ಸಾರಾಂಶ
ಯಲಬುರ್ಗಾ:
ಕ್ಷೇತ್ರದಲ್ಲಿ ಗಾಣಿಗ ಸಮಾಜವನ್ನು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಸಂಘಟನೆಗೆ ಒತ್ತು ನೀಡಲಾಗುವುದು ಎಂದು ಗಾಣಿಗ ಸಮಾಜದ ತಾಲೂಕು ಅಧ್ಯಕ್ಷ ಶರಣಪ್ಪ ರ‍್ಯಾವಣಕಿ ಹೇಳಿದರು.ತಾಲೂಕಿನ ಬೇವೂರು ಗ್ರಾಮದ ಬುದ್ಧ ಬಸವ ಅಂಬೇಡ್ಕರ್ ಭವನದಲ್ಲಿ ಗಾಣಿಗ ಸಮಾಜದಿಂದ ಸೋಮವಾರ ಹಮ್ಮಿಕೊಂಡಿದ್ದ ಗಾಣಿಗ ಸಮಾಜದ ಪದಾಧಿಕಾರಿಗಳ ಪದಗ್ರಹಣ, ಪ್ರತಿಭಾ ಪುರಸ್ಕಾರ, ಸದಸ್ಯತ್ವ ನೋಂದಣಿ ಹಾಗೂ ಜಾಗೃತಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಬೇವೂರು ಗ್ರಾಮದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಗಾಣಿಗರ ಜಾಗೃತಿ ಸಮಾವೇಶ, ಯಲಬುರ್ಗಾ ಹಾಗೂ ಕುಕನೂರು ತಾಲೂಕಿನ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸದಸ್ಯತ್ವ ನೋಂದಣಿ ಕಾರ್ಯಕ್ರಮ ನಡೆಯಲಿದೆ. ಸಮಾಜದ ಸಂಘಟನೆ ಜತೆಗೆ ಸರ್ಕಾರದ ಸೌಲಭ್ಯ ಪಡೆಯಲು ಹೋರಾಟ ನಡೆಸಬೇಕಿದೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.ಹಿರಿಯ ವಕೀಲ ಹನುಮಂತರಾಯ ಕೆಂಪಳ್ಳಿ ಮಾತನಾಡಿ, ಸಾಮಾಜಿಕ, ಶೈಕ್ಷಣಿಕವಾಗಿ ಸಮಾಜ ಸಂಘಟನೆ ಜತೆಗೆ ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದವರ ಬೆನ್ನಿಗೆ ನಿಲ್ಲಬೇಕಿದೆ. ಗಾಣಿಗ ಸಮಾಜದ ಸಂಘಟನೆ ಹಿತದೃಷ್ಟಿಯಿಂದ ಸಂಘ ನೋಂದಣಿಯಾಗಿರುವುದು ಸಂತಸದ ವಿಚಾರ. ಸಮಾಜವು ಆರ್ಥಿಕ, ಸಾಮಾಜಿಕವಾಗಿ ಮುಂದೆ ಬರಲು ಗಾಣಿಗರ ಸೌಹಾರ್ದ ಪತ್ತಿನ ಸಹಕಾರ ಸಂಘ ಸ್ಥಾಪನೆಯಾಗಬೇಕು ಎಂದರು.
ಸಮಾಜದ ಗೌರವಾಧ್ಯಕ್ಷ ಸಂಗಮೇಶ ವಾದಿ, ಮುಖಂಡರಾದ ಶರಣಪ್ಪಗೌಡ ಕೆಂಚಮ್ಮನವರ್, ಮಲ್ಲನಗೌಡ ಪಾಟೀಲ್, ಅಯ್ಯನಗೌಡ ಕೆಂಚಮ್ಮನವರ್ ಮಾತನಾಡಿದರು.ಕುಕನೂರು ತಾಲೂಕು ಅಧ್ಯಕ್ಷ ವಿಶ್ವನಾಥ ತಮ್ಮಣ್ಣವರ, ಪ್ರಧಾನ ಕಾರ್ಯದರ್ಶಿ ಹಿರೇಹನುಮಪ್ಪ ಬೊಮ್ಮನಾಳ, ಪಂಪಾಪತಿ ಕುದ್ರಿಮೋತಿ, ಪ್ರಮುಖರಾದ ಅಮೃತಪ್ಪ ದೇಸಾಯಿ, ರಾಚಪ್ಪ ಹುರಳಿ, ಬುಡ್ಡಪ್ಪ ಹಳ್ಳಿ, ಯು.ಎಸ್. ಮೆಣಸಗೇರಿ, ಜಯರಾಜ ದೇಸಾಯಿ, ತೋಟಪ್ಪ ಗುಂಗಾಡಿ, ನಾಗನಗೌಡ ಜಾಲಿಹಾಳ, ಗುಂಗಾಡಿ ಶರಣಪ್ಪ, ಶಿವಸಂಗಪ್ಪ ಹುಚನೂರ, ನಾಗರಾಜ ನವಲಹಳ್ಳಿ, ಮಂಜುನಾಥ ಸಜ್ಜನ, ದುಂಡಪ್ಪ ಕೊಳಜಿ, ಭೀಮಣ್ಣ ಕೊಳಜಿ, ಶರಣಪ್ಪ ಮೇಟಿ, ಅಮರೇಶ ಕುದ್ರಮೋತಿ, ಹನುಮಂತಪ್ಪ ಚರಾರಿ, ಬಸಣ್ಣ ಕೊಳಜಿ, ಈಶಪ್ಪ ಸಿದ್ದಾಪುರ ಇದ್ದರು.