ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಕ್ಕೆ ಒತ್ತು

| Published : Sep 01 2025, 01:04 AM IST

ಸಾರಾಂಶ

ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳಿಗೆ ಮಹತ್ವ ನೀಡುವ ಜತೆಗೆ ಸೌಲಭ್ಯ ಒದಗಿಸಲಾಗುವುದು

ಕುಷ್ಟಗಿ: ಗ್ರಾಮೀಣ ಭಾಗದಲ್ಲಿನ ಗ್ರಂಥಾಲಯದಲ್ಲಿ ಪುಸ್ತಕ, ಪೇಪರ್, ಮ್ಯಾಗಜಿನ್ ಸೇರಿದಂತೆ ನಾನಾ ಪುಸ್ತಕಗಳಿಂದ ಎಲ್ಲರೂ ಜ್ಞಾರ್ನಾಜನೆ ಪಡೆದುಕೊಳ್ಳಬೇಕೆಂದು ತಾಪಂ ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ ಹೇಳಿದರು.

ತಾಲೂಕಿನ ಹಿರೇನಂದಿಹಾಳ ಗ್ರಾಮದ ಅರಿವು ಹಾಗೂ ಮಾಹಿತಿ ಕೇಂದ್ರದ ಗ್ರಾಪಂ ಗ್ರಂಥಾಲಯಕ್ಕೆ ಭೇಟಿ ನೀಡಿದ ಅವರು, ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳಿಗೆ ಮಹತ್ವ ನೀಡುವ ಜತೆಗೆ ಸೌಲಭ್ಯ ಒದಗಿಸಲಾಗುವುದು. ನಾಗರಿಕರು ಗ್ರಂಥಾಲಯಕ್ಕೆ ಭೇಟಿ ನೀಡಿ ಜ್ಞಾರ್ನಾಜನೆ ಪಡೆದುಕೊಳ್ಳಬೇಕು ಎಂದರು.

ಈ ವೇಳೆ ತಾಪಂ ತಾಂತ್ರಿಕ ಸಂಯೋಜಕ ಬಸವರಾಜ ಯಲಬುರ್ತಿ, ಐಇಸಿ ಸಂಯೋಜಕ ಚಂದ್ರಶೇಖರ ಹಿರೇಮಠ, ಪಿಡಿಒ ಹನುಮಂತರಾಯ ಕಾಟಿಗಲ್, ಗ್ರಂಥಾಲಯ ಮೇಲ್ವಿಚಾರಕ ದೇವರಾಜ್ ಮ್ಯಾದನೇರಿ, ಸಿಬ್ಬಂದಿಗಳಾದ ಫಕೀರಪ್ಪ ಗುಡಿಹೊಲ, ಬಿಸೆಟಪ್ಪ ರಾಥೋಡ, ಉಮಾದೇವಿ ವಜ್ರಬಂಡಿ, ಹುಚ್ಚೀರಪ್ಪ, ಬಸವನಗೌಡ, ಶರಣಪ್ಪ ವಜ್ರಬಂಡಿ, ಧರ್ಮಣ್ಣ ದುರುಗಣ್ಣನವರ, ಹುಚ್ಚೀರಪ್ಪ ಪೂಜಾರ, ಪರುಶುರಾಮ ಮಾಲಗಿತ್ತಿ, ದುರುಗಪ್ಪ ಹೊಸಮನಿ, ವೀರೇಶ ಮಾಲಗಿತ್ತಿ, ಕನಕಾಚಲ ಕಲ್ಗುಡಿ, ಹನುಮೇಶ ಮಾಟರಂಗಿ, ಆನಂದ ಪೂಜಾರ, ನಾಗಪ್ಪ ಅಂಗಡಿ ಇದ್ದರು.