ಜಿಲ್ಲೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು: ಗೃಹ ಸಚಿವ ಪರಮೇಶ್ವರ್‌

| Published : Dec 08 2024, 01:18 AM IST

ಜಿಲ್ಲೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು: ಗೃಹ ಸಚಿವ ಪರಮೇಶ್ವರ್‌
Share this Article
  • FB
  • TW
  • Linkdin
  • Email

ಸಾರಾಂಶ

ತುಮಕೂರು ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯಗಳ ಅಭಿವೃದಿಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಗೃಹ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು. ಕೊರಟಗೆರೆಯಲ್ಲಿ ಶಾಲಾ ಕೊಠಡಿ ಹಾಗೂ ಮೂಲಭೂತ ಸೌಕರ್ಯ ಕಾಮಗಾರಿಗಳ ಉದ್ಘಾಟನೆ ಮಾಡಿ ಮಾತನಾಡಿದರು.

೨ ಕೋಟಿ ವೆಚ್ಚದ ನೂತನ ಶಾಲಾ ಕಟ್ಟಡ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಕೊರಟಗೆರೆ ತುಮಕೂರು ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯಗಳ ಅಭಿವೃದಿಗೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಗೃಹ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು.ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ೨ ಕೋಟಿ ರು.ಗಳ ವೆಚ್ಚದಲ್ಲಿ ನಿರ್ಮಿಸಲಾದ ಪ್ರಾಥಮಿಕ, ಹಾಗೂ ಪ್ರೌಢಶಾಲೆಗಳ ನೂತನ ಶಾಲಾ ಕೊಠಡಿ ಹಾಗೂ ಮೂಲಭೂತ ಸೌಕರ್ಯ ಕಾಮಗಾರಿಗಳ ಉದ್ಘಾಟನೆ ಮಾಡಿ ಮಾತನಾಡಿದರು.ತುಮಕೂರು ಜಿಲ್ಲೆಯ ಸಮಗ್ರ ಅಭಿವೃದಿಗೆ ಎಲ್ಲರೂ ಸೇರಿ ಶ್ರಮಿಸುದ್ದೇವೆ ಈಗಾಗಲೆ ತುಮಕೂರು ಜಿಲ್ಲೆಯ ೧೨೫೯ ಕೋಟಿ ರು.ಗಳ ಅಭಿವೃದಿ ಕಾಮಗಾರಿಗಳನ್ನು ಮುಖ್ಯಮಂತ್ರಿಗಳ ಉದ್ಘಾಟಿಸಿದ್ದಾರೆ. ಹೊಳವನಹಳ್ಳಿಯ ಸರ್ಕಾರಿ ಶಾಲೆ ಕಟ್ಟಡಗಳ ನಿರ್ಮಾಣದ ಅಭಿವೃದ್ಧಿ ಕಾಮಗಾರಿ ಅದರಲ್ಲಿ ಸೇರಿದೆ. ಈಗ ನಾನು ಇಲ್ಲಿನ ಗ್ರಾಮಸ್ಥರ, ಶಿಕ್ಷಕರ ಆಶಯದಂತೆ ಇಲ್ಲಿಗೆ ಬಂದು ಉದ್ಘಾಟಿಸಿದ್ದೇನೆ ಎಂದರು.ಶಿಕ್ಷಣ ಜೀವನದಲ್ಲಿ ಮಹತ್ತರ ಬದಲಾವಣೆಯನ್ನು ತರುತ್ತದೆ ಶೈಕ್ಷಣಿಕ ಸಾಧನೆಗೆ ಬಡತನ ಅಡ್ಡ ಬರುವುದಿಲ್ಲ ಮಕ್ಕಳನ್ನು ಕಡ್ಡಾಯವಾಗಿ ತಂದೆ ತಾಯಿಗಳು ಶಾಲೆಗೆ ಕಳುಹಿಸಬೇಕು. ಶಿಕ್ಷಣದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಇಲ್ಲಿಯವರಿಗೆ ಸಾಧನೆ ಮಾಡಿರುವವರೆಲ್ಲಾ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳೇ ಆಗಿದ್ದು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ. ಹೊಳವನಹಳ್ಳಿಯ ಈ ಶಾಲೆಯಲ್ಲಿ ೧೨೦೦ ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದು ಇನ್ನು ಹೆಚ್ಚಿನ ಕಟ್ಟಡವನ್ನು ಮಂಜೂರು ಮಾಡಲಾಗುವುದು. ಈಗಾಗಲೇ ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ಗೆ ನೂರಾರು ಕೋಟಿಗಳ ವಿಶೇಷ ಅನುದಾನ ನೀಡಲಾಗಿದೆ ಎಲ್ಲಾರಿಗೂ ಶಿಕ್ಷಣ ನೀಡುವುದು ಸರ್ಕಾರದ ಉದ್ದೇಶವಾಗಿದೆ ಎಂದರು. ಗೃಹ ಸಚಿವ ಡಾ.ಜಿ.ಪರಮೇಶ್ವರರವರು ಹೊಳವನಹಳ್ಳಿ ಗ್ರಾಪಂಗೆ ಭೇಟಿ ನೀಡಿ ನೂತನ ಅಧ್ಯಕ್ಷೆ ಸುಮಿತ್ರ ಉಮೇಶ್ ರವರನ್ನು ಅಭಿನಂದಿಸಿ ಹೊಳವನಹಳ್ಳಿ ಗ್ರಾಪಂ ದೊಡ್ಡ ಪಂಚಾಯತಿಗಳಲ್ಲಿ ಒಂದಾಗಿದೆ, ಈ ಪಂಚಾಯತಿ ಸೇರಿದಂತೆ ಕ್ಷೇತ್ರದ ಎಲ್ಲಾ ಪಂಚಾಯಿತಿಗಳ ಮೂಲಭೂತ ಅಭಿವೃದ್ಧಿಗೆ ಬದ್ದವಿರುವುದಾಗಿ ತಿಳಿಸಿದರು, ಪಂಚಾಯತಿಯ ಗ್ರಾಮಗಳ ಅಭಿವೃದ್ಧಿ ಗೆ ಅಧ್ಯಕ್ಷರ ಒಳಗೊಂಡು ಎಲ್ಲ ಸದಸ್ಯರು ಒಂದಾಗಬೇಕು, ಚುನಾವಣೆ ಬಂದಾಗ ರಾಜಕೀಯ ಮಾಡಿ ಆದರೆ ಅಭಿವೃದ್ಧಿ ಬಡವರಿಗೆ ಸವಲತ್ತು ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡುವಾಗ ರಾಜಕೀಯ ಮಾಡಬೇಡಿ ಎಲ್ಲರೂ ಒಂದಾಗಿ ಪಂಚಾಯಿತಿ ಅಭಿವೃದ್ಧಿ ಗೆ ಶ್ರಮಿಸಿ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅಶೋಕ್, ತಹಸೀಲ್ದಾರ್ ಮಂಜುನಾಥ್, ಬಿಇಓ ನಟರಾಜು, ಸರ್ಕಾರಿ ನೌಕರ ಸಂಘದ ಅದ್ಯಕ್ಷ ರುದ್ರೇಶ್, ಪಿಡಿಓ ವಸಂತ್‌ಕುಮಾರ್ ಪ್ರಾಂಶುಪಾಲ ಈರಣ್ಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡ್ಲಹಳ್ಳಿ ಅಶ್ವಥನಾರಾಯಣ್, ಅರಕರೆ ಶಂಕರ್, ಮಹಿಳಾ ಅಧ್ಯಕ್ಷೆ ಜಯಮ್ಮ ಮುಖಂಡರಾದ ಮಹಾಲಿಂಗಪ್ಪ, ವಾಲೆಚಂದ್ರಯ್ಯ, ಜಯರಾಜ್, ಟಿ.ಡಿ.ದಿನೇಶ್, ಈಶ್ವರಯ್ಯ, ಜಯರಾಮ್, ಎಲ್.ರಾಜಣ್ಣ, ನಾಸೀರ್, ಕವಿತಾ, ಅಲ್ಲಾಭಕಾಶ್, ಸೇರಿದಂತೆ ಎಲ್ಲಾ ಸದಸ್ಯರು ಇತರರು ಹಾಜರಿದ್ದರು.