ಶರಣೆಯರು ತಮ್ಮ ಜೀವನದಲ್ಲಿ ಅನುಭಾವಿಸಿದ ನಡೆ, ನುಡಿಗಳನ್ನು ತಮ್ಮ ವಚನಗಳಲ್ಲಿ ಅಡವಿಟ್ಟು ಹೋಗಿದ್ದಾರೆ. ಅಂತಹ ವಚನಗಳನ್ನು ಅಳವಡಿಸಿ ಅನುಭವಿಸಿದಲ್ಲಿ ಜೀವನ ಪಾವನವಾಗುವುದರಲ್ಲಿ ಎರಡು ಮಾತಿಲ್ಲ.
ಲಕ್ಷ್ಮೇಶ್ವರ: 12ನೇ ಶತಮಾನದಲ್ಲಿ ಬಾಳಿ ಹೋದ 33 ಶರಣೆಯರು ರಚಿಸಿದ ವಚನದ ಅನುಭಾವದ ನುಡಿಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಜೀವನ ಪಾವನವಾಗಲು ಸಾಧ್ಯ ಎಂದು ಗದಗಿನ ಆಧ್ಯಾತ್ಮಿಕ ವಿದ್ಯಾಶ್ರಮದ ಶರಣೆ ನೀಲಮ್ಮ ತಾಯಿ ಅಸುಂಡಿ ಹೇಳಿದರು.
ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ವಿವಿಧ ಸಂಘಟನೆಗಳು ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ಶ್ರಾವಣ ಸಂಜೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಲಲಿತಾ ಕೆರಿಮನಿ ಹಾಗೂ ಮೇಘಾ ಹುಕ್ಕೇರಿ ಅವರು ಸಂಪಾದಿಸಿದ ಸಮಾನತೆ ಸಾರಿದ ವಚನಕಾರ್ತಿಯರು ಎನ್ನುವ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಶರಣೆಯರು ತಮ್ಮ ಜೀವನದಲ್ಲಿ ಅನುಭಾವಿಸಿದ ನಡೆ, ನುಡಿಗಳನ್ನು ತಮ್ಮ ವಚನಗಳಲ್ಲಿ ಅಡವಿಟ್ಟು ಹೋಗಿದ್ದಾರೆ. ಅಂತಹ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಅನುಭವಿಸಿದಲ್ಲಿ ನಮ್ಮ ಜೀವನ ಪಾವನವಾಗುವುದರಲ್ಲಿ ಎರಡು ಮಾತಿಲ್ಲ. 12ನೇ ಶತಮಾನದ ಶಿವಶರಣೆಯರು ಸಮಾನತೆಗೆ ಮಾದರಿಯಾಗಿದ್ದಾರೆ. ಬಸವಣ್ಣನವರು ಮಹಿಳೆಯರಿಗೆ ತಮ್ಮ ಆಸ್ಥಾನದಲ್ಲಿ ಪ್ರಾತಿನಿಧ್ಯ ನೀಡುವ ಮೂಲಕ ಮಹಿಳಾ ಸಮಾನತೆಗೆ ದಾರಿದೀಪವಾಗಿದ್ದಾರೆ. 33 ಶರಣೆಯರ ವಚನಗಳನ್ನು ಕ್ರೋಡೀಕರಿಸಿ ಗ್ರಂಥರೂಪದಲ್ಲಿ ಪ್ರಕಟಿಸಿ, ಅವರಿಗೆ ಗೌರವ ನೀಡುವ ಕೆಲಸವನ್ನು ಲಲಿತಾ ಕೆರಿಮನಿ ಹಾಗೂ ಮೇಘಾ ಹುಕ್ಕೇರಿ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.
ಈ ವೇಳೆ ಲಲಿತಾ ಕೆರಿಮನಿ ಅವರು 33 ಶರಣೆಯರ ಜೀವನ ಹಾಗೂ ವಚನಗಳ ಕುರಿತು ಸಂಪಾದಿಸಿದ ಕೃತಿಯ ಪರಿಚಯ ಮಾಡಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರತಿಮಾ ಮಹಾಜನಶೆಟ್ಟರ ಮಾತನಾಡಿ, ಶರಣರ ನಡೆಗಳು ಮಹಿಳೆಯರಿಗೆ ಹಾಗೂ ಸಮಾಜಕ್ಕೆ ದಾರಿದೀಪಗಳಾಗಿವೆ ಎಂದು ಹೇಳಿದರು.
ಕಾಂಚನಮಾಲಾ ಹಸರಡ್ಡಿ, ಕುಸುಮಾ ಮಲ್ಲಾಡದ, ನೀಲಕ್ಕ ಬೂದಿಹಾಳ ಮಾತನಾಡಿದರು, ಶಾರದಾ ಬಟಗುರ್ಕಿ ಸ್ವಾಗತಿಸಿದರು. ರತ್ನಾ ಕರ್ಕಿ ಕಾರ್ಯಕ್ರಮ ನಿರೂಪಿಸಿದರು. ಪಾರ್ವತಿ ಕಳ್ಳಿಮಠ ವಂದಿಸಿದರು. ಕಾರ್ಯಕ್ರಮದಲ್ಲಿ ಶರಣೆಯರ ಕುರಿತು ಬರೆದ ಸಾಧಕಿಯರನ್ನು ಸನ್ಮಾನಿಸಲಾಯಿತು.ಪುಣ್ಯಾಶ್ರಮದಲ್ಲಿ ಸಂಗೀತೋತ್ಸವ
ಗದಗ: ಗಾನಯೋಗಿಗಳ ಹೆಸರಿನಲ್ಲಿ ಸತ್ಕಾರ್ಯಗಳು ಸದಾ ಮುಂದುವರಿಯಬೇಕು ಹಾಗೂ ಟ್ರಸ್ಟ್ ನಿರಂತರವಾಗಿ ಅಂಧ- ಅನಾಥರ ಕಲ್ಯಾಣಕ್ಕೆ ಶ್ರಮಿಸಲಿ ಎಂದು ಮುಖ್ಯೋಪಾಧ್ಯಾಯ ಮಂಜಯ್ಯ ಹಿರೇಮಠ ಮತ್ತು ಪಂ. ವೆಂಕಟೇಶಕುಮಾರ ಅಲ್ಕೋಡ ಆಶಿಸಿದರು.ನಗರದ ವೀರೇಶ್ವರ ಪುಣ್ಯಾಶ್ರಮದ ಪಂ. ಪಂಚಾಕ್ಷರ ಗವಾಯಿಗಳ ಕಾಲೇಜು ಆವರಣದಲ್ಲಿ ಜ್ಞಾನ ಜ್ಯೋತಿ ಪಂ. ಪುಟ್ಟರಾಜ ಗವಾಯಿಗಳ ಸೇವಾ ಟ್ರಸ್ಟ್ ವತಿಯಿಂದ ಪಂ. ಪಂಚಾಕ್ಷರ ಗವಾಯಿಗಳ 86ನೇ ಪಂ. ಪುಟ್ಟರಾಜ ಗವಾಯಿಗಳ 16ನೇ ಪುಣ್ಯಸ್ಮರಣೋತ್ಸವ ಹಾಗೂ ಗುರುಪೂರ್ಣಿಮೆ ನಿಮಿತ್ತ ಸಂಗೀತೋತ್ಸವ ಜರುಗಿತು.ಅಂಬಾದಾಸ ಜಮಾದಾರ ಉಪನ್ಯಾಸ ನೀಡಿದರು. ಇದೇ ವೇಳೆ ರಾಜ್ಯ ಪ್ರಶಸ್ತಿ ಪುರಸ್ಕೃತ ಕಳಕಪ್ಪ ಮದ್ಲಾಪೂರ ಅವರನ್ನು ಸನ್ಮಾನಿಸಲಾಯಿತು. ಅತಿಥಿಗಳಾಗಿ ಪಿ.ಎಸ್. ಹಿರೇಮಠ, ರಾವುತಪ್ಪ ಹೂಗಾರ, ಶೇಖಣ್ಣ ರೋಣಿ, ಕುಮಾರಸ್ವಾಮಿ ವೆಂಕಟಾಪುರಮಠ, ಕಳಕಪ್ಪ ಕುರ್ತಕೋಟಿ, ಶಿವಚಲಕುಮಾರ ಸಾಲಿಮಠ ಉಪಸ್ಥಿತರಿದ್ದರು. ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಯಿತು.17ಜಿಡಿಜಿ7