ಸರ್ಕಾರಗಳಿಂದ ಮಹಿಳಾ ಸಬಲೀಕರಣ ಒತ್ತು: ಸುಮಂಗಲಾ ಹಿರೇಮಣಿ

| Published : Mar 02 2025, 01:19 AM IST

ಸರ್ಕಾರಗಳಿಂದ ಮಹಿಳಾ ಸಬಲೀಕರಣ ಒತ್ತು: ಸುಮಂಗಲಾ ಹಿರೇಮಣಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆ ಅಬಲೆಯಲ್ಲ, ಸಬಲೆ. ಮಹಿಳೆಯರ ಸುರಕ್ಷತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿವೆ. ಮಹಿಳೆಯರ ರಕ್ಷಣೆಗಾಗಿ ಮಹಿಳಾ ಸಾಂತ್ವನ ಕೇಂದ್ರ, ಸಖಿ ಸೇರಿ ಇತರ ಕೇಂದ್ರಗಳನ್ನು ಆರಂಭಿಸಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸುಮಂಗಲಾ ಹಿರೇಮಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ನಗರದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ವಿಜಯ ಮಹಾಂತೇಶ ಕಲೆ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಮಹಿಳೆಯರಿಗೆ ಕಾನೂನು ಅರಿವು ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಸಖಿ ಕೇಂದ್ರದ ಮುಖ್ಯಸ್ಥೆ ಶಂಕ್ರಮ್ಮ ಜಂಬನಕಟ್ಟಿ ಸಖಿ ಯೋಜನೆ ಕುರಿತು ತಿಳಿಸಿದರು. ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆಯಾದಲ್ಲಿ ಸಖಿ ಕೇಂದ್ರಕ್ಕೆ ಸಂಪರ್ಕಿಸಬೇಕೆಂದರು.

ಮಹಿಳಾ ಸಾಂತ್ವನ ಕೇಂದ್ರದ ಸವಿತಾ ಆಚಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಖಿ ಕೇಂದ್ರದ ಅಡ್ವೋಕೇಟ್ ವಿಶಾಲಾಕ್ಷಿ ಮಹಿಳಾ ಕಾನೂನುಗಳ ಕುರಿತು ತಿಳಿಸಿದರು. ಕಾಲೇಜು ಪ್ರಾಚಾರ್ಯೆ ಬಿ.ಬಿ. ಸುಗ್ಗಮದ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಉಪನ್ಯಾಸ ಸಂಚಾಲಕ ಎಸ್.ಎಸ್. ಪಾಟೀಲ, ಎನ್ನೆಸ್ಸೆಸ್‌ ಅಧಿಕಾರಿ ಎಂ.ಎನ್. ಗೌಡರ, ಸ್ಕೌಟ್ಸ್‌ - ಗೈಡ್ಸ್ ಅಧಿಕಾರಿ ಎಸ್.ಆರ್. ಕಲ್ಯಾಣಶೆಟ್ಟಿ, ಐ.ಕ್ಯೂ.ಎ.ಸಿ ಅಧಿಕಾರಿ ಪಿ.ಆರ್. ಪಾಟೀಲ, ಒಕ್ಕೂಟ ಚೇರಮನ್ನರಾದ ಟಿ.ಎಂ. ಕುಲಕರ್ಣಿ ಉಪಸ್ಥಿತರಿದ್ದರು. ಸಹನಾ ಕೊಪ್ಪರದ ಪ್ರಾರ್ಥಿಸಿದರು. ದೇವಿ ಬಡಿಗೇರ ನಿರೂಪಿಸಿದರು.