ಗ್ರಾಮೀಣ ಮಹಿಳೆಯರ ಆರೋಗ್ಯಕ್ಕೆ ಒತ್ತು ನೀಡಬೇಕು: ಫಾದರ್ ಶಾಂತರಾಜ್

| Published : Jun 10 2024, 12:50 AM IST

ಸಾರಾಂಶ

ಕಡೂರು, ಗ್ರಾಮೀಣ ಮಹಿಳೆಯರ ಆರೋಗ್ಯಕ್ಕೆ ಒತ್ತು ನೀಡಬೇಕು ಎಂದು ಹಾಸನ ಸಿಎಂಎಸ್ ಸಂಸ್ಥೆ ನಿರ್ದೇಶಕ ಫಾದರ್ ಶಾಂತರಾಜ್ ಹೇಳಿದರು.

- ಬಿಳುವಾಲದಲ್ಲಿ ಸಿಎಂಎಸ್ ಸಂಸ್ಥೆಯಿಂದ ಉಚಿತ ಆರೋಗ್ಯ ತಪಾಸಣೆ ಕನ್ನಡಪ್ರಭ ವಾರ್ತೆ, ಕಡೂರು

ಗ್ರಾಮೀಣ ಮಹಿಳೆಯರ ಆರೋಗ್ಯಕ್ಕೆ ಒತ್ತು ನೀಡಬೇಕು ಎಂದು ಹಾಸನ ಸಿಎಂಎಸ್ ಸಂಸ್ಥೆ ನಿರ್ದೇಶಕ ಫಾದರ್ ಶಾಂತರಾಜ್ ಹೇಳಿದರು.

ಶನಿವಾರ ತಾಲೂಕಿನ ಬಿಳುವಾಲ ಗ್ರಾಮದ ಸಮುದಾಯ ಭವನದಲ್ಲಿ ಹಾಸನ ಮೂಲದ ಸಿಎಂಎಸ್ ಸೇವಾ ಸಂಸ್ಥೆಯಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಇತ್ತೀಚೆಗೆ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲಿಯೇ ಕಂಡುಕೊಂಡು ಚಿಕಿತ್ಸೆ ಮೂಲಕ ರೋಗ ತಡೆಯಲು ಹಾಗೂ ಶಸ್ರ್ತ ಚಿಕಿತ್ಸೆ ಪಡೆಯಲು ಮಹಿಳೆಯರಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ಕಳೆದ 20 ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ನಮ್ಮ ಸಂಸ್ಥೆ ಮಹಿಳೆಯರಿಗೆ ಆರ್ಥಿಕ ಸ್ವಾವಲಂಭಿಯಾಗಲು ಶ್ರಮಿಸುತ್ತಿದೆ ಎಂದರು.

ಬಿಳುವಾಲದ ಆಯುರ್ವೇದಿಕ್ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಕಿರಣ್ ಮಾತನಾಡಿ ಮಹಿಳೆಯರಲ್ಲಿ ಹೆಚ್ಚಾಗಿ ಗರ್ಭಕೋಶ ಮತ್ತು ಸ್ತನ ಕ್ಯಾನ್ಸರ್ ಹೆಚ್ಚುತ್ತಿರುವುದು ವಿಷಾದಕರ. ಅದರಲ್ಲಿಯೂ ಗ್ರಾಮೀಣ ಮಹಿಳೆಯರಲ್ಲಿ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಆರೋಗ್ಯ ಇಲಾಖೆ ಸೇರಿದಂತೆ ಅನೇಕ ಸಂಘ, ಸಂಸ್ಥೆಗಳು ಕೈಜೋಡಿಸಿ ಉಚಿತ ತಪಾಸಣೆ ನಡೆಸಿ ಚಿಕಿತ್ಸೆ ನೀಡುತ್ತಿದ್ದು ಇದರಲ್ಲಿ ಹಾಸನ ಸಿಎಂಎಸ್ ಸಂಸ್ಥೆ ಒಂದಾಗಿದೆ ಎಂದರು.

ಸಂಸ್ಥೆ ಸಂಯೋಜಕಿ ವಿಕ್ಟೋರಿಯಾ ಡಿಸೋಜಾ ಮಾತನಾಡಿ, ಮಹಿಳೆಯರಿಗೆ ಕ್ಯಾನ್ಸರ್, ಬಿಪಿ, ಸಕ್ಕರೆ ಖಾಯಿಲೆ ಹಾಗೂ ಕಣ್ಣು ಪರೀಕ್ಷೆಗಳನ್ನು ಕಾಲ ಕಾಲಕ್ಕೆ ಮಾಡಿಸಿಕೊಳ್ಳುತ್ತಿದ್ದರೆ ಮುಂದೆ ಬರುವಂತಹ ರೋಗಗಳನ್ನು ತಡೆಯಲು ಸಾಧ್ಯ ಎಂದರು.

ಸಂಸ್ಥೆ ಕಾರ್ಯಕರ್ತೆಯರಾದ ಕಲ್ಪನಾ, ನೇತ್ರಾ ಮತ್ತು ಶೋಭಾ ಶಿಬಿರದ ನೇತೃತ್ವ ವಹಿಸಿದ್ದರು. ಸುಮಾರು 200ಕ್ಕೂ ಹೆಚ್ಚಿನ ಗ್ರಾಮಸ್ಥರು ತಪಾಸಣೆಗೆ ಒಳಗಾದರು.ಸಮಸ್ಯೆ ಕಂಡು ಬಂದವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಉತ್ತಮ ಆಸ್ಪತ್ರೆಗೆ ತೆರಳಲು ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಂಜಪ್ಪ, ಶರತ್, ವೀಣಾ, ಅನಿತಾ, ಶ್ರೀನಿಧಿ ನೇತ್ರಾಲಯದ ಸಿಬ್ಬಂದಿ ಇದ್ದರು.8ಕೆಕೆಡಿಯು3.

ಕಡೂರು ತಾಲೂಕು ಬಿಳುವಾಲ ಗ್ರಾಮದಲ್ಲಿ ಹಾಸನದ ಸಿಎಂಎಸ್ ಸಂಸ್ಥೆ ಆಯೋಜಿಸಿದ್ದ ಆರೋಗ್ಯ ಶಿಬಿರವನ್ನು ಫಾದರ್ ಶಾಂತರಾಜ್ ಉದ್ಘಾಟಿಸಿದರು. ಡಾ.ಕಿರಣ್ ಮತ್ತಿತರರು ಇದ್ದರು.