napokrlu, urus, government, state, state, religion
ನಾಪೋಕ್ಲು: ಇಲ್ಲಿಗೆ ಸಮೀಪದ ಎಮ್ಮೆಮಾಡು ಹಝ್ರತ್ ಸೂಫಿ ಶಹೀದ್(ರ) ಮತ್ತು ಸಯ್ಯುದ್ ಹಸನ್ ಸಖಾಫ್ ಹಳ್ರಮಿ(ರ ಮಹಾನುಭಾವರ ಹೆಸರಿನಲ್ಲಿ ವರ್ಷಂಪ್ರತಿ ನಡೆಯುವ ಇತಿಹಾಸ ಪ್ರಸಿದ್ಧ ಮಖಾಂ ಉರೂಸ್ ಗೆ ಶುಕ್ರವಾರ ಎಮ್ಮೆಮಾಡು ಜಮಾಅತ್ ಅಧ್ಯಕ್ಷ ಹುಸೈನ್ ಸಖಾಫಿ ಧ್ವಜಾರೋಹಣದ ಮೂಲಕ ಚಾಲನೆ ನೀಡಿದರು.
ನಂತರ ನಡೆದ ಉದ್ಘಾಟನಾ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾ ಅತ್ ಅಧ್ಯಕ್ಷ ಹುಸೈನ್ ಸಖಾಫಿ ವಹಿಸಿದ್ದು ಉಲಾಮ ಅಬ್ದುಲ್ಲಾ ಪೈಝಿ ಎಡಪಾಲ ಉದ್ಘಾಟಿಸಿ ಶುಭ ಹಾರೈಸಿದರು. ಡಾ ಮುಹಮ್ಮದ್ ಕುಂಞ ಸಖಾಫಿ ಕೊಲ್ಲಂ ಹಿತ ನುಡಿಗಳನಾಡಿದರು ಜಮಾತ್ ಕಾರ್ಯದರ್ಶಿ ಸಯ್ಯದ್ ಝಕರಿಯ ಸಅದಿ ಸ್ವಾಗತಿಸಿ ಸುಲೈಮಾನ್ ಸಖಾಫಿವಂದಿಸಿದರು. ಇಸ್ಲಾಂ ಮುಸ್ಲಿಂ ಜಮ ಅತ್ನ ಹಾಗೂ ಶಹೀದಿಯ ಅನಾಥಾಲಯದ ಹಾಲಿ ಮತ್ತು ಮಾಜಿ ಪದಾಧಿಕಾರಿಗಳು, ಸದಸ್ಯರು, ಊರಿನ ಸೈಯ್ಯದರುಗಳು ಊರಿನ ಹಿರಿಯರು ಕಿರಿಯರು ಭಾಗವಹಿಸಿದರುಧ್ವಜಾರೋಹಣಕ್ಕೂ ಮೊದಲು ಸಾಮೂಹಿಕ ನಮಾಜಿನ ಬಳಿಕ ಸೂಫೀ ಶಹೀದ್, ಸಯ್ಯಿದ್ ಹಸ್ಸನ್ ಸಖಾಫ್ ಹಾಗೂ ಇತರೆ ದರ್ಗಾದಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.