ಸಾರಾಂಶ
ಕೆರೆಸಂತೆ ಮುಖ್ಯ ರಸ್ತೆಯಿಂದ ಸೇವಾ ನಗರದವರೆಗೆ ಶಾಸಕರ ವಿಶೇಷ ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ
ಕನ್ನಡ ಪ್ರಭ ವಾರ್ತೆ, ಕಡೂರುತಾವು ಶಾಸಕರಾದ ಬಳಿಕ ಜನರಿಗೆ ನೀಡಿದ ಭರವಸೆಯಂತೆ ಜಾತ್ಯತೀತವಾಗಿ ಕ್ಷೇತ್ರದ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಕಡೂರು ವಿಧಾನಸಭಾ ಕ್ಷೇತ್ರದ ಸೇವಾ ನಗರದಲ್ಲಿ ನಂಜಪ್ಪನಹಳ್ಳಿ- ಕೆರೆಸಂತೆ ಮುಖ್ಯ ರಸ್ತೆಯಿಂದ ಸೇವಾ ನಗರದವರೆಗೆ ₹50 ಲಕ್ಷ ಶಾಸಕರ ವಿಶೇಷ ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಸೇವಾನಗರ ಚಿಕ್ಕ ಗ್ರಾಮವಾಗಿದ್ದರೂ ₹50 ಲಕ್ಷದ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ತಾವು ಶಾಸಕರಾದ ಮೇಲೆ ಗ್ರಾಮಗಳಿಗೆ ಹೆಚ್ಚು ಒತ್ತು ನೀಡಿದ್ದು, ಎಷ್ಟೇ ಶಾಸಕರು ಬಂದು ಹೋದರೂ ಮಾಡದೇ ಇದ್ದ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡುವ ಮುಖೇನ ₹55 ಲಕ್ಷ ದಲ್ಲಿ ಲಿಂಗ್ಲಾಪುರಕ್ಕೆ ಕೆರೆ ಏರಿ ಮೇಲೆ ಸಿಸಿರಸ್ತೆ ನಿರ್ಮಾಣ, ಬಾಪೂಜಿ ಕಾಲೋನಿಗೆ ಸುಮಾರು ₹1 ಕೋಟಿ ವೆಚ್ಚದಲ್ಲಿ ರಸ್ತೆ ಪೂರ್ಣಗೊಳಿಸಲಾಗಿದೆ. ನಂಜಪ್ಪನ ಹಳ್ಳಿಯಲ್ಲಿ ₹50 ಲಕ್ಷದಲ್ಲಿ ಮೂರು ರಸ್ತೆಗಳ ಕೆಲಸ ಈಗಾಗಲೇ ಆಗಿದೆ. ಸ್ಥಳೀಯವಾಗಿ ಅಂಚೆ ಚೋಮನಹಳ್ಳಿ, ಕೆರೆಸಂತೆ, ಮಲ್ಲಪ್ಪನಹಳ್ಳಿ, ಲಿಂಗ್ಲಾಪುರ ಸೇರಿದಂತೆ ಈ ಕೆರೆಸಂತೆ ಪಂಚಾಯ್ತಿ ನನ್ನ ಸಕ್ರಿಯ ರಾಜಕೀಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬೆಂಬಲ ನೀಡಿದೆ ಎಂದು ಹೇಳಿದರು.ಈ ಪಂಚಾಯಿತಿಗೆ ವಿಶೇಷ ಗಮನ ಹರಿಸುವ ಮೂಲಕ ಶಾಸಕರಾದ 23 ತಿಂಗಳಲ್ಲಿ ಸಾಧ್ಯವಾದಷ್ಟು ಅಭಿವೃದ್ಧಿ ಮಾಡಿದ್ದೇನೆ. ಜಾತ್ಯಾತೀತವಾಗಿ ಸಣ್ಣ ಸಣ್ಣ ಕಾಲೋನಿಗಳು, ತಾಂಡ್ಯಗಳು, ಹಂಪಾಪುರ, ಭೋವಿ ಕಾಲೋನಿ ಸೇರಿದಂತೆ ಸಣ್ಣ ಜಾತಿಗಳ ಜನಾಂಗದ ಗ್ರಾಮಗಳಿಗೂ ಕೂಡ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತೇನೆ ಎಂದು ತಿಳಿಸಿದರು.ಕೆರೆಸಂತೆ ಗ್ರಾಪಂ ಮಾಜಿ ಅಧ್ಯಕ್ಷ ರವಿ ನಾಯ್ಕ ಮಾತನಾಡಿ, ಭರವಸೆ ನೀಡಿದಂತೆ ನಮ್ಮ ಶಾಸಕ ಆನಂದ್ ಈ ಪಂಚಾಯ್ತಿ ವ್ಯಾಪ್ತಿಗೆ ಸುಮಾರು ₹6 ಕೋಟಿಗಳ ವಿವಿಧ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. 2017-18 ರಲ್ಲಿ ನಾನು ಕೂಡ ಈ ಗ್ರಾ.ಪಂ. ಸದಸ್ಯ ರಾಗಿದ್ದು ಶಾಸಕರ ತಾಯಿ ಲಕ್ಕಮ್ಮ ಸಿದ್ದಪ್ಪ ಜಿಪಂ ಸದಸ್ಯರಾಗಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಿದರು. ಶಾಸಕರು ಪಂಚಾಯ್ತಿ ವ್ಯಾಪ್ತಿಯ ಮನೆಗಳ ಹಕ್ಕುಪತ್ರಗಳನ್ನು ಕೊಡಿಸಿದರು ಎಂದರು.ಕಾರ್ಯಕ್ರಮದಲ್ಲಿ ತಾಪಂ ಮಾಜಿ ಅಧ್ಯಕ್ಷ ಸೋಮಶೇಖರ್, ಮಾಜಿ ಸದಸ್ಯ ಹೊಗರೇಹಳ್ಳಿ ಶಶಿ, ಕೆರೆಸಂತೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಂದನಾಬಾಯಿ, ಕೆ ಆರ್ ಐ ಡಿ ಎಲ್ ನ ಅಧಿಕಾರಿ ಗಿರೀಶ್, ರೇಣುಕಮ್ಮ, ನಾರಾಯಣಪ್ಪ, ಪ್ರಸನ್ನ, ಹಮೀದ್ , ನವೀದ್, ದೇವೇಂದ್ರ,ಸತೀಶ್, ಮೂರ್ತಣ್ಣ. ದೇವರಾಜ್,ಆದರ್ಶ,ರಾಜೇಶ್ ಹಾಗು ಗ್ರಾಮಸ್ಥರು ಇದ್ದರು.
24ಕೆಕೆಡಿಯು1.ಕಡೂರು ವಿಧಾನಸಭಾ ಕ್ಷೇತ್ರದ ಸೇವಾ ನಗರದಲ್ಲಿ ನಂಜಪ್ಪನಹಳ್ಳಿ- ಕೆರೆಸಂತೆ ಮುಖ್ಯ ರಸ್ತೆಯಿಂದ ಸೇವಾನಗರದವರೆಗೆ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಚಾಲನೆ ನೀಡಿದರು.