ಸಾರಾಂಶ
ಸಂಸ್ಥೆ ಅಧ್ಯಕ್ಷ ತಲವಾನೆ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಶ್ರೀಕಾಂತ್ ಎಂ. ಹೆಗಡೆ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಪಿ. ನಾರಾಯಣ, ಕಾರ್ಯದರ್ಶಿ ನೀಲಕಂಠಮೂರ್ತಿ ಬಿ.ಎಲ್. ಖಜಾಂಚಿ ಡಾ.ಶ್ರೀಧರ್, ಕಾಲೇಜಿನ ಪ್ರಾಂಶುಪಾಲ ಡಾ. ಕೆ.ನಾಗರಾಜ್, ಕಾನೂನು ಸಲಹೆಗಾರ ರಾಜೇಶ್ ಎನ್. ಶಾಸ್ತ್ರಿ ಉಪಸ್ಥಿತರಿದ್ದರು.
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಪ್ರತಿಯೊಬ್ಬರಿಗೂ ಅವರ ಜೀವನದ ದೈಹಿಕ, ಮಾನಸಿಕ ತೊಂದರೆಗಳಿಗೆ ಅವರ ಮನಸ್ಸಿನ ಭಾವನೆಗಳೆ ಔಷಧಿ ಆಗಿರುತ್ತವೆ ಎಂದು ಕೂಡಲಿ ಮಠದ ಶ್ರೀ ಅಭಿನವ ಶಂಕರಭಾರತಿ ಮಹಾಸ್ವಾಮೀಜಿ ನುಡಿದರು.ಇಲ್ಲಿಗೆ ಸಮೀಪದ ಜಾವಳ್ಳಿ ಜ್ಞಾನದೀಪ ಶಾಲೆಯಲ್ಲಿ ಬೆಳ್ಳಿಹಬ್ಬ ಕಾರ್ಯಕ್ರಮ ಉದ್ಘಾಟಸಿ ಆಶೀರ್ವಚನ ನೀಡಿದ ಅವರು, ಪ್ರತಿಯೊಬ್ಬರ ಜೀವನದಲ್ಲಿ ಅವರವರ ಭಾವನೆಗೆ ತಕ್ಕಂತೆ ಪ್ರತಿಫಲ ದೊರಕುತ್ತದೆ. ನಾವು ಪಠಿಸುವ ಮಂತ್ರದಲ್ಲಿ, ತೀರ್ಥದಲ್ಲಿ, ದೇವರಲ್ಲಿ, ಗುರುವಿನಲ್ಲಿ ಭಕ್ತಿ- ಶ್ರಧ್ಧೆಯಿಂದ ಪ್ರತಿನಿತ್ಯ ಆರಾಧನೆ ಮಾಡಬೇಕು. ಎಲ್ಲರೂ ಅನುಕರಣೆ ಮಾಡಿ ಕಲಿಯುತ್ತಾರೆ. ಯಾರಾದರೂ ಉಪದೇಶ ಕೇಳಿದರೆ ಮಾತ್ರ ಕೊಡಬೇಕು. ಇಲ್ಲದಿದ್ದರೆ ನೀಡಬಾರದು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ತಲವಾನೆ ಪ್ರಕಾಶ್, ಪ್ರತಿಭಾವಂತ ಮಕ್ಕಳ ಭವಿಷ್ಯ ರೂಪಿಸುವುದೇ ಜ್ಞಾನದೀಪ ಶಾಲೆ ಮುಖ್ಯ ಉದ್ದೇಶವಾಗಿದೆ. ಶಾಲೆಯೂ ಸುಸಜ್ಜಿತ ಕಟ್ಟಡ ಹಾಗೂ ಪ್ರತಿಭಾವಂತ ಶಿಕ್ಷಕರಿಂದ ಕೂಡಿದೆ. ಉತ್ತಮ ಶಿಕ್ಷಣದ ಜೊತೆಗೆ ಶಿಕ್ಷಣನೇತರ ಚಟುವಟಿಕೆಗಳಲ್ಲಿಯೂ ಮುಂಚೂಣಿಯಲ್ಲಿದೆ ಎಂದರು.ಸಂಸ್ಥೆ ಅಧ್ಯಕ್ಷ ತಲವಾನೆ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಶ್ರೀಕಾಂತ್ ಎಂ. ಹೆಗಡೆ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಪಿ. ನಾರಾಯಣ, ಕಾರ್ಯದರ್ಶಿ ನೀಲಕಂಠಮೂರ್ತಿ ಬಿ.ಎಲ್. ಖಜಾಂಚಿ ಡಾ.ಶ್ರೀಧರ್, ಕಾಲೇಜಿನ ಪ್ರಾಂಶುಪಾಲ ಡಾ. ಕೆ.ನಾಗರಾಜ್, ಕಾನೂನು ಸಲಹೆಗಾರ ರಾಜೇಶ್ ಎನ್. ಶಾಸ್ತ್ರಿ ಉಪಸ್ಥಿತರಿದ್ದರು.
ಶಾಲೆಯ ಶಿಕ್ಷಕ ಮಲ್ಲಿಕಾರ್ಜುನ ನಿರೂಪಿಸಿ, ಶ್ರೀಕಾಂತ ಗೋಸಾವಿ ವಂದಿಸಿದರು.- - - -11ಎಚ್.ಎಚ್.ಆರ್ ಪಿ2:
ಹೊಳೆಹೊನ್ನೂರಿನ ಸಮೀಪದ ಜಾವಳ್ಳಿಯ ಜ್ಞಾನದೀಪ ಶಾಲೆಯ ಬೆಳ್ಳಿಹಬ್ಬದ ಮಹೋತ್ಸವವನ್ನು ಕೂಡಲಿ ಮಠದ ಶ್ರೀ ಅಭಿನವ ಶಂಕರಭಾರತಿ ಮಹಾಸ್ವಾಮೀಜಿ ಉದ್ಘಾಟಿಸಿದರು.