ರೈತರಿಂದ ಸಂಭ್ರಮದ ಎಳ್ಳು ಅಮಾವಾಸ್ಯೆ

| Published : Jan 12 2024, 01:46 AM IST

ಸಾರಾಂಶ

ಗಂಗಾವತಿ, ಕುಕನೂರು ಹಾಗೂ ಹನುಮಸಾಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ರೈತರು ಎಳ್ಳು ಅಮಾವಾಸ್ಯೆಯನ್ನು ಸಂಭ್ರಮದಿಂದ ಆಚರಿಸಿದರು. ಭೂತಾಯಿಗೆ ಚರಗ ಚೆಲ್ಲಿ, ಪೂಜೆ ಸಲ್ಲಿಸಿ, ಬಂಧುಗಳ ಜತೆಗೆ ಹೊಲದಲ್ಲಿ ವಿಶೇಷ ಭೋಜನ ಸೇವಿಸಿದರು.

ಕುಕನೂರು: ತಾಲೂಕಿನಾದ್ಯಂತ ಎಳ್ಳು ಅಮಾವಾಸ್ಯೆ ದಿನ ಗುರುವಾರ ರೈತರು ಭೂ ತಾಯಿಗೆ ಪೂಜೆ ಸಲ್ಲಿಸಿ ತುಂಡಿ ತುಂಬಿ ಚರಗಾ ಚೆಲ್ಲಿದರು.ಜಮೀನಿಗೆ ಕುಟುಂಬ ಸಮೇತ ತೆರಳಿ ಜಮೀನಿನ ಬೆಳೆಗೆ ಪೂಜೆ ಸಲ್ಲಿಸಿದರು. ವಿಶೇಷವಾಗಿ ಕೆಲವು ಕಡೆ ಜಮೀನಿನಲ್ಲಿರುವ ಬನ್ನಿಗಿಡಕ್ಕೆ ಸೀರೆ ಉಡಿಸಿ, ಅಲಂಕರಿಸಿ ಪೂಜೆ ಸಲ್ಲಿಸಿದರು. ಹಸುರಿನಿಂದ ಮೈದುಂಬಿಕೊಂಡಿದ್ದ ಜಮೀನಿನಲ್ಲಿ ಪೈರು ಚೆನ್ನಾಗಿ ಬರಲಿ ಎಂದು ಬೇಡಿಕೊಂಡರು. ಜಮೀನಿನಲ್ಲಿ ನೈವೇದ್ಯವನ್ನು ಚಳ್ಳಬಂರಿಗೋ ಹುಲ್ಲಿಗ್ಯೋ ಎಂದು ಎರಚಿ ಭೂ ತಾಯಿಗೆ ನೈವೇದ್ಯ ಸಮರ್ಪಿಸಿದರು. ಕುಟುಂಬ ಸಮೇತ ಭೋಜನ: ಎಳ್ಳು ಅಮಾವಾಸ್ಯೆ ದಿನ ರೈತರು ಸಂಬಂಧಿಕರು, ಸ್ನೇಹಿತರು, ಆತ್ಮೀಯರ ಜತೆ ಭೋಜನ ಸವಿದರು. ಎಳ್ಳು, ಶೇಂಗಾ, ಹುರುಣದ ಹೋಳಿಗೆ, ರೊಟ್ಟಿ, ಕಾಳು ಪಲ್ಯ ಹೀಗೆ ತರಹೇವಾರಿ ಸಿಹಿ ಖಾದ್ಯಗಳನ್ನು ಒಂದೆಡೆ ಕುಳಿತು ಭೋಜನ ಸವಿದರು.

ವಾಹನ, ಎತ್ತಿನ ಬಂಡಿ ಅಲಂಕಾರ: ಎಳ್ಳು ಅಮಾವಾಸ್ಯೆ ರೈತ ವರ್ಗದ ಹಬ್ಬ. ಎತ್ತುಗಳ ಮೈತೊಳೆದು, ಪೂಜಿಸಿ, ಬಂಡಿಯನ್ನು ಅಲಂಕರಿಸಿ ಜಮೀನಿಗೆ ಎತ್ತಿನ ಬಂಡಿಯಲ್ಲಿ ತೆರಳಿದರು. ಟ್ರ್ಯಾಕ್ಟರ್ ಉಳ್ಳವರು ಟ್ರ್ಯಾಕ್ಟರ್‌ನಲ್ಲಿ ತೆರಳಿ ಪೂಜೆ ಸಲ್ಲಿಸಿದರು. ಬರದ ನಡುವೆಯೂ ಬತ್ತದ ಉತ್ಸಾಹ: ಈ ವರ್ಷ ಬರಗಾಲ ಇದ್ದರೂ ಜಮೀನಲ್ಲಿರುವ ಅಲ್ಪ ಸ್ವಲ್ಪ ಬೆಳೆಗೆ ರೈತ ವರ್ಗದವರು ತೆರಳಿ ಪೂಜೆ ಸಲ್ಲಿಸಿದರು.

ಗಂಗಾವತಿಯಲ್ಲಿ ಭೂಮಿ ತಾಯಿಗೆ ವಿಶೇಷ ಪೂಜೆ: ಏಳ್ಳು ಅಮಾವಾಸ್ಯ ನಿಮಿತ್ತ ರೈತರು ತಮ್ಮ ತಮ್ಮ ಹೊಲಗಳಲ್ಲಿ ಭೂಮಿತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ಗ್ರಾಮೀಣ ಪ್ರದೇಶದಲ್ಲಿ ಈ ಎಳ್ಳು ಅಮಾವಾಸ್ಯೆ ವಿಶೇಷವಾಗಿ ಆಚರಿಸಲಾಗುತ್ತದೆ. ವಿವಿಧ ಸಿಹಿ ಪದಾರ್ಥಗಳನ್ನು ಸಿದ್ಧಪಡಿಸಿಕೊಂಡು ಬೆಳಗ್ಗೆ ಹೊಲ-ಗದ್ದೆಗಳಿಗೆ ತೆರಳಿ ಭೂಮಿ ತಾಯಿಗೆ ಸಮರ್ಪಿಸಿದರು.ತಾಲೂಕಿನ ನವಲಿ, ಕರಡೋಣಿ, ಸೋಮನಾಳ, ಮೈಲಾಪುರ ಗ್ರಾಮಗಳು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೈತರು ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರು ಸಹ ವಿವಿಧ ರುಚಿಕರವಾಗಿರುವ ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ ಮತ್ತು ರೊಟ್ಟಿಗಳನ್ನು ಮತ್ತು ಪದಾರ್ಥಗಳನ್ನು ರೈತರಿಗೆ ವಿತರಿಸಿ ಸಂಭ್ರಮಿಸಿದರು.

ಹನುಮಸಾಗರದಲ್ಲಿ ಸಂಭ್ರಮದ ಎಳ್ಳುಅಮಾವಾಸ್ಯೆ: ಗ್ರಾಮ ಸೇರಿದಂತೆ ನಾನಾ ಗ್ರಾಮಗಳಲ್ಲಿ ಎಳ್ಳು ಅಮವಾಸ್ಯೆ ನಿಮಿತ್ತ ಗುರುವಾರ ರೈತರು ಚರಗ ಚೆಲ್ಲುವ ಸಂಪ್ರದಾಯ ನೆರವೇರಿಸಿದರು.

ರೈತರ ಕುಟುಂಬಸ್ಥರು ತಮಗೆ ಆತ್ಮೀಯರನ್ನು ಕರೆದುಕೊಂಡು ಹೋಗಿ, ಮನೆಯಿಂದ ಬಂದಿದ್ದ ಬಿಳಿಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ನಾನಾ ರೀತಿಯ ಪಲ್ಯ, ಶೇಂಗಾ, ಎಳ್ಳು ಚಟ್ನಿ, ಶೇಂಗಾ ಹೋಳಿಗೆ, ಎಳ್ಳು ಮತ್ತಿತರ ಖಾದ್ಯಗಳನ್ನು ಸವಿದರು.ವಸತಿ ನಿಲಯದ ಆಚರಣೆ: ಇನ್ನೂ ಕಸ್ತೂರಬಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಹಾಗೂ ಬಾಲಕಿಯರ ವಸತಿ ನಿಲಯದಲ್ಲಿ ಎಲ್ಲ ಅಮಾವಾಸ್ಯೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶಾಲೆಯಲ್ಲಿ ಎಲ್ಲಾ ರೀತಿಯ ಖಾದ್ಯಗಳನ್ನು ಮಾಡಲಾಗಿದೆ. ಶಾಲೆಯ ಹಿಂದಿರುವ ತಮ್ಮ ಉದ್ಯಾನದಲ್ಲಿ ಎಲ್ಲಾ ಮಕ್ಕಳು, ಶಿಕ್ಷಕರು ಸೇವಿಸು ಸಿಹಿ ಖಾದ್ಯವನ್ನು ಸೇವಿಸಿದರು.

ಇದೇ ವೇಳೆ ವಸತಿ ನಿಲಯದ ಅಡುಗೆ ಉಸ್ತುವಾರಿಯನ್ನು ವಹಿಸಿಕೊಮಡಿರುವ ನಿಸರ್ಗ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಶ್ರೀಕಾಂತ ಗಡಾದ, ಮುಖ್ಯಶಿಕ್ಷಕಿ ಭಾರತಿ ದೇಸಾಯಿ, ನಿಲಯ ಮೇಲ್ವೀಚಾರಕಿ ರುಬಿಯಾ ಬೇಗಂ, ಸುನಂದಾ ಸಿನ್ನೂರ, ಶಿಕ್ಷಕಿಯರಾದ ಸಾವಿತ್ರಿ ನಿಟ್ಟಾಲಿ, ಶಕುಂತಲಾ ಚಿನಿವಾಲರ, ಜ್ಯೋತಿ ಬಾಳಿಮಠ, ಸಾವಿತ್ರಿ ಲಕ್ಷ್ಮಿ ರಾಜೂರ, ದಾರ. ಜ್ಯೋತಿ ಉಪ್ಪಾರ, ಹುಲಿಗೆಮ್ಮ ಎಚ್‌. ಇಬ್ಬರು.