ಸಾರಾಂಶ
ಬಸವಣ್ಣನವರ ಕಾಯಕ ನಿಷ್ಠೆಯನ್ನು ಅಳವಡಿಸಿಕೊಳ್ಳಿ ಎಂದು ರಬಕವಿ ವಿರಕ್ತ ಮಠದ ಶ್ರೀಗುರು ಸಿದ್ದೇಶ್ವರ ಶ್ರೀಗಳು ಹೇಳಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
೧೨ನೆಯ ಶತಮಾನದಲ್ಲಿ ಜಗತ್ತು ಕಂಡ ಅಪರೂಪದ ಮಹಾ ಮಾನವತಾವಾದಿ ಹಾಗೂ ಮಹಾನ್ ಸಮಾಜ ಸುಧಾರಕ ಬಸವಣ್ಣನವರ ಕಾಯಕ ನಿಷ್ಠೆಯನ್ನು ಅಳವಡಿಸಿಕೊಳ್ಳಿ ಎಂದು ರಬಕವಿ ವಿರಕ್ತ ಮಠದ ಶ್ರೀಗುರು ಸಿದ್ದೇಶ್ವರ ಶ್ರೀಗಳು ಹೇಳಿದರು.ಶುಕ್ರವಾರ ಬಸವ ಜಯಂತಿ ನಿಮಿತ್ತ ರಬಕವಿ ಶಂಕರಲಿಂಗ ಸರ್ಕಲ್ ನಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಆ ಕಾಲದಲ್ಲಿ ಶೂದ್ರರಿಗೆ, ಮಹಿಳೆಯರಿಗೆ ಸಮಾಜದಲ್ಲಿ ಗೌರವಯುತವಾಗಿ ಬದುಕಲು ಶ್ರಮಿಸಿದವರು ವಿಶ್ವಗುರು ಬಸವಣ್ಣನವರು. ಕಲ್ಯಾಣದ ಕ್ರಾಂತಿ ನಡೆಯಲು ಶರಣು ಶರಣಾರ್ಥಿ ಎಂಬ ಒಂದು ಗೌರವದ ಮಾತು ಕಾರಣವಾಯಿತು ಎಂದರು.ಮರೆಗುದ್ದಿಯ ನೀಲ ವಿಜಯ ಮಹಾಂತೇಶ್ವರಿ ತಾಯಿ ಮಾತನಾಡಿ, ಬಸವಣ್ಣನವರು ಅಂತರಜಾತಿ ವಿವಾಹ ಮಾಡಿಸಿ ಸಮಾಜದಲ್ಲಿದ್ದ ಜಾತಿ ತಾರತಮ್ಯದ ಅನಿಷ್ಟ ತೊಲಗಿಸಲು ಕ್ರಾಂತಿಕಾರಿ ಹೆಜ್ಜೆ ಇರಿಸಿದರು. ಇದನ್ನು ಸಹಿಸದ ಪಂಡಿತರು ಬಸವಣ್ಣನವರ ವಿರುದ್ಧ ಪಿತೂರಿ ನಡೆಸಿ ರಾಜರನ್ನು ಎತ್ತಿಕಟ್ಟಿ ಶರಣರ ನಾಶಕ್ಕೆ ಸೈನ್ಯಕ್ಕೆ ಆದೇಶಿಸಿದರು ಎಂದರು.
ತೆರದ ವಾಹನದಲ್ಲಿ ಬಸವಣ್ಣನವರ ಭಾವಚಿತ್ರವನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಶರಣರಾದ ಈರಣ್ಣ ಗುಣಕಿ, ಶ್ರೀಶೈಲ ಬಯ್ಯಾರ, ರಾಜು ಸಾಬೋಜಿ, ಪ್ರಭು ಉಮದಿ, ಈಶ್ವರ ನಾಗರಾಳ, ಬಸವರಾಜ ಮದರಕಂಡಿ, ಡಾ.ಎಂ.ಎಸ್. ಹತಪಾಕಿ, ಮನೋಹರ್ ಮಣಜಿಗಿ, ಗಂಗಾಧರ ಬೆಳವಡಿ, ನೀಲಕಂಠ ಮುತ್ತೂರು, ಬಾಬು ಮಹಾಜನ, ಗಿರೀಶ ಮುತ್ತೂರ, ಕಿರಣ ಬುಳಿಮಿಸಿ, ಸಾಗರ ನಿಪ್ಪಾಣಿ, ವಿಜಯ ನಾಶಿ, ಗೌರಿಹರ ಮುತ್ತೂರ, ಶ್ರೀಶೈಲ ಗುಣಕಿ, ಶಿವಾನಂದ ಸಿಂದಗಿ, ರಾಮಣ್ಣ ಹುಲಕುಂದ, ಮಹದೇವಪ್ಪ ಮುತ್ತೂರ, ಚಿದಾನಂದ ಪಾಗದ, ಈರಣ್ಣ ಅಂಗಡಿ, ಸದಾಶಿವ ಮಟ್ಟಿಕಲಿ, ಮಲ್ಲಿಕಾರ್ಜುನ ಸಾಬೂಜಿ, ಈರಣ್ಣ ಗುಗ್ರಿ, ಸಂಗಯ್ಯ ಅಮ್ಮನಗಿ, ಬಾಬು ಗಂಗಾವತಿ, ಅಶೋಕ ಕೋತಿನ ಹಾಗೂ ನೂರಾರು ಮಹಿಳೆಯರು, ವಿವಿಧ ಸಂಘ-ಸಂಸ್ಥೆಗಳ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.