ಸಾವಿರ ಸಂಪೂರ್ಣ ಗ್ರಾಪಂ ಸಾಕ್ಷರತೆಗೆ ಒತ್ತು: ರವಿಕುಮಾರ್‌

| Published : Sep 01 2025, 01:04 AM IST

ಸಾರಾಂಶ

ದಾಬಸ್‍ಪೇಟೆ: ರಾಜ್ಯಾದ್ಯಂತ ಸಾವಿರ ಗ್ರಾಮ ಪಂಚಾಯತಿಗಳಲ್ಲಿ ಅನಕ್ಷರತೆ ಹೋಗಲಾಡಿಸಿ, ಜನರನ್ನು ಸಾಕ್ಷರರನ್ನಾಗಿ ಮಾಡಲು ಅರಿವು ಮೂಡಿಸುವ ಜಾಥಾ ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ ಎಂದು ಬೆಂ.ಗ್ರಾ. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ರವಿಕುಮಾರ್ ಹೇಳಿದರು.

ಸೋಂಪುರ ಹೋಬಳಿಯ ಶಿವಗಂಗೆಯಲ್ಲಿ ಸಾವಿರ ಸಂಪೂರ್ಣ ಸಾಕ್ಷರತಾ ಗ್ರಾಪಂ ಕಾರ್ಯಕ್ರಮದಡಿ, ಕಲಿಕಾ ವಾತಾವರಣ ನಿರ್ಮಾಣ ಜಾಥಾ ಉದ್ಘಾಟಿಸಿ ಮಾತನಾಡಿದ ಅವರು, ನೆಲಮಂಗಲ ತಾಲೂಕಿನ 12 ಹಾಗೂ ಹೊಸಕೋಟೆಯ 11 ಗ್ರಾಪಂಗಳಲ್ಲಿ ಸಾಕ್ಷರತಾ ಕಾರ್ಯಕ್ರಮ ನಡೆಸುತ್ತೇವೆ. ಎಂದರು.

ಕಲಾ ತಂಡದ ಸಂಪನ್ಮೂಲ ವ್ಯಕ್ತಿ ನಿಡವಂದ ಕಲಾವಿದ ವೆಂಕಟಸ್ವಾಮಿ, ಶಶಿಕಲಾ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಕಾರ್ಯಕ್ರಮ ಸಹಾಯಕಿ ಪ್ರಭಾವತಿ ಅಂಗಡಿ, ಆಶಾ, ಸಿಆರ್‌ಪಿ ಸಿದ್ದಗಂಗಯ್ಯ, ಮುಖ್ಯಶಿಕ್ಷಕಿ ಸುಜಾತ, ಗ್ರಾಪಂ ಕಾರ್ಯದರ್ಶಿ ಹರ್ಷ, ಸಿದ್ದರಾಮು, ಜಯಶೀಲಾ, ಮೀನಾಕ್ಷಿ, ಶ್ರೀ ಗಂಗಾಧರೇಶ್ವರ ಕಲಾ ಬಳಗದ ಅಧ್ಯಕ್ಷ ಗೋಪಾಲಕೃಷ್ಣ, ಉಪಾಧ್ಯಕ್ಷ ದೇವರಾಜು, ಕಾರ್ಯದರ್ಶಿ ಮೂರ್ತಿ ಗಾರೆಮನೆ, ಸಹ ಕಾರ್ಯದರ್ಶಿ ಸುದೀಪ್ ಕುಮಾರ್, ಖಜಾಂಚಿ ಕೆಂಪರಾಜು, ನಿರ್ದೇಶಕರಾದ ಚಿದಾನಂದ್, ಪುಟ್ಟಣ್ಣ, ಮಂಜಣ್ಣ, ಆರಾಧ್ಯ ಇತರರಿದ್ದರು.

(ಫೋಟೋ ಕ್ಯಾಫ್ಷನ್‌)

ಸೋಂಪುರ ಹೋಬಳಿಯ ಶಿವಗಂಗೆಯಲ್ಲಿ ಸಾವಿರ ಸಂಪೂರ್ಣ ಸಾಕ್ಷರತಾ ಗ್ರಾಪಂ ಕಾರ್ಯಕ್ರಮದಡಿ, ಕಲಿಕಾ ವಾತಾವರಣ ನಿರ್ಮಾಣ ಜಾಥಾವನ್ನು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ರವಿಕುಮಾರ್ ಉದ್ಘಾಟಿಸಿದರು.