ನೌಕರರ ಸಂಘದ ಚುನಾವಣೆ: 28 ಸ್ಥಾನಗಳಿಗೆ ಅವಿರೋಧ ಆಯ್ಕೆ

| Published : Oct 24 2024, 12:33 AM IST

ಸಾರಾಂಶ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹುಕ್ಕೇರಿ ತಾಲೂಕು ಶಾಖೆಯ 2024-29ನೇ ಅವಧಿಗೆ ನಡೆದ ಚುನಾವಣೆಯಲ್ಲಿ 28 ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹುಕ್ಕೇರಿ ತಾಲೂಕು ಶಾಖೆಯ 2024-29ನೇ ಅವಧಿಗೆ ನಡೆದ ಚುನಾವಣೆಯಲ್ಲಿ 28 ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ.

ಒಟ್ಟು 33 ನಿರ್ದೇಶಕ ಬಲದ ಈ ಶಾಖೆಗೆ 28 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು 4 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 1 ನಾಮಪತ್ರ ತಿರಸ್ಕೃತಗೊಂಡಿದೆ. ಅ.28 ರಂದು ಮತದಾನ ನಡೆಯಲಿದ್ದು ಅಂದೇ ಫಲಿತಾಂಶ ಪ್ರಕಟವಾಗಲಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ತಾಪಂನಿಂದ ಅವಿನಾಶ ಹೊಳೆಪ್ಪಗೋಳ, ರವೀಂದ್ರ ಕಂಕಣವಾಡಿ, ಶಿವಲಿಂಗ ಢಂಗ, ಕಂದಾಯ ಇಲಾಖೆಯಿಂದ ಎನ್.ಆರ್.ಪಾಟೀಲ, ಬಿ.ಕೆ.ಚೌಗಲಾ, ಕೃಷಿ ಇಲಾಖೆಯಿಂದ ಪುರುಷೋತ್ತಮ ಪಿರಾಜೆ, ಲೋಕೋಪಯೋಗಿ ಇಲಾಖೆಯಿಂದ ವಿಶ್ವನಾಥ ಹಿರೇಮಠ, ಪಂಚಾಯತ್‌ರಾಜ್ ಇಂಜನೀಯರಿಂಗ್ ಇಲಾಖೆಯಿಂದ ಶಶಿಧರ ಭೂಸಗೋಳ, ಸಾರ್ವಜನಿಕ ಶಿಕ್ಷಣ ಇಲಾಖೆ ಆಡಳಿತ ಕಚೇರಿಯಿಂದ ಪ್ರಭಾವತಿ ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಎಚ್.ಹೊಳೆಪ್ಪ, ನಗರಾಭಿವೃದ್ಧಿ ಹಾಗೂ ಪೌರಾಡಳಿತ ಇಲಾಖೆಯಿಂದ ಈಶ್ವರ ಸಿದ್ನಾಳ, ಪ್ರಧಾನಮಂತ್ರಿ ಪೋಷಣ ಅಭಿಯಾನದ ಅಕ್ಷರ ದಾಸೋಹದಿಂದ ಸವಿತಾ ಹಲಕಿ, ಸರ್ಕಾರಿ ಪ್ರೌಢಶಾಲೆಗಳಿಂದ ಶಿವನಾಯಿಕ ನಾಯಿಕ, ಪಶುಸಂಗೋಪನೆ ಇಲಾಖೆಯಿಂದ ಡಾ.ಸಿದ್ಧಾರೋಡ ಮೋಕಾಶಿ, ಸರ್ಕಾರಿ ಪಪೂ ಕಾಲೇಜುಗಳು ಮತ್ತು ಪದವಿ ಕಾಲೇಜುಗಳಿಂದ ಮಲ್ಲಪ್ಪಾ ಮಗದುಮ್ಮ, ಅರಣ್ಯ ಇಲಾಖೆಯಿಂದ ರಾಜು ಪಾಟೀಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕ ಆಸ್ಪತ್ರೆಯಿಂದ ಎಂ.ಎ.ಬೆಟಗೇರಿ, ತಾಲೂಕು ಆರೋಗ್ಯ ಅಧಿಕಾರಿ ಕಚೇರಿಯಿಂದ ಮಹಾಬಳೇಶ್ವರ ಪಾಟೀಲ, ನವೀನಕುಮಾರ ಬಾಯನಾಯ್ಕ, ಸೌಜನ್ಯಾ ಕೆಳಗಡೆ, ಕೆ.ಎ.ದುಪಟ್ಟಿ, ತೋಟಗಾರಿಕೆ-ರೇಷ್ಮೆ ಮತ್ತು ಕೃಷಿ ಇಲಾಖೆಯಿಂದ ಶಾಂತಿನಾಥ ಮುಗಳಖೋಡ, ಖಜಾನೆ ಇಲಾಖೆಯಿಂದ ಸುಭಾಷ ಝಂಡೆನ್ನವರ, ಭೂಮಾಪನ ಇಲಾಖೆಯಿಂದ ಮಯೂರ ತಮ್ಮಣ್ಣವರ, ನ್ಯಾಯಾಂಗ ಇಲಾಖೆಯಿಂದ ರಾಧೇಶಾಮ ಮಾಳಿ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯಿಂದ ಸಿ.ಎ.ಪಾಟೀಲ, ಅಬಕಾರಿ ಮತ್ತು ವಾಣಿಜ್ಯ ತೆರಿಗೆಗಳ ಇಲಾಖೆಯಿಂದ ವಿಜಯಕುಮಾರ ಮೆಳವಂಕಿ, ಸಹಕಾರ ಮತ್ತು ಸಹಕಾರ ಸಂಘಗಳ ಲೆಕ್ಕಪರಿಶೋಧನೆ ಹಾಗೂ ಸಾಂಖ್ಯಿಕ ಇಲಾಖೆ ಮತ್ತು ಕಾರ್ಮಿಕ ಇಲಾಖೆಯಿಂದ ಗಿರೀಶ ವಾಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಇನ್ನುಳಿದ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸರ್ಕಾರಿ ಪ್ರಾಥಮಿಕ ಶಾಲೆಗಳ ಕ್ಷೇತ್ರದಿಂದ ಮೂರು ಸ್ಥಾನಗಳಿಗೆ ಆಯ್ಕೆ ಬಯಸಿ ಬಸಯ್ಯಾ ಪೂಜೇರಿ, ಬಾಳಪ್ಪಾ ವಜಿರೇ, ಎಂ.ಬಿ.ನಾಯಿಕ, ಮಾಯಾ ನಂದಿ, ಸಾಕೀಬಅಲಿ ಕಮತೆ, ಎಸ್.ಎಸ್.ಹಿರೇಮಠ ಅಂತಿಮವಾಗಿ ಕಣದಲ್ಲಿದ್ದಾರೆ.

ಅದರಂತೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆ ಕ್ಷೇತ್ರದಿಂದ ಒಂದು ಸ್ಥಾನಕ್ಕೆ ಆಯ್ಕೆ ಬಯಸಿ ನಾಗವೀಣಾ ಹೊಳೆಯಾಚೆ, ಆರ್.ಎಸ್.ಮಾಳಗಿ, ಲಗಮಣ್ಣಾ ಮಾಲದಾರ ಅಂತಿಮವಾಗಿ ಕಣದಲ್ಲಿದ್ದಾರೆ ಎಂದು ಚುನಾವಣಾಧಿಕಾರಿಯೂ ಆದ ಸಹಾಯಕ ಕೃಷಿ ನಿರ್ದೇಶಕ ಆರ್.ಬಿ.ನಾಯ್ಕರ ಘೋಷಿಸಿದ್ದಾರೆ. ಸಹಾಯಕ ಚುನಾವಣಾಧಿಕಾರಿಯಾಗಿ ಕಿರಣ ಅಂಬೇಕರ ಕಾರ್ಯನಿರ್ವಹಿಸಿದ್ದಾರೆ.

---------

22ಎಚ್‌ಯುಕೆ-1

ಅವಿರೋಧ ಆಯ್ಕೆಯಾದ ನಿರ್ದೇಶಕರು