ಪಿಪಿಸಿಯಲ್ಲಿ ಎಂಬ್ರಾಯ್ಡರಿ, ಸೀರೆ ಕುಚ್ಚು ಕಾರ್ಯಾಗಾರ

| Published : Apr 25 2024, 01:10 AM IST

ಸಾರಾಂಶ

ಪೂರ್ಣಪ್ರಜ್ಞ ಕಾಲೇಜಿನ (ಸ್ವಾಯತ್ತ) ಮಹೀಳಾ ವೇದಿಕೆ, ಹಳೆ ವಿದ್ಯಾರ್ಥಿ ಸಂಘ ಹಾಗೂ ಉಡುಪಿಯ ಸಾಫಲ್ಯ ಟ್ರಸ್ಟ್, ಮಣಿಪಾಲದ ಭಾರತೀಯ ವಿಕಾಸ್ ಟ್ರಸ್ಟ್ ಸಹಯೋಗದಲ್ಲಿ ಸೀರೆಯ ಎಂಬ್ರಾಯ್ಡರಿ ಮತ್ತು ಕುಚ್ಚು ಹಾಕುವ ಕಾರ್ಯಾಗಾರ ನಡೆಯಿತು. ತೇಜಸ್ವಿ ಶಂಕರ್ ಕಾರ್ಯಾಗಾರ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಹೆಣ್ಣುಮಕ್ಕಳು ಪಠ್ಯಪುಸ್ತಕದೊಂದಿಗೆ ಕರಕುಶಲ ಕಲೆಗಳನ್ನೂ ಕಲಿಯಬೇಕು ಎಂದು ಪೂರ್ಣಪ್ರಜ್ಞ ಹಳೆ ವಿದಾರ್ಥೀ ಸಂಘದ ಕಾರ್ಯದರ್ಶಿ ತೇಜಸ್ವಿ ಶಂಕರ್ ಹೇಳಿದರು.

ಅವರು ನಗರದ ಪೂರ್ಣಪ್ರಜ್ಞ ಕಾಲೇಜಿನ (ಸ್ವಾಯತ್ತ) ಮಹೀಳಾ ವೇದಿಕೆ, ಹಳೆ ವಿದ್ಯಾರ್ಥಿ ಸಂಘ ಹಾಗೂ ಉಡುಪಿಯ ಸಾಫಲ್ಯ ಟ್ರಸ್ಟ್, ಮಣಿಪಾಲದ ಭಾರತೀಯ ವಿಕಾಸ್ ಟ್ರಸ್ಟ್ ಸಹಯೋಗದಲ್ಲಿ ಒಂದು ವಾರಗಳ ಕಾಲ ಆಯೋಜಿಸಲಾದ ಸೀರೆಯ ಎಂಬ್ರಾಯ್ಡರಿ ಮತ್ತು ಕುಚ್ಚು ಹಾಕುವ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಾಗಾರದ ಸಮಾರೋಪದಲ್ಲಿ ಉಪಸ್ಥಿತರಿದ್ದ ಸಾಫಲ್ಯ ಟ್ರಸ್ಟ್‌ನ ತಾರಾದೇವಿ ಮಾತನಾಡಿ, ಹೆಣ್ಣುಮಕ್ಕಳು ಕಲೆ, ಸಂಗೀತ, ಕ್ರೀಡೆ ಹೀಗೆ ಎಲ್ಲ ರೀತಿಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಭಾರತೀಯ ವಿಕಾಸ ಟ್ರಸ್ಟ್ ಕಾರ್ಯಕ್ರಮ ಸಂಯೋಜನಾಧಿಕಾರಿ ಲಕ್ಷ್ಮೀಬಾಯಿ ಮಾತನಾಡಿ, ಹೆಣ್ಣುಮಕ್ಕಳನ್ನು ಸ್ವಾವಲಂಬಿಯಾಗಿಸುವ ಇಂತಹ ಕಾರ್ಯಾಗಾರಗಳ ಉಪಯೋಗ ಎಲ್ಲ ಹೆಣ್ಣುಮಕ್ಕಳಿಗೂ ಲಭ್ಯವಾಗಲಿ ಎಂದು ಹಾರೈಸಿದರು.

ಈ ಕಾರ್ಯಾಗಾರದಲ್ಲಿ ಪೂರ್ಣಪ್ರಜ್ಞ ಕಾಲೇಜಿನ ಆಡಳಿತಾಧಿಕಾರಿ ಡಾ. ಎ.ಪಿ. ಭಟ್ ಉಪಸ್ಥಿತರಿದ್ದರು.

ಮಹಿಳಾ ವೇದಿಕೆಯ ಅರ್ಚನಾ ಎಸ್. ಕಾರಂತ್, ಡಾ. ಭೈರವಿ ಪಾಂಡ್ಯ ಕಾರ್ಯಗಾರವನ್ನು ಆಯೋಜಿಸಿ ನಡೆಸಿಕೊಟ್ಟರು. ವಿದ್ಯಾರ್ಥಿನಿಯರಾದ ಸುಪರ್ಣ, ಕೆ.ಪಿ. ನೇಹಾ ಮತ್ತು ಕ್ಷಮಾ ಸ್ವಾಗತಿಸಿ, ವಂದಿಸಿದರು.