹಿಳಾ ಮಂಡಳಿ, ಶ್ರೀನಿವಾಸ ಆಸ್ಪತ್ರೆ ಮುಕ್ಕದ ಸಹಯೋಗದಲ್ಲಿ ಏಳಿಂಜೆಯಲ್ಲಿ ಜರುಗಿದ ಉಚಿತ ವೈದ್ಯಕೀಯ ಶಿಬಿರ ಮತ್ತು ಅಂಚೆ ಜನಸಂಪರ್ಕ ಅಭಿಯಾನದಲ್ಲಿ ಮಾತನಾಡಿದರು.
ಈ ಸಂದರ್ಭ ಮುಕ್ಕ ಶ್ರೀನಿವಾಸ ಅಸ್ಪತ್ರೆ ಮುಖ್ಯಸ್ಥ ಡಾ. ಉದಯಕುಮಾರ್, ಏಳಿಂಜೆ ದೇವಸ್ಥಾನದ ಅರ್ಚಕ ಗಣೇಶ್ ಭಟ್, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಸುಧಾಕರ ಶೆಟ್ಟಿ, ಅಂಚೆ ಇಲಾಖೆಯ ಸಹಾಯಕ ಅಂಚೆ ಅಧೀಕ್ಷಕ ಸಿ.ಪಿ ಹರೀಶ್, ಪೋಸ್ಟ್ ಮಾಸ್ಟರ್ ಮನೋಜ್ ಕುಮಾರ್, ವತ್ಸಲಾ ರಾವ್, ಜಯಲಕ್ಷ್ಮೀ, ನವಚೇತನ ಯುವಕ ಮಂಡಲದ ಕಾರ್ಯದರ್ಶಿ ಹರೀಶ್ ಶೆಟ್ಟಿ ತಾಮಣಿಗುತ್ತು ಮತ್ತಿತರರು ಉಪಸ್ಥಿತರಿದ್ದರು.ಮಹಿಳಾ ಮತ್ತು ಯುವತಿ ಮಂಡಲದ ಅಧ್ಯಕ್ಷೆ ನಿಶಿತಾ ಎಚ್ ಶೆಟ್ಟಿ ಸ್ವಾಗತಿಸಿದರು. ಉಮಾವತಿ ವಂದಿಸಿದರು. ಸವಿತಾ ನಿರೂಪಿಸಿದರು.