ಸಾರಾಂಶ
ಹಾನಗಲ್ಲ: ಗ್ರಾಮ ಪಂಚಾಯಿತಿ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದೇವಾಲಯವಿದ್ದಂತೆ. ಗ್ರಾಮದ ಅಭಿವೃದ್ಧಿಯ ಬಗ್ಗೆ ಪ್ರತಿಯೊಬ್ಬ ಸಾರ್ವಜನಿಕರೂ ಚಿಂತಿಸಿ, ತಮ್ಮ ಪಾಲಿನ ಜವಾಬ್ದಾರಿ, ಕರ್ತವ್ಯ ನಿರ್ವಹಿಸಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.
ತಾಲೂಕಿನ ಉಪ್ಪುಣಸಿ ಗ್ರಾಮದಲ್ಲಿ ₹30 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಗ್ರಾಪಂ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಸ್ಥಳೀಯ ಸಂಸ್ಥೆಗಳ ಸಬಲೀಕರಣಕ್ಕೆ ಸರ್ಕಾರ ಶ್ರಮ ವಹಿಸಿದೆ. ಆಡಳಿತ ವಿಕೇಂದ್ರೀಕರಣದ ಮೂಲಕ ಸ್ಥಳೀಯ ಸಂಸ್ಥೆಗಳಿಗೆ ಶಕ್ತಿ ತುಂಬಲಾಗಿದೆ ಎಂದರು.ಗ್ರಾಮ ಪಂಚಾಯಿತಿಗಳ ಉತ್ತಮ ಕಾರ್ಯ ನಿರ್ವಹಣೆಗೆ ಅನುಕೂಲವಾಗಲು ಸುಸಜ್ಜಿತ ಕಟ್ಟಡ ಒದಗಿಸಲು ಗಮನ ನೀಡಲಾಗಿದೆ. ಮನಮೋಹನ್ ಸಿಂಗ್ ಅವಧಿಯಲ್ಲಿ ಜಾರಿಗೆ ತಂದಿರುವ ಉದ್ಯೋಗ ಖಾತ್ರಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಕಾಳಜಿ ವಹಿಸಬೇಕಿದ್ದು, ಖಾತ್ರಿ ಯೋಜನೆಯ ಮೂಲಕ ಅಭಿವೃದ್ಧಿ ಕ್ರಾಂತಿ ಮಾಡಲು ಸಾಧ್ಯವಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಬಾಬಾಜಾನ್ ಬಂಕಾಪೂರ ಮಾತನಾಡಿ, ಸಾರ್ವಜನಿಕರು ನಿಗದಿತ ಸಮಯಕ್ಕೆ ತೆರಿಗೆ ಭರಿಸಿದರೆ ಸಾರ್ವಜನಿಕರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಅನುಕೂಲವಾಗಲಿದೆ ಎಂದರು.ಗ್ರಾಪಂ ಉಪಾಧ್ಯಕ್ಷೆ ಅಕ್ಕಮ್ಮ ಗಂಟೇರ, ಜಿಪಂ ಮಾಜಿ ಸದಸ್ಯ ಮಹದೇವಪ್ಪ ಬಾಗಸರ, ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಮುಖಂಡರಾದ ಸಿ.ಎಂ. ದೊಡ್ಡಚಿಕ್ಕಣ್ಣನವರ, ಫಕ್ಕೀರಪ್ಪ ಹುರುಳಿಕುಪ್ಪಿ, ಶಿವಯೋಗಪ್ಪ ಮಲ್ಲಿಗಾರ, ಭರಮಣ್ಣ ಶಿವೂರ, ಉಮೇಶ ಗೌಳಿ, ನಿಂಗಪ್ಪ ಕೊಪ್ಪದ, ಗುಡ್ಡಪ್ಪ ಬ್ಯಾಗವಾದಿ, ಕರಿಯಪ್ಪ ಗಂಟೇರ, ಯಲ್ಲಪ್ಪ ದೊಡ್ಡಚಿಕ್ಕಣ್ಣನವರ, ಲಕ್ಕಪ್ಪ ಗಂಟೇರ, ನಿಂಗಪ್ಪ ಗಾಜಿ, ಮೈಲಾರೆಪ್ಪ ಹೆಬ್ಬಾಳ, ಅಜ್ಜಪ್ಪ ಗಂಟೇರ, ರಾಮಪ್ಪ ದೊಡ್ಡಮನಿ, ಬಂಗಾರಪ್ಪ ಹರಿಜನ, ಫಕ್ಕೀರಪ್ಪ ಗುಡೇರ, ಗುಡ್ಡಪ್ಪ ಹಾದಿಮನಿ, ಗುಡ್ಡಪ್ಪ ತರದಳ್ಳಿ, ಉಸ್ಮಾನ್ ಮುಲ್ಲಾ, ಸದ್ದಾಮ್, ಕುತಬು ಇದ್ದರು.