ಗಾಂಧಿಯ ತತ್ವಾದರ್ಶ ಮೈಗೂಡಿಸಿಕೊಳ್ಳಿ: ಉಮಾಶ್ರೀ

| Published : Oct 04 2024, 01:16 AM IST

ಸಾರಾಂಶ

ರಾಷ್ಟ್ರಪಿತ ಮಹಾತ್ಮಾ ಗಾಂಧಿ ಜನ್ಮ ದಿನದಂದು ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಭಿನ್ನವಾಗಿ ಆಚರಣೆ ಮಾಡಿತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ರಾಷ್ಟ್ರಪಿತ ಮಹಾತ್ಮಾ ಗಾಂಧಿ ಜನ್ಮ ದಿನದಂದು ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಭಿನ್ನವಾಗಿ ಆಚರಣೆ ಮಾಡಿತು.

ಮಹಾತ್ಮಾ ಗಾಂಧಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಎಐಸಿಸಿ ಅಧಿವೇಶನಕ್ಕೆ ೧೦೦ ವರ್ಷ ಸಂದ ಹಿನ್ನೆಲೆಯಲ್ಲಿ ಗಾಂಧಿ ಜಯಂತಿಯನ್ನು ಕಾಂಗ್ರೆಸ್ ಪ್ರತ್ಯೇಕ ಬೃಹತ್ ಪಾದಯಾತ್ರೆ ನಡೆಸುವ ಮೂಲಕ ಆಚರಣೆ ಮಾಡಿತು.ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಮಾಜಿ ಸಚಿವೆ, ವಿಧಾನಪರಿಷತ್ ಸದಸ್ಯೆ ಉಮಾಶ್ರೀ ಹಾಗೂ ಸಿದ್ದು ಕೊಣ್ಣೂರ ನೇತೃತ್ವದಲ್ಲಿ ನಗರದ ಗಾಂಧಿ ಪ್ರತಿಮೆಗೆ ಹಾರ ಹಾಕುವ ಮೂಲಕ ಕಾಂಗ್ರೆಸ್ ಪಕ್ಷದ ಕಚೇರಿಯವರೆಗೆ ಗಾಂಧಿ ನಡಿಗೆ ಕಾರ್ಯಕ್ರಮ ಜರುಗಿತು.ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಮಾತನಾಡಿ, ಇದೊಂದು ಐತಿಹಾಸಿಕ ದಿನವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ನಾಯಕತ್ವ ವಹಿಸಿದವರು ಮಹಾತ್ಮಾ ಗಾಂಧಿ. ಬೆಳಗಾವಿಯಲ್ಲಿ ಎಐಸಿಸಿ ಅಧಿವೇಶನಕ್ಕೆ ಗಾಂಧಿ ಅಧ್ಯಕ್ಷತೆಯ ವಹಿಸಿದ್ದರು. ಈ ಅಧಿವೇಶನಕ್ಕೆ ೧೦೦ ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಮಹಾತ್ಮಾ ಗಾಂಧಿಯ ತತ್ವಾದರ್ಶ ಹಾಗೂ ಆಚಾರ-ವಿಚಾರಗಳನ್ನು ಯುವ ಜನರು ಮೈಗೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ, ಕಾಂಗ್ರೆಸ್‌ಗೆ ದೊಡ್ಡ ಇತಿಹಾಸವಿದೆ. ಗಾಂಧೀಜಿ ನಾಯಕತ್ವದಡಿ ಶತಮಾನೋತ್ಸವ ಸಂಭ್ರಮ ನಿಜಕ್ಕೂ ಶ್ಲಾಘನೀಯ ಎಂದರು.ಮಲ್ಲಪ್ಪ ಸಿಂಗಾಡಿ, ಲಕ್ಷ್ಮಣ ದೇಸಾರಟ್ಟಿ, ರಾಜು ಭದ್ರನ್ನವರ, ಬಸವರಾಜ ಕೊಕಟನೂರ, ಬರಮು ಉಳ್ಳಾಗಡ್ಡಿ, ಸುರೇಶ ಪಾಟೀಲ, ಶೇಖರ ಹಕ್ಕಲದಡ್ಡಿ, ನೀಲೇಶ ದೇಸಾಯಿ, ಇರ್ಷಾದ್‌ ಮೋಮಿನ್‌, ಮುಜಾಫರ್ ಮುಲ್ಲಾ, ವೆಂಕನಗೌಡ ಪಾಟೀಲ, ಹಾರೂನ ಬೇವೂರ, ರಾಹುಲ್ ಕಲಾಲ, ಸಂಗಮೇಶ ಮಡಿವಾಳರ, ಶಂಕರ ಕೆಸರಗೊಪ್ಪ, ಫಜಲ್ ಅತ್ರೂಟ, ರೇಣುಕಾ ಮಡ್ಡಿಮನಿ, ಕಿರಣ ಕರಲಟ್ಟಿ, ನಾರಾಯಣ ನಿಕ್ಕಂ, ಅನೀಲ ಬೀಳಗಿ, ಪಿಂಟು ಕುಂಬಾರ, ರಾಜೇಶ ನಾಗರಾಜ, ಮಲ್ಲಪ್ಪ ಹಿಪ್ಪರಗಿ, ಅಶೋಕ ರೆಡ್ಡಿ, ಗಜಾನನ ಕರಿಗಾರ ಸೇರಿದಂತೆ ಅನೇಕರಿದ್ದರು.