ಉದ್ಯೋಗಸ್ಥರಿಗೆ ಭಾವನಾತ್ಮಕವಾಗಿ ಬೆರೆಯುವ ಬುದ್ಧಿವಂತಿಕೆಯೂ ಅಗತ್ಯ: ಪ್ರೊ.ಎನ್.ಕೆ.ಲೋಕನಾಥ್

| Published : Jun 14 2024, 01:03 AM IST

ಉದ್ಯೋಗಸ್ಥರಿಗೆ ಭಾವನಾತ್ಮಕವಾಗಿ ಬೆರೆಯುವ ಬುದ್ಧಿವಂತಿಕೆಯೂ ಅಗತ್ಯ: ಪ್ರೊ.ಎನ್.ಕೆ.ಲೋಕನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ಕೈಗಾರಿಕೆ, ಸಂಸ್ಥೆಗಳಲ್ಲಿ ಕೆಲಸ ಮಾಡುವಾಗ ಕೇವಲ ಕ್ಷೇತ್ರದ ಜ್ಞಾನ, ಬುದ್ಧಿವಂತಿಕೆ ಪಡೆದಿದ್ದರೆ ಸಾಲದು. ಕೃತಕ ಬುದ್ದಿಮತ್ತೆ ಬುದ್ದಿವಂತಿಕೆಗೆ ಮತ್ತಷ್ಟು ಉತ್ತೇಜನಕಾರಿಯಾಗಿ ಕೆಲಸ ಮಾಡುತ್ತದೆ. ಅನೇಕ ಕ್ಷೇತ್ರಗಳಿಗೆ ಸಂಬಂಧಿಸಿದ ವಿಷಯವನ್ನು ಹೊಂದಿರುವ ಏಕೈಕ ಕ್ಷೇತ್ರವೆಂದರೆ ಅದು ಭೂ ವಿಜ್ಞಾನ. ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಣ ಪಡೆಯುವಾಗ ಬದಲಾಗುತ್ತಿರುವ ಪರಿಸರಕ್ಕೆ ತಕ್ಕಂತೆ ತಮ್ಮ ಅಭ್ಯಾಸ ಕ್ರಮವನ್ನೂ ಪರಿವರ್ತಿಸಿಕೊಳ್ಳಬೇಕಾದ ಅಗತ್ಯತೆ ಇದೆ.

ಕನ್ನಡಪ್ರಭ ವಾರ್ತೆ ಮೈಸೂರು

ಯಾವುದೇ ಕೈಗಾರಿಕೆ, ಸಂಸ್ಥೆಗಳಲ್ಲಿ ಕೆಲಸ ಮಾಡುವಾಗ ಕೇವಲ ಕ್ಷೇತ್ರದ ಜ್ಞಾನ, ಬುದ್ಧಿವಂತಿಕೆ ಪಡೆದಿದ್ದರೆ ಸಾಲದು. ಇದರ ಜತೆಗೆ ಮತ್ತೊಬ್ಬರೊಂದಿಗೆ ಭಾವನಾತ್ಮಕವಾಗಿ ಬೆರೆಯುವ ಬುದ್ಧಿವಂತಿಕೆಯೂ ಅವಶ್ಯಕ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಹೇಳಿದರು.

ಮಾನಸಗಂಗೋತ್ರಿ ಮೈಸೂರು ವಿವಿ ಭೂ ವಿಜ್ಞಾನ ವಿಭಾಗ ಆಯೋಜಿಸಿದ್ದ ಜಿಯಾಲಾಜಿಕಲ್ ಸೊಸೈಟಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು.

ಕೃತಕ ಬುದ್ದಿಮತ್ತೆ ಬುದ್ದಿವಂತಿಕೆಗೆ ಮತ್ತಷ್ಟು ಉತ್ತೇಜನಕಾರಿಯಾಗಿ ಕೆಲಸ ಮಾಡುತ್ತದೆ. ಅನೇಕ ಕ್ಷೇತ್ರಗಳಿಗೆ ಸಂಬಂಧಿಸಿದ ವಿಷಯವನ್ನು ಹೊಂದಿರುವ ಏಕೈಕ ಕ್ಷೇತ್ರವೆಂದರೆ ಅದು ಭೂ ವಿಜ್ಞಾನ. ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಣ ಪಡೆಯುವಾಗ ಬದಲಾಗುತ್ತಿರುವ ಪರಿಸರಕ್ಕೆ ತಕ್ಕಂತೆ ತಮ್ಮ ಅಭ್ಯಾಸ ಕ್ರಮವನ್ನೂ ಪರಿವರ್ತಿಸಿಕೊಳ್ಳಬೇಕಾದ ಅಗತ್ಯತೆ ಇದೆ ಎಂದರು.

ಹೀಗಾಗಿ ಸಮಸ್ಯೆಗಳ ಬಗ್ಗೆ ಚಿಂತಿಸದೆ, ಹೊಸ ಹೊಸ ಆವಿಷ್ಕಾರ ಹುಡುಕುವತ್ತ ವಿದ್ಯಾರ್ಥಿಗಳು ಸದಾ ಚಿಂತನೆ, ಪ್ರಯತ್ನ ನಡೆಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ದಶಕಗಳ ಹಿಂದೆ ವಿವಿಯ ಭೂ ವಿಜ್ಞಾನ ವಿಭಾಗ ಸ್ಥಾಪಿಸಲಾಗಿದ್ದು, ಈಗ ಪುನಶ್ಚೇತನಗೊಳಿಸಲಾಗಿರುವ ಜಿಯಾಲಾಜಿಕಲ್ ಸೊಸೈಟಿಯ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಕೌಶಲವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದರು.

ಈ ವೇಳೆ ಭೂ ವಿಜ್ಞಾನ ಸ್ನಾತಕೋತ್ತರ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದು, ಇತ್ತೀಚೆಗೆ ಕೆ- ಸೆಟ್ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಪಡೆದಿರುವ ನಾಲ್ವರು ವಿದ್ಯಾರ್ಥಿಗಳಾದ ನಿತ್ಯಾನಂದ ಬಿಡಾಕರ್, ರವಿತೇಜಸ್, ದೀಕ್ಷಿತ್, ಶ್ರೇಯಸ್ ರೇವಣ್ಣ ಅವರನ್ನು ಅಭಿನಂದಿಸಲಾಯಿತು.

ಭೂ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಎ. ಬಾಲಸುಬ್ರಹ್ಮಣಿಯನ್ ಮಾತನಾಡಿದರು. ಭೂ ವಿಜ್ಞಾನ ವಿಭಾಗದ ಅಧ್ಯಕ್ಷ ಪ್ರೊ.ಡಿ. ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ಜಿಯಾಲಾಜಿಕಲ್ ಸೊಸೈಟಿ ಕಾರ್ಯದರ್ಶಿ ಡಾ.ಕೆ. ನಮ್ರತಾ, ಖಜಾಂಚಿ ಡಾ.ಎಂ. ಅಭಿಜಿತ್, ಡಾ.ಕೆ. ಸಿದ್ದರಾಜು, ಡಾ.ಬಿ.ವಿ. ಸುರೇಶ್ ಕುಮಾರ್, ವಿದ್ಯಾರ್ಥಿಗಳು ಇದ್ದರು.