ಸಾರಾಂಶ
ಕಬಡ್ಡಿ, ಫುಟ್‌ಬಾಲ್‌ನಂತಹ ಕ್ರೀಡೆಯಿಂದ ಶಾರೀರಿಕ ಸದೃಢತೆಗೆ ನೆರವಾಗುತ್ತವೆ. ಜೊತೆಗೆ, ಕ್ರೀಡೆಗಳು ಭಾವೈಕ್ಯತೆ ಮೂಡಿಸುವ ಯೋಗ್ಯ ಸಾಧನಗಳಾಗಿದ್ದು ಶಾಲಾ ಹಂತದಿಂದಲೇ ಮಕ್ಕಳನ್ನು ಕ್ರೀಡೆಗಳಲ್ಲಿ ಭಾಗವಹಿಸಲು ಉತ್ತೇಜಿಸಬೇಕು. ಕ್ರೀಡಾಕ್ಷೇತ್ರದ ಸಾಧನೆಯು ವ್ಯಕ್ತಿತ್ವ ವಿಕಸನ ಹಾಗೂ ಉದ್ಯೋಗಗಳಿಸಲು ದಾರಿ ತೋರುತ್ತವೆ.
ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ದೈಹಿಕ ಶಿಕ್ಷಣ ಚಟುವಟಿಕೆಗಳು ಶಾರೀರಿಕ ಅಂಗಾಗಳನ್ನು ಬಲಗೊಳಿಸುವ ಜೊತೆಗೆ ಮಾನಸಿಕ ಹಾಗೂ ಭಾವನ್ಮಾಕ ವಿಕಾಸಕ್ಕೆ ಪೂರಕವಾಗಿದ್ದು, ಅವು ಸಮತೂಕ ವ್ಯಕ್ತಿತ್ವ ನಿರ್ಮಾಣಕ್ಕೆ ನೆರವಾಗುತ್ತವೆ ಎಂದು ಶಾಂತಾ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ.ಕೋಡಿರಂಗಪ್ಪ ತಿಳಿಸಿದರು.ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಶಾಂತಾ ಶಿಕ್ಷಣ ಸಂಸ್ಥೆಯಲ್ಲಿ ಭಾರತೀಯ ಶಾಲಾ ಶಿಕ್ಷಣ ಪರೀಕ್ಷಾ ಮಂಡಳಿಯು ಆಯೋಜಿಸಿದ್ದ ಬೆಂಗಳೂರು ದಕ್ಷಿಣ ವಲಯದ 14ರ ಒಳಗಿನ ಮತ್ತು 17ರ ಒಳಗಿನ ವಯೋಮಾನದವರ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು, ಕ್ರೀಡೆಗಳಲ್ಲಿ ಪಾಲ್ಗೊಳ್ಳಿ:
ಮನುಷ್ಯನಿಗೆ ಶಾರೀರಿಕ ಸದೃಢತೆ, ಜ್ಞಾನೇಂದ್ರಿಯಗಳ ಪಟುತ್ವ ಮತ್ತು ಸಮನ್ವಯತೆಯನ್ನು ಸಾಧಿಸದೆ ಪರಿಪೂರ್ಣ ಶಿಕ್ಷಣ ಅಸಾಧ್ಯ. ಆದ್ಧರಿಂದ, ಭೌದ್ಧಿಕ ಚಟುವಟಿಕೆಗಳ ಜೊತೆ ದೈಹಿಕ ಚಟುವಟಿಕೆಗಳು ಮಹತ್ವವೆನಿಸುತ್ತವೆ. ಸದೃಢ ಶರೀರದಲ್ಲಿ ಮಾತ್ರ ಸದೃಢ ಮನಸ್ಸು ಎಂಬ ಮಾತಿನಂತೆ ಸದೃಢ, ಸ್ವಾಸ್ಥ್ಯ ಶರೀರದಲ್ಲಿ ಮಾತ್ರ ಮನಸ್ಸು, ಚಿಂತನೆ ಹಾಗೂ ಜ್ಞಾನೇಂದ್ರೀಯಗಳು ಕ್ರಿಯಾತ್ಮಕವಾಗಿ ವಿಕಸನವಾಗಲು ಸಾಧ್ಯ ಎಂಬ ನಂಬಿಕೆ ಇದೆ. ಬಾಲ್ಯದಿಂದ ಹದಿಹರೆಯದವರೆಗೆ ವಿವಿಧ ರೀತಿಯ ಶೈಕ್ಷಣಿಕ ಹಿನ್ನೆಲೆಯುಳ್ಳ ಮಕ್ಕಳು ಕ್ರೀಡೆ ಹಾಗೂ ಪಂದ್ಯಾವಳಿಗಳಲ್ಲಿ ಭಾಗಿಗಳಾಗುವುದರಿಂದ ಶಾರೀರಿಕ ವಿಕಸನ, ತನ್ಮೂಲಕ ಮಾನವ ಅಂತರ ಸಂಬಂಧಗಳು ಮೂಡುತ್ತವೆ.ಶಿಕ್ಷಣದ ಜತೆಗೆ ಕ್ರೀಡೆಗೂ ಅವಕಾಶ
ಕಬಡ್ಡಿ, ಫುಟ್‌ಬಾಲ್‌ನಂತಹ ಕ್ರೀಡೆಯಿಂದ ಶಾರೀರಿಕ ಸದೃಢತೆಗೆ ನೆರವಾಗುತ್ತವೆ. ಜೊತೆಗೆ, ಕ್ರೀಡೆಗಳು ಭಾವೈಕ್ಯತೆ ಮೂಡಿಸುವ ಯೋಗ್ಯ ಸಾಧನಗಳಾಗಿದ್ದು ಶಾಲಾ ಹಂತದಿಂದಲೇ ಮಕ್ಕಳನ್ನು ಕ್ರೀಡೆಗಳಲ್ಲಿ ಭಾಗವಹಿಸಲು ಉತ್ತೇಜಿಸಬೇಕು. ಕ್ರೀಡಾಕ್ಷೇತ್ರದ ಸಾಧನೆಯು ವ್ಯಕ್ತಿತ್ವ ವಿಕಸನ ಹಾಗೂ ಉದ್ಯೋಗಗಳಿಸಲು ದಾರಿ ತೋರುತ್ತವೆ. ಆದ್ದರಿಂದ ಪ್ರತಿ ಶಾಲೆಯ ಉತ್ತಮ ಶಿಕ್ಷಣದ ಜೊತೆಗೆ ಕ್ರೀಡಾ ಅವಕಾಶಗಳನ್ನು ಕಲ್ಪಿಸಬೇಕೆಂದರು.ಶಾಂತಾ ಶಿಕ್ಷಣ ಸಂಸ್ಥೆಗಳ ಡೀನ್ ಹಾಗೂ ಪ್ರಾಂಶುಪಾಲ ಡಾ.ನವೀನ್ ಸೈಮನ್ ಕಬಡ್ಡಿ ಪಂದ್ಯಾವಳಿಗೆ ತಂಡಗಳಿಗೆ ಪಂದ್ಯದ ನಿಯಮಾವಳಿಗಳನ್ನು ತಿಳಿಸಿ, ಶಾಲೆಗಳಿಗೆ ಅಭಿನಂದನೆಗಳನ್ನು ಹೇಳಿದರು.
ಸುರಕ್ಷತೆಯ ನಿಯಮ:ಸ್ಥಳೀಯ ಆರಕ್ಷಕ ಹೆಡ್ ಕಾನ್ಸ್‌ಟೆಬಲ್ ಶ್ರೀನಿವಾಸ್‌ರವರು ಸ್ಪರ್ಧಾಳುಗಳಿಗೆ ಸುರಕ್ಷತೆಯ ನಿಯಮಗಳನ್ನು ತಿಳಿಸಿದರು. ಪಂದ್ಯಾವಳಿಯನ್ನು ನಡೆಸಿಕೊಟ್ಟ ವಿವಿಧ ಶಾಲೆಗಳ ದೈಹಿಕ ಶಿಕ್ಷಕರಾದ ಶಶಿಧರ್, ವೆಂಕಟೇಶ್, ಮುರಳಿ, ಮಂಜುನಾಥ್, ಮನೋಹರ್ ಹಾಗೂ ಶಾಂತಾ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕರಾದ ರಾಜೇಶ್ ಮತ್ತು ಸಂದೇಶ್‌ರವರ ಶ್ರಮವನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ವಲಯ ಕಬ್ಬಡ್ಡಿ ಪಂದ್ಯಾವಳಿಯ ಸಂಘಟಕರಾದ ಶಾಂತಾ ವಿದ್ಯಾನಿಕೇತನ ಪ್ರಾಂಶುಪಾಲ ಡಾ.ಪ್ರಸಾದ್, ಶ್ರೀನಿವಾಸ್, ವೆಂಕಟೇಶ್, ಶಶಿಧರ್, ಸಿರೀಷ, ಕಛೇರಿ ವ್ಯವಸ್ಥಾಪಕ ಶರವಣ, ರಾಧಾ, ಸನಾ, ರೇಷ್ಮ ಹಾಗೂ ಶಾಂತಾ ವಿದ್ಯಾನಿಕೇತನದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.