ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ: ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ

| Published : Feb 20 2025, 12:46 AM IST

ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ: ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ಕಂಪ್ಯೂಟರ್ ಯುಗದಲ್ಲಿ ನಾವು ಬಹಳ ವೇಗ ಮುನ್ನಡೆಯುತ್ತಿದ್ದೇವೆ. ಕಳೆದ 2 ದಶಕಗಳಿಂದ ಕಂಪ್ಯೂಟರ್‌ನಿಂದ ಹಲವು ಹೊಸ ಬಗೆಯ ಅವಿಸ್ಕಾರಗಳನ್ನು ನೋಡುತ್ತಾ ನಮ್ಮ ಬದುಕು ಸಹ ಸ್ಮಾರ್ಟ್ ಆಗಿ ಬದಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಮಾನವೀಯ ಮೌಲ್ಯಗಳನ್ನು ಅಳವಡಿಸಿ ಕೊಂಡಾಗ ಮಾತ್ರ ಸಮಾಜ ಪರಿವರ್ತನೆಯಾಗಲು ಸಾಧ್ಯ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅಭಿಪ್ರಾಯಪಟ್ಟರು.

ಕ್ರೆಂಬಿಡ್ಜ್ ಪಬ್ಲಿಕ್ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಮಾನವೀಯ ಮೌಲ್ಯಗಳು ಮರೆಯಾಗುತ್ತಿದೆ. ಸಮಾಜ ತನ್ನ ದಿಕ್ಕನೆ ಬದಲಿಸಿಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ಕಂಪ್ಯೂಟರ್ ಯುಗದಲ್ಲಿ ನಾವು ಬಹಳ ವೇಗ ಮುನ್ನಡೆಯುತ್ತಿದ್ದೇವೆ. ಕಳೆದ 2 ದಶಕಗಳಿಂದ ಕಂಪ್ಯೂಟರ್‌ನಿಂದ ಹಲವು ಹೊಸ ಬಗೆಯ ಅವಿಸ್ಕಾರಗಳನ್ನು ನೋಡುತ್ತಾ ನಮ್ಮ ಬದುಕು ಸಹ ಸ್ಮಾರ್ಟ್ ಆಗಿ ಬದಲಾಗುತ್ತಿದೆ ಎಂದರು.

ಪ್ರಪಂಚದ ಯಾವುದೇ ದೇಶಕ್ಕಿಂತಲು ನಮ್ಮ ಭಾರತ ತನ್ನ ಅಸ್ತಿತ್ವ ಉಳಿಸಿಕೊಂಡಿದೆ ಎನ್ನುವುದಕ್ಕೆ ನಮ್ಮಲ್ಲಿನ ವಿದ್ಯಾರ್ಥಿಗಳು ಸಾಕ್ಷಿಯಾಗಿದ್ದಾರೆ. ನಮ್ಮ ವಿದ್ಯಾರ್ಥಿಗಳಿಗೆ ಇರುವ ಸಂಸ್ಕೃತಿ ಮತ್ತು ಜ್ಞಾನ ಯಾವ ದೇಶದ ವಿದ್ಯಾರ್ಥಿಗಳಿಗೂ ಇಲ್ಲ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದರು.

ನಮ್ಮ ದೇಶದಲ್ಲೂ ಬಹಳಷ್ಟು ಪ್ರತಿಭೆಗಳಿದ್ದು ಅವರಿಗೆ ಉತ್ತಮ ಮಾರ್ಗದರ್ಶನ ನೀಡುವ ಅಗತ್ಯವಿದೆ. ನೋಬಲ್ ಪಾರಿತೋಷಕ ಪಡೆದಿರುವವರ ಜೀವನ ಚರಿತ್ರೆಗಳನ್ನು ವಿದ್ಯಾರ್ಥಿಗಳು ಓದಬೇಕು. ಅವರ ಸಾಧನೆ ತಿಳಿದು ನಡೆಯುವಂತೆ ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಂ.ಉದಯ್ ಮಾತನಾಡಿ, ಓದು ಬರಹದ ಜೊತೆಗೆ ಉತ್ತಮ ಹವ್ಯಾಸವನ್ನು ಸಹ ರೂಡಿಸಿಕೊಳ್ಳುವುದು ಒಳ್ಳೆಯ ಬೆಳವಣಿಗೆ. ಇದರಿಂದ ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದರು.

ಕೆಲವು ವಿದ್ಯಾರ್ಥಿಗಳು ಮೊಬೈಲ್ ಟಿವಿಗೆ ಅಂಟಿಕೊಂಡಿರುತ್ತಾರೆ. ಓದು ಬರಹದ ಜತೆಗೆ ಉತ್ತಮ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೆ ಪೋಷಕರು ಪ್ರೋತ್ಸಹಿಸಬೇಕುಯ ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೆ ಆಸ್ತಿ ಮಾಡಬೇಕು ಎಂದರು.

ಈ ವೇಳೆ ನಿವೃತ್ತ ಬಿಇಒ ಸಿ.ಎಚ್. ಕಾಳಿರಯ್ಯ ಮತ್ತು ಮಕ್ಕಳ ತಜ್ಞ ಡಾ.ಮಹೇಶ್ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ನ್ಯಾಯಾಧೀಶ ಸಿ.ಜಿ.ಹುನಗುಂದ, ಮುಕ್ತ ವಿವಿ ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಎಸ್.ಜಾನ್ವಿ, ಜಿಪಂ ಮಾಜಿ ಸದಸ್ಯ ಎ.ಎಸ್.ರಾಜೀವ್, ಸಂಸ್ಥೆ ಅಧ್ಯಕ್ಷ ಎ.ಟಿ.ಬಲ್ಲೇಗೌಡ, ಕಾರ್ಯದರ್ಶಿ ನಾಗರತ್ನ ಬಲ್ಲೇಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಬಿ. ದಿವ್ಯತೇಜ್, ನಿರ್ದೇಶಕಿ ಎಂ.ಶಾಶ್ವತ ದಿವ್ಯತೇಜ್, ನಿವೃತ್ತ ಕೃಷಿ ಅಧಿಕಾರಿ ಎಚ್.ಬಿ.ರಾಮಕೃಷ್ಣ, ನವೋದಯ ತರಬೇತಿ ಕೇಂದ್ರದ ಎಚ್.ಆರ್.ಕನ್ನಿಕಾ, ಪ್ರಭಾರ ಬಿಇಒ ಟಿ. ದೇವರಾಜು, ಇಸಿಒ ಲೋಕೇಶ್, ವಕೀಲ ಎಚ್.ಆರ್ ಮಂಜುನಾಥ್ ಸೇರಿದಂತೆ ಮತ್ತಿತರಿದ್ದರು.