ಸಾರಾಂಶ
ವಿಜಯಪುರ: ಅಂತರಂಗ ಮತ್ತು ಬಹಿರಂಗ ಶುದ್ಧಿಮಾಡಿಕೊಂಡು ಸಪ್ತ ಶೀಲಗಳನ್ನು ಮೈಗೂಡಿಸಿಕೊಳ್ಳುವದೇ ಶರಣ ಧರ್ಮ ಎಂದು ಮಾಜಿ ಕುಲಸಚಿವ ಡಾ.ವಿ ವಿ ಮಳಗಿ ಹೇಳಿದರು. ನಗರದ ಕಸಾಪ ಸಭಾಂಗಣದಲ್ಲಿ ಜಿಲ್ಲಾ, ತಾಲೂಕ, ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ನಡೆದ ದತ್ತಿನಿಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಗರಿಕತೆ ಬೆಳೆದಂತೆ ವೈಚಾರಿಕತೆಯು ಬೆಳೆದು ಬಂದಿದೆ. ವೈಚಾರಿಕ ಕ್ರಾಂತಿಗೆ ಬಸವಣ್ಣನವರು ಬಹು ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಅಂತರಂಗ ಮತ್ತು ಬಹಿರಂಗ ಶುದ್ಧಿಮಾಡಿಕೊಂಡು ಸಪ್ತ ಶೀಲಗಳನ್ನು ಮೈಗೂಡಿಸಿಕೊಳ್ಳುವದೇ ಶರಣ ಧರ್ಮ ಎಂದು ಮಾಜಿ ಕುಲಸಚಿವ ಡಾ.ವಿ ವಿ ಮಳಗಿ ಹೇಳಿದರು. ನಗರದ ಕಸಾಪ ಸಭಾಂಗಣದಲ್ಲಿ ಜಿಲ್ಲಾ, ತಾಲೂಕ, ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ನಡೆದ ದತ್ತಿನಿಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಗರಿಕತೆ ಬೆಳೆದಂತೆ ವೈಚಾರಿಕತೆಯು ಬೆಳೆದು ಬಂದಿದೆ. ವೈಚಾರಿಕ ಕ್ರಾಂತಿಗೆ ಬಸವಣ್ಣನವರು ಬಹು ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.ಮಹಾವೈರಾಗ್ಯನಿಧಿ ಮುಕ್ತಾಯಕ್ಕನ ಕುರಿತು ಉಪನ್ಯಾಸ ನೀಡಿದ ಪ್ರವಚನಗಾತಿ೯ ಸುಖದೇವಿ ಅಲಬಾಳಮಠ ಅವರು, ಆಧ್ಯಾತ್ಮಿಕ ಚಿಂತನೆಯ ವಿಷಯದಲ್ಲಿ ವಿಶಾಲ ಮನೋಭಾವ ದಿಟ್ಟ ವ್ಯಕ್ತಿತ್ವ, ಸ್ವತಂತ್ರ ಪ್ರವೃತ್ತಿಯ ಹೆಣ್ಣೆಂದು ಮುಕ್ತಾಯಕ್ಕನನ್ನು ಗುರುತಿಸುತ್ತೇವೆ. ಶೂನ್ಯ ಸಂಪಾದನೆಯಲ್ಲಿ ಮುಕ್ತಾಯಕ್ಕ ಸೂನ್ಯ ಸಂಪಾದನೆಗೆ ಬರುತ್ತಾಳೆ. ಅಲ್ಲಿ ಆಕೆ ಅಲ್ಲಮಪ್ರಭುವಿನೊಂದಿಗೆ ಸಂವಾದ ನಡೆಸಿದ್ದಾಳೆ. ಮುಕ್ತಾಯಕ್ಕಳು ಬಸವಣ್ಣನನ್ನು ಗುರುವಾಗಿ, ಚನ್ನಬಸವಣ್ಣನನ್ನು ಲಿಂಗವಾಗಿ ,ಪ್ರಭುದೇವರನ್ನು ಜಂಗಮನಾಗಿ, ಮರಳುಶಂಕರ ದೇವರನ್ನು ಪ್ರಸಾದವಾಗಿ ಮಡಿವಾಳನನ್ನು ಮಂತ್ರವಾಗಿ ತನ್ನ ಆಧ್ಯಾತ್ಮಿಕ ಸಾಧನೆಗೆ ಕಾರಣರಾದರೆಂದು ಸ್ಮರಿಸುತ್ತಾಳೆ ಎಂದರು.
ಮಹಾಶಿವಶರಣೆ ಗುಡ್ಡಾಪುರದ ದಾನಮ್ಮ ಚರಿತ್ರೆ ಕುರಿತು ಮಾತನಾಡಿದ ಮುದ್ದೇಬಿಹಾಳದ ಸಾಹಿತಿ ಬಸಮ್ಮಗದ್ದಿ, ಮಹಾಶಿವಶರಣೆ ಗುಡ್ಡಾಪುರದ ದಾನಮ್ಮ ಗುರಲಿಂಗ ಸಂಗಮ ಪ್ರೇಮಿ ವೀರ ಮಲ್ಲಯ್ಯ ಕೃಪಾ ಆಶೀರ್ವಾದದಿಂದ ಜನ್ಮ ತಾಳಿದ ಜಗನ್ಮಾತೆ ದಾನಮ್ಮ ಎಂದು ಹೇಳಿದರು.ವೀರಶೈವ ಮಹಾಸಭಾದ ಗೌರವ ಅಧ್ಯಕ್ಷ ಸಿದ್ರಾಮಪ್ಪ ಉಪ್ಪಿನ ಮಾತನಾಡಿ, 1ನೇ ಶತಮಾನದ ಶಿವಶರಣೆಯರ ಸಾಲಿನಲ್ಲಿ ಮುಕ್ತಾಯಕ್ಕ ಹಾಗು ಶಿವಶರಣೆ ಗುಡ್ಡಾಪುರದ ದಾನಮ್ಮ ಅಗ್ರಸ್ಥಾನ ಪಡೆದುಕೊಂಡಿದ್ದಾರೆ ಎಂದರು.
ಬನುದೇವಿ ಸಂಕನ್ನವರ, ಡಾ.ಆರ್.ಎಂ.ಯಲಗೋಡ, ಶಿವನಗೌಡ ಬಿರಾದಾರ, ರಾಜೇಸಾಬ ಶಿವನಗುತ್ತಿ, ಹಾಸಿಂಪೀರ ವಾಲಿಕಾರ, ಡಾ.ಮಾಧವ ಗುಡಿ, ಮಹಮ್ಮದಗೌಸ ಹವಾಲ್ದಾರ, ಅಜು೯ನ ಶಿರೂರ, ಅಹಮ್ಮದ ವಾಲಿಕಾರ, ಸಿದ್ರಾಮಪ್ಪ ಜಂಗಮಶೆಟ್ಟಿ, ಆಶಾ ಬಿರಾದಾರ, ಎಸ್.ಎಂ ಸಂಕನ್ನವರ, ಎಸ್.ಡಿ ಲಮಾಣಿ, ಸಿದ್ದನಗೌಡ ಪಾಟೀಲ, ಶಾರಾದಾ ಐಹೊಳೆ, ಬಿ.ಎಂ ಪಟೇಲ, ರೂಪಾ ರಜಪೂತ, ಎ.ಎಚ್ ಕರಜಗಿ ಮುಂತಾದವರು ಉಪಸ್ಥಿತರಿದ್ದರು.