ಮಹಾನ್ ವ್ಯಕ್ತಿಗಳ ಆದರ್ಶ ಅಳವಡಿಸಿಕೊಳ್ಳಿ: ಪ್ರೊ.ಚಿತ್ತಯ್ಯ

| Published : Feb 22 2024, 01:53 AM IST

ಮಹಾನ್ ವ್ಯಕ್ತಿಗಳ ಆದರ್ಶ ಅಳವಡಿಸಿಕೊಳ್ಳಿ: ಪ್ರೊ.ಚಿತ್ತಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ವಿಶ್ವವಿದ್ಯಾನಿಲಯ ಸರ್ವಜ್ಞ ಅಧ್ಯಯನ ಕೇಂದ್ರದ ವತಿಯಿಂದ ನಡೆದ ಸರ್ವಜ್ಞ ತ್ರಿಪದಿಗಳ ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಕನ್ನಡ ಪ್ರಭ ವಾರ್ತೆ ದಾವಣಗೆರೆ

ರಾಜ್ಯದ ಹಲವು ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಪೀಠಗಳು ಕೇವಲ ನೆಪಮಾತ್ರಕ್ಕೆ ಇದ್ದು ಯಾವುದೇ ಕಾರ್ಯಗಳು ನಿರ್ವಹಿಸುತ್ತಿಲ್ಲ ಎಂಬುದು ವಿಷಾದನೀಯ ಎಂದು ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಪ್ರೊ.ಚಿತ್ತಯ್ಯ ಪೂಜಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ದಾವಣಗೆರೆ ವಿಶ್ವವಿದ್ಯಾನಿಲಯ ಸರ್ವಜ್ಞ ಅಧ್ಯಯನ ಕೇಂದ್ರದ ವತಿಯಿಂದ ನಡೆದ ಸರ್ವಜ್ಞ ತ್ರಿಪದಿಗಳ ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಮಹಾನ್ ವ್ಯಕ್ತಿಗಳ ಬದುಕು ಅವರ ಸಾಧನೆಯನ್ನು ಜನಸಾಮಾನ್ಯರು ಹಾಗೂ ವಿದ್ಯಾರ್ಥಿಗಳಿಗೆ ಅರಿವು ಮುಡಿಸಿ ಅವರ ಆಶಯದಂತೆ ಮಾರ್ಗದರ್ಶನ ಮಾಡುವ ನಿಟ್ಟಿನಲ್ಲಿ ಅಧ್ಯಯನ ಪೀಠಗಳು ಕಾರ್ಯನಿವಹಿಸಬೇಕಿದೆ ಎಂದರು.

ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ಸಮಯ ಹಾಗೂ ಅರೋಗ್ಯವನ್ನು ಕೆಡಿಸಿಕೋಳುವ ಬದಲಾಗಿ ಇಂತಹ ವಿಚಾರವಂತರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ಕುಲಪತಿ ಪೊ.ಬಿ.ಡಿ.ಕುಂಬಾರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತಾ, ಬಡವರ, ದಿನದಲಿತರ ಉದ್ದಾರಕ್ಕೆ ಶ್ರಮಿಸಿ ಸಾಮಾನ್ಯ ಜನರಿಗು ಕೊಡ ಬದುಕಿನ ಸಾರ್ಥಕತೆಯನ್ನು ಬೊದಿಸಿದ ಸರ್ವಜ್ಞರಿಗೂ ಬುದ್ದ, ಬಸವ, ಅಂಬೇಡ್ಕರ್‌ಗೆ ಸಿಕ್ಕಂತಹ ಸ್ಥಾನಮಾನಗಳು ಸಿಗಬೇಕಿದೆ. ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ಅಗಾಧವಾದ ಜ್ಞಾನ ಸಂಪತ್ತು ಸಾಧಿಸಲು ಸಾಧ್ಯ. ನಾವು ಮಾಡಿದ ಬಾಷಣಗಳಿಗಿಂತ ಪುಸ್ತಕಗಳು ಯುವ ಜನಾಂಗದ ಮೇಲೆ ಅಪಾರ ಪ್ರಭಾವವನ್ನು ಬಿರಬಲ್ಲವು. ಅಧ್ಯಯನ ಪೀಠಗಳ ಮೂಲಕ ವಿದ್ಯಾರ್ಥಿಗಳು ಸಾಹಿತಿಗಳ ಮತ್ತು ಸಾಧಕರ ಕುರಿತು ಪ್ರತ್ಯೆಕ ಅಧ್ಯಯನ ಮತ್ತು ಸಂಶೋಧನೆ ಕೈಗೊಳ್ಳುವ ಮೂಲಕ ಗುಣಾತ್ಮಕ ಶಿಕ್ಷಣ ಪಡೆದುಕೋಳ್ಳಲು ಸಾಧ್ಯವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ.ವೆಂಕಟರಾವ್ ಎಂ.ಪಲಾಟೆ (ಪ್ರಭಾರ), ಪರೀಕ್ಷಾಂಗ ಕುಲಸಚಿವ ಪ್ರೊ.ರಮೇಶ್ ಸಿ.ಕೆ, ಹಣಕಾಸು ಅಧಿಕಾರಿ ದ್ಯಾಮನಗೌಡ ಮುದ್ದನ ಗೌಡ್ರ, ಸರ್ವಜ್ಞ ಅದ್ಯಯನ ಕೇಂದ್ರದ ಸಂಯೋಜನಾಧಿಕಾರಿ ಡಾ.ಜಯರಾಮಯ್ಯ ಮಾತನಾಡಿದರು. ಬಾಬು ಜಗಜೀವನ್ ರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ವಿಶ್ವನಾಥ್ ಹೆಚ್ ಪುಸ್ತಕಗಳ ಪರಿಚಯ ಮಾಡಿದರು, ಡಾ.ಜೋಗಿನಕಟ್ಟೆ ಮಂಜುನಾಥ ಸ್ವಾಗತಿಸಿದರು, ಸಂಶೋಧನಾ ವಿದ್ಯಾರ್ಥಿನಿ ಎಂ.ಎಲ್.ಮಂಜುಳ ವಂದಿಸಿದರು.