ನೆಲಮೂಲ ಸಂಸ್ಕೃತಿಯ ಹಬ್ಬ ಎಳ್ಳ ಅಮವಾಸ್ಯೆ: ಡಾ.ವೀರೇಶ ಬಡಿಗೇರ

| Published : Jan 13 2024, 01:37 AM IST

ಸಾರಾಂಶ

ಗುಳೇದಗುಡ್ಡ: ತಾಲೂಕಿನ ತೆಗ್ಗಿ ಗ್ರಾಮದ ಡಾ.ಚಂದ್ರಶೇಖರ ಕಾಳನ್ನವರ ಹೊಲದಲ್ಲಿ ಗುರುವಾರ ಎಳ್ಳ ಅಮವಾಸ್ಯೆ ಚರಗ ಚೆಲ್ಲುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವೀರೇಶ ಬಡಿಗೇರ ನಮ್ಮ ದೇಶಿಯ ಪರಂಪರೆ ಮತ್ತು ನೆಲಮೂಲ ಸಂಸ್ಕೃತಿಯ ಹಬ್ಬವಾದ ಎಳ್ಳ ಅಮವಾಸ್ಯೆಯನ್ನು ರೈತಾಪಿ ವರ್ಗದ ಜನ ಸಡಗರ, ಸಂಭ್ರಮದಲ್ಲಿ ಹಿಂದಿನಿಂದಲೂ ಆಚರಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಇದ್ದರು. ಪವಿತ್ರಾ ಜಕ್ಕಪ್ಪನವರ್ ಮತ್ತು ಬಸವರಾಜ ಸಿಂದಗಿಮಠ ಅವರ ತಂಡದಿಂದ ಜಾನಪದ ಗೀತಗಾಯನ ಚರಗ ಸಂಭ್ರಮಕ್ಕೆ ಮೆರುಗೆ ತಂದಿತು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ನಮ್ಮ ದೇಶಿಯ ಪರಂಪರೆ ಮತ್ತು ನೆಲಮೂಲ ಸಂಸ್ಕೃತಿಯ ಹಬ್ಬವಾದ ಎಳ್ಳ ಅಮವಾಸ್ಯೆಯನ್ನು ರೈತಾಪಿ ವರ್ಗದ ಜನ ಸಡಗರ, ಸಂಭ್ರಮದಲ್ಲಿ ಹಿಂದಿನಿಂದಲೂ ಆಚರಿಸಿಕೊಂಡು ಬಂದಿದ್ದಾರೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವೀರೇಶ ಬಡಿಗೇರ ಹೇಳಿದರು.

ತಾಲೂಕಿನ ತೆಗ್ಗಿ ಗ್ರಾಮದ ಡಾ.ಚಂದ್ರಶೇಖರ ಕಾಳನ್ನವರ ಹೊಲದಲ್ಲಿ ಗುರುವಾರ ಎಳ್ಳ ಅಮವಾಸ್ಯೆ ಚರಗ ಚೆಲ್ಲುವ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಹಿರಿಯರು ನಡೆಸಿಕೊಂಡು ಬಂದಿರುವ ಸಂಪ್ರದಾಯವನ್ನು ನಾಡಿನ ರೈತ ಕುಟುಂಬಗಳು ಇಂದಿಗೂ ಆಚರಣೆಗಳ ಮೂಲಕ ಉಳಿಸಿ ಬೆಳೆಸಿಕೊಂಡು ಬಂದಿವೆ ಎಂದರು. ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಮಾತನಾಡಿದರು.

ಪವಿತ್ರಾ ಜಕ್ಕಪ್ಪನವರ್ ಮತ್ತು ಬಸವರಾಜ ಸಿಂದಗಿಮಠ ಅವರ ತಂಡದಿಂದ ಜಾನಪದ ಗೀತಗಾಯನ ಚರಗ ಸಂಭ್ರಮಕ್ಕೆ ಮೆರುಗೆ ತಂದಿತು.

ಗುಳೇದಗುಡ್ಡ ತಾಲೂಕ ಕಸಾಪ ಅಧ್ಯಕ್ಷ ಡಾ.ಎಚ್‌.ಎಸ್.ಘಂಟಿ, ಡಾ.ಸಿ.ಎಂ.ಜೋಶಿ, ವಕೀಲರಾದ ವೀರಯ್ಯ ಮಣ್ಣೂರಮಠ, ಡಾ.ಸಂತೋಷ ಕಾಳನ್ನವರ, ಸಂಗಮೇಶ ಬಡಿಗೇರ, ವಿಠ್ಠಲ ಕಳಸಾ, ಈರಣ್ಣ ದೊಡಮನಿ, ಡಾ.ಸಂತೋಷ ಕಾಳನ್ನವರ್, ಯಲ್ಲಪ್ಪ ಶೆಡ್ಲಗೇರಿ, ಡಾ.ಜಿ.ಜಿ.ಹಿರೇಮಠ, ಡಾ.ಅರುಣಕುಮಾರ ಗಾಳಿ, ಸಂಗಮೇಶ ಬ್ಯಾಳಿ, ಮನೋಹರ ಪೂಜಾರ, ಚಿದಾನಂದಸಾ ಕಾಟವಾ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ ನಿರೂಪಿಸಿದರು.