ಸಾರಾಂಶ
ಯುವಜನತೆ ವ್ಯಕ್ತಿಕೇಂದ್ರಿತ ಬೆಳವಣಿಗೆಗಿಂತ ಸಮಾಜ ಕೇಂದ್ರಿತ ಬೆಳವಣಿಗೆಗೆ ಒತ್ತು ನೀಡಬೇಕೆಂದು ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್ ಕಿವಿಮಾತು ಹೇಳಿದರು.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಯುವಜನತೆ ವ್ಯಕ್ತಿಕೇಂದ್ರಿತ ಬೆಳವಣಿಗೆಗಿಂತ ಸಮಾಜ ಕೇಂದ್ರಿತ ಬೆಳವಣಿಗೆಗೆ ಒತ್ತು ನೀಡಬೇಕೆಂದು ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್ ಕಿವಿಮಾತು ಹೇಳಿದರು.ಅಹೋಬಿಲ ಮಠದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿಜಯ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ನಾಡು, ನುಡಿ, ದೇಶದ ಅಭಿವೃದ್ಧಿ ಚಿಂತನೆ ಬದಲಾಗಿ ಇಂದಿನ ಯುವಜನಾಂಗ ಬಹುತೇಕ ಸ್ವಾರ್ಥ ಹಿತಕ್ಕಾಗಿ ಚಿಂತಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾನೊಬ್ಬ ಬೆಳವಣಿಗೆಯಾದರೆ ಸಾಕು ಎನ್ನುವ ಮನಸ್ಥಿಗೆ ಯುವ ಸಮೂಹ ತಲುಪುತ್ತಿದೆ. ಇಂತಹ ಮನಸ್ಥಿತಿ ಬದಲಾಗದಿದ್ದರೆ ದೇಶ ಹಾಗೂ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವದ ನಿರ್ಮಾಣವಾದರೆ ದೇಶ ಅಭಿವೃದ್ಧಿಯತ್ತ ಸಾಗುತ್ತದೆ. ಆದ್ದರಿಂದ ಸಮಾಜಕೇಂದ್ರಿತ ಬೆಳವಣಿಗೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಗ್ರಾಮೀಣ ಪ್ರದೇಶದ ಕೆಲವು ಮಕ್ಕಳಲ್ಲಿ ಸಮಾಜಕ್ಕೆ ಕೊಡುಗೆ ನೀಡುವ ಮನೋಭಾವವಿದ್ದು ಸ್ವಾವಲಂಬನೆಯ ಪರಿಶ್ರಮದ ಜೀವನ ಮಾಡುತ್ತಾರೆ. ಆದರೆ, ನಗರ ಪ್ರದೇಶದ ಬಹುತೇಕ ವಿದ್ಯಾರ್ಥಿಗಳು ಸಂಪೂರ್ಣ ಪೋಷಕರ ಮೇಲೆ ಅವಲಂಬಿತರಾಗಿ ಐಷಾರಾಮಿ ಜೀವನಕ್ಕೆ ಮನಸೂತು ಸೋಮಾರಿಗಳಾಗುತ್ತಿದ್ದಾರೆ ಎಂದು ವಿಷಾದಿಸಿದರು.
ಸ್ವಾರ್ಥಚಿಂತನೆಯ ದಾಸರಾಗಿ, ಬೇಗ ಶ್ರೀಮಂತರಾಗಬೇಕು ಎಲ್ಲವೂ ನಾನು ಹೇಳಿದಂತೆ ನಡೆಯಬೇಕು ಎಂಬ ಮನೋಭಾವನೆ ಬೆಳೆಸಿಕೊಳ್ಳುತ್ತಿದ್ದಾರೆ. ಅದು ವ್ಯಕ್ತಿ ಹಾಗೂ ದೇಶದ ಅಭಿವೃದ್ಧಿಗೆ ಮಾರಕವಾಗಲಿದೆ. ಇಂತಹ ಮನೋಭಾವನೆ, ಅಘಾತಕಾರಿ ಚಿಂತನೆಗಳು ಅಪಾಯಕಾರಿಯಾಗುತ್ತಿದೆ ಎಂದು ಎಚ್ಚರಿಸಿದರು.ಈ ವೇಳೆ ಕರ್ನಾಟಕ ಗಾಂಧಿ ಭವನ ನಿರ್ದೇಶಕ ಪ್ರೊ ಜಿ.ಬಿ ಶಿವರಾಜು ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಕೃಷ್ಣ, ರಾಜೇಶ್, ಮೇಲುಕೋಟೆ ಬಾಲಕರ ಶಾಲೆ ಮುಖ್ಯಶಿಕ್ಷಕ ಸಂತಾನರಾಮನ್ ನಿವೃತ್ತ ಮುಖ್ಯಶಿಕ್ಷಕ ಮತ್ತಿತರರು ಭಾಗವಹಿಸಿದ್ದರು. ತುಳಸಿ ಹೂತೋಟ ನಿರ್ಮಿಸಿ - ಎಡೀಸಿಮೇಲುಕೋಟೆ: ಕಲ್ಯಾಣಿಯ ಸಾಲು ಮಂಟಪದ ಹಿಂಭಾಗ ಬೆಳೆದಿದ್ದ ಗಿಡಗಳನ್ನು ವಿದ್ಯಾರ್ಥಿಗಳು ಸ್ವಚ್ಚಗೊಳಿಸಿದ್ದಾರೆ. ಇಲ್ಲಿ ತುಳಸಿ ಹಾಗೂ ಹೂವಿನ ಗಿಡಗಳನ್ನು ನೆಟ್ಟು ಪೋಷಿಸಲು ದೇವಾಲಯದ ಇಒಗೆ ಸೂಚಿಸುತ್ತೇನೆ ಎಂದು ಎಡೀಸಿ ಡಾ.ಹೆಚ್.ಎಲ್.ನಾಗರಾಜು ತಿಳಿಸಿದರು. ನಿರ್ವಹಣೆ ಕೊರತೆಯಿಂದ ಸ್ಮಾರಕಗಳ ಸುತ್ತ ಅಶುಚಿತ್ವ ತಾಂಡವವಾಡುತ್ತಿದೆ. ಈಗ ಸ್ವಚ್ಚಗೊಂಡ ನಂತರ ಹೂ ತೋಟ ಮಾಡಬೇಕು ಎಂಬ ಸಾರ್ವಜನಿಕರ ಮನವಿ ಆಲಿಸಿ ಈ ಭರವಸೆ ನೀಡಿದರು. ದೇವಾಲಯದ ಜಮೀನಿನಲ್ಲಿ ನಿರ್ಮಾಣವಾಗುತ್ತಿರುವ ಅನ್ನದಾನ ಭವನದ ಕಾಂಪೌಂಡ್ ಕಾಮಗಾರಿಯನ್ನು ಕೆಲವು ವ್ಯಕ್ತಿಗಳು ವಿನಾಕಾರಣ ಸ್ಥಗಿತಗೊಳಿಸಿರುವ ಬಗ್ಗೆ ಮಾತನಾಡಿ, ದೇಗುಲದ ಜಾಗ ಬಿಡಲು ಯಾರಿಗೂ ಅವಕಾಶವಿಲ್ಲ. ಇದು ಸುಪ್ರೀಂಕೋರ್ಟ್ ಆದೇಶಕ್ಕೆ ವಿರುದ್ಧ ಕ್ರಮವಾಗುತ್ತದೆ ಎಂದರು. ದೇವಾಲಯದ ಆಸ್ತಿ ಮತ್ತು ಜಮೀನು ರಕ್ಷಣೆಗೆ ಜಿಲ್ಲಾಡಳಿತ ಬದ್ಧವಾಗಿದೆ. ಸಾರ್ವಜನಿಕರ ಸಲಹೆಯನ್ನು ಗಂಭೀರವಾಗಿ ಪರಿಶೀಲಿಸಿ, ಡೀಸಿಯೊಂದಿಗೆ ಚರ್ಚಿಸಿ ಶೀಘ್ರ ಕಾಂಪೌಂಡ್ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))