ಭಗೀರಥ ಮಹರ್ಷಿಗಳ ಆದರ್ಶಗಳ ಅಳವಡಿಸಿಕೊಳ್ಳಿ: ಡಾ. ಸುಶೀಲಾ

| Published : May 15 2024, 01:37 AM IST

ಭಗೀರಥ ಮಹರ್ಷಿಗಳ ಆದರ್ಶಗಳ ಅಳವಡಿಸಿಕೊಳ್ಳಿ: ಡಾ. ಸುಶೀಲಾ
Share this Article
  • FB
  • TW
  • Linkdin
  • Email

ಸಾರಾಂಶ

ಯಾದಗಿರಿ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ಭಗೀರಥ ಮಹರ್ಷಿಗಳ ಜಯಂತಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಕಠಿಣ ಮತ್ತು ಅವಿರತ ಪ್ರಯತ್ನದ ಮೂಲಕ ಜೀವನದಲ್ಲಿ ಉತ್ತಮ ಗುರಿ ಹೊಂದಲು ಸಾಧ್ಯ ಎನ್ನುವುದಕ್ಕೆ ಭಗೀರಥ ಮಹರ್ಷಿಗಳು ನಿದರ್ಶನವಾಗಿದ್ದಾರೆ. ಇವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸೋಣ ಎಂದು ಜಿಲ್ಲಾಧಿಕಾರಿ ಡಾ. ಸುಶೀಲಾ ಹೇಳಿದರು.

ಲೋಕಸಭಾ ಚುನಾವಣೆ ನಿಮಿತ್ತ ನೀತಿ ಸಂಹಿತೆ ಜಾರಿ ಹಿನ್ನೆಲೆ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸರಳವಾಗಿ ಭಗೀರಥ ಮಹರ್ಷಿ ಜಯಂತಿ ಆಚರಿಸಿ ಅವರು ಮಾತನಾಡಿದರು.

ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತ ಪ್ರಕಾಶ ಕುದರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕಟ್ಟಿಮನಿ, ಸುಭಾಷ್ ಚಂದ್ರ ಕೊಟಿಗೇರ, ವಿಶ್ವನಾಥ್ ಗೂಡೂರ್, ಶ್ರೀಶೈಲ ಬಂದಳ್ಳಿ, ಬಸವರಾಜ್ ಕೊಡಲಿ, ರಾಘವೇಂದ್ರ ಐಕೊರ್, ಮಹೇಶ್ ಉಪ್ಪಾರ, ಸತೀಶ್ ಕಟ್ಟಿಮನಿ ಸೇರಿದಂತೆ ಇನ್ನಿತರ ಸಿಬ್ಬಂದಿ ವರ್ಗದವರು ಇದ್ದರು.