ಅಂಬಿಗರ ಚೌಡಯ್ಯನ ತತ್ವಾದರ್ಶ ಮೈಗೂಡಿಸಿಕೊಳ್ಳಿ: ಚೌಡಯ್ಯ ಸ್ವಾಮೀಜಿ

| Published : Feb 24 2024, 02:33 AM IST

ಅಂಬಿಗರ ಚೌಡಯ್ಯನ ತತ್ವಾದರ್ಶ ಮೈಗೂಡಿಸಿಕೊಳ್ಳಿ: ಚೌಡಯ್ಯ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ದಾರ್ಶನಿಕರಾದ ನಿಜಶರಣ ಅಂಬಿಗರ ಚೌಡಯ್ಯನವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡರೆ ಸಮಾಜದಲ್ಲಿ ಶಾಂತಿ,ನೆಮ್ಮದಿ ನೆಲೆಸಲು ಸಾಧ್ಯವೆಂದು ನರಸಿಪುರದ ಅಂಬಿಗರ ಚೌಡಯ್ಯ ಗುರುಪೀಠದ ಪೀಠಾಧ್ಯಕ್ಷ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ದಾರ್ಶನಿಕರಾದ ನಿಜಶರಣ ಅಂಬಿಗರ ಚೌಡಯ್ಯನವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡರೆ ಸಮಾಜದಲ್ಲಿ ಶಾಂತಿ,ನೆಮ್ಮದಿ ನೆಲೆಸಲು ಸಾಧ್ಯವೆಂದು ನರಸಿಪುರದ ಅಂಬಿಗರ ಚೌಡಯ್ಯ ಗುರುಪೀಠದ ಪೀಠಾಧ್ಯಕ್ಷ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಹೇಳಿದರು.

ನಗರದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಧಾರ್ಮಿಕ ಕಾರ್ಯಕ್ರ ಉದ್ಘಾಟಿಸಿ ಮಾತನಾಡಿದ ಅವರು, ೧೨ನೇ ಶತಮಾನದ ಬಸವಣ್ಣನವರ ಅನುಯಾಯಿಗಳಿಗಳಲ್ಲಿ ಅಂಬಿಗರ ಚೌಡಯ್ಯನವರು ಪ್ರಮುಖರು. ಅವರು ನೇರ, ನಿಷ್ಠುರ, ತರ್ಕಬದ್ಧ ವಚನಗಳಿಂದ ಸಮಾಜದ ಅಂಕು-ಡೊಂಕು ತಿದ್ದುವಲ್ಲಿ ಶ್ರಮಿಸಿದರು ಎಂದು ಹೇಳಿದರು.

ರಬಕವಿಯ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀ ಮಾತನಾಡಿ, ಸುಮಾರು ೩೩೪ ವಚನಗಳಲ್ಲಿ ಒಂದೊಂದು ವಚನವೂ ಪಿಎಚ್‌ಡಿಗೆ ಸಮಾನ. ಇದು ಸಮಾಜದಲ್ಲಿ ಸಣ್ಣ ಸಣ್ಣ ಸಮುದಾಯಗಳು ಒಗ್ಗೂಡುವ ಅಗತ್ಯತೆ ತುಂಬಾ ಅವಶ್ಯಕವಾಗಿದೆ. ಎಲ್ಲಾ ಸಮುದಾಯಗಳು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾದಾಗ ಮಾತ್ರ ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯವೆಂದರು.

ಶರಣ ಐ.ಆರ್. ಮಠಪತಿ ಮಾತನಾಡಿ, ಗಣಾಚಾರಿಯಾಗಿ ಲಿಂಗಾಯತ ಪಂಚತತ್ವಗಳಲ್ಲಿ ನಿಜ ತತ್ವದ ಅರಿವು ಮೂಡಿಸುವುದರೊಂದಿಗೆ ನೇರ ಮಾತುಗಳೊಂದಿಗೆ ಚೌಡಯ್ಯನವರು ಆದರ್ಶವಾಗಿದ್ದಾರೆ. ಬಸವ ತತ್ವದಲ್ಲಿ ಸಾಂಸ್ಕೃತಿಕ ಹಾಗೂ ಲಿಂಗಾಯತ ನಾಯಕರಾಗಿರುವ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗುತ್ತಿರುವುದು ಉತ್ತಮ ಕೆಲಸ ಎಂದರು.

ಶಿರೂರಿನ ಬಸವಲಿಂಗ ಮಹಾಸ್ವಾಮೀಜಿ ಮಾತನಾಡಿದರು. ಡಾ.ಶಂಕರ ಕೋಳಿ ಉಪನ್ಯಾಸ ನೀಡಿದರು. 7-8 ಪ್ರದೇಶಗಳಿಂದ ಆಗಮಿಸಿದ್ದ ಶರಣರ ಸಂಗಮವೇ ನೆರೆದಿದ್ದು ವಿಶೇಷವಾಗಿತ್ತು.

ಮಲ್ಲಪ್ಪ ಗಸ್ತಿ, ಸದಾಶಿವ ಪರೀಠ, ಶ್ರೀಶೈಲ ದಭಾಡಿ, ಮಲ್ಲಿಕಾರ್ಜುನ ತುಂಗಳ, ಚಿನ್ನು ಅಂಬಿ, ಪ್ರಭು ಗಸ್ತಿ, ಭೀಮಶಿ ಹುನ್ನೂರ, ಹಣಮಂತ ತಳವಾರ, ಪ್ರಕಾಶ ದೇಸಾಯಿ, ಲಕ್ಷ್ಮಣ ತಳವಾರ, ಡಾ.ಲಕ್ಕಪ್ಪ ಕುಸಬಿ, ಶಿವಗೊಂಡ ನಂದಗಾಂವ, ಕಾಡಪ್ಪ ಹುಲಗಬಾಳಿ, ಅಯ್ಯಪ್ಪ ಮೋಪಗಾರ ಸೇರಿದಂತೆ ಅನೇಕರಿದ್ದರು.