ನೌಕರಿ ಕೊಡಿಸುವುದಾಗಿ ವಂಚನೆ: ಪ್ರಕರಣ ದಾಖಲು

| Published : May 21 2024, 12:44 AM IST

ನೌಕರಿ ಕೊಡಿಸುವುದಾಗಿ ವಂಚನೆ: ಪ್ರಕರಣ ದಾಖಲು
Share this Article
  • FB
  • TW
  • Linkdin
  • Email

ಸಾರಾಂಶ

ಅಘನಾಶಿನಿಯ ಮಾಲಿನಿ ಗಣಪತಿ ಅಂಬಿಗ ಹಾಗೂ ಪೈರಗದ್ದೆ ನಿವಾಸಿ ಶ್ರೀಧರ ಗಣೇಶ ಕುಮಟಾಕರ ವಂಚನೆ ಪ್ರಕರಣದ ಆರೋಪಿಗಳಾಗಿದ್ದಾರೆ.

ಕುಮಟಾ: ಸರ್ಕಾರಿ ನೌಕರಿ ಕೊಡಿಸುತ್ತೇನೆಂದು ₹೩ ಲಕ್ಷ ಪಡೆದು ವಂಚಿಸಿದ ಬಗ್ಗೆ ಇಬ್ಬರ ಮೇಲೆ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ತಾಲೂಕಿನ ಅಘನಾಶಿನಿಯ ಕೆಳಗಿನಕೇರಿಯ ನರ್ಸ್‌ ಕೆಲಸ ಮಾಡುವ ಶೋಭಾ ಪರಮೇಶ್ವರ ಗೌಡ(೨೮) ಸರ್ಕಾರಿ ನೌಕರಿ ಆಸೆಗೆ ಹಣ ಕೊಟ್ಟು ಮೋಸಹೋದ ಮಹಿಳೆಯಾಗಿದ್ದು, ಅಘನಾಶಿನಿಯ ಮಾಲಿನಿ ಗಣಪತಿ ಅಂಬಿಗ ಹಾಗೂ ಪೈರಗದ್ದೆ ನಿವಾಸಿ ಶ್ರೀಧರ ಗಣೇಶ ಕುಮಟಾಕರ ವಂಚನೆ ಪ್ರಕರಣದ ಆರೋಪಿಗಳಾಗಿದ್ದಾರೆ.

ಆರೋಪಿಗಳು ೨೦೨೨ರ ಆಗಸ್ಟ್‌ನಲ್ಲಿ ಸ್ಟಾಫ್ ನರ್ಸ್‌ ಸರ್ಕಾರಿ ನೌಕರಿ ಕೊಡಿಸುವುದಾಗಿ ₹೩ ಲಕ್ಷರೂ ಪಡೆದುಕೊಂಡಿದ್ದು, ಈ ಬಗ್ಗೆ ಲಿಖಿತವಾಗಿ ಬರೆದು ಕೊಟ್ಟಿದ್ದರು. ಆರೋಪಿಗಳು ತಾವೇ ಸೃಷ್ಟಿಸಿದ ಗಣಪತಿ ಜಾಬ್ಸ್‌ ಲಿಂಕ್ಸ್‌ ಎಂಬ ಹೆಸರಿನ ವಾಟ್ಸ್‌ಆ್ಯಪ್ ಗುಂಪಿನಲ್ಲಿ ಕಾಲಕಾಲಕ್ಕೆ ಇಂತಹ ಸುಳ್ಳು ಆಶ್ವಾಸನೆಗಳನ್ನು ಕೊಡುತ್ತಾ ಬಂದಿದ್ದಾರೆ. ಹಣ ಪಡೆದುಕೊಂಡು ೨ ವರ್ಷವಾದರೂ ನೌಕರಿ ಕೊಡಿಸದಿದ್ದಾಗ ಹಣ ಮರಳಿಸುವಂತೆ ಆರೋಪಿಗಳಿಗೆ ಶೋಭಾ ಅಂಬಿಗ ದುಂಬಾಲು ಬಿದ್ದಿದ್ದಾರೆ.

ಬಳಿಕ ಕೇವಲ ₹೧.೩೫ ಲಕ್ಷವನ್ನು ಮರಳಿಸಿದ್ದು, ಉಳಿದ ಹಣ ಕೊಟ್ಟಿಲ್ಲ ಎಂದು ಕುಮಟಾ ಠಾಣೆಯಲ್ಲಿ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆದಿದ್ದು, ಈವರೆಗೆ ಯಾವುದೇ ಆರೋಪಿ ಬಂಧನವಾಗಿಲ್ಲ ಎಂದು ತಿಳಿದುಬಂದಿದೆ.ಕ್ರಿಕೆಟ್‌ ಬೆಟ್ಟಿಂಗ್ ದಂಧೆ: ಇಬ್ಬರ ಬಂಧನ

ಮುಂಡಗೋಡ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದವರ ಮೇಲೆ ಭಾನುವಾರ ರಾತ್ರಿ ದಾಳಿ ನಡೆಸಿದ ಮುಂಡಗೋಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.ಮಂಜುನಾಥ ನೇಮಣ್ಣ ಲಮಾಣಿ ಹಾಗೂ ಅಬ್ದುಲವಾಹೀದ್ ಗೂಡುಸಾಬ ಮತ್ತಿಗಟ್ಟಿ ಬಂಧಿತ ಆರೋಪಿಗಳು. ಪಟ್ಟಣದ ಶಿರಸಿ ರಸ್ತೆಯ ಬೆಂಡಿಗೇರಿ ಪೆಟ್ರೋಲ್ ಬಂಕ್ ಬಳಿ ಭಾನುವಾರ ಸಂಜೆ ಸಾರ್ವಜನಿಕರನ್ನು ಸಂಪರ್ಕಿಸುವ ಮೂಲಕ ಹೈದರಾಬಾದ್‌ನಲ್ಲಿ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್- ಸನ್‌ರೈಸರ್ಸ್‌ ಹೈದರಾಬಾದ್ ನಡುವಿನ ಐಪಿಎಲ್ ಪಂದ್ಯದ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದರು ಎನ್ನಲಾಗಿದ್ದು, ಆಗ ದಾಳಿ ನಡೆಸಿ ಅವರಿಂದ ₹೪೫೦೦ ಹಾಗೂ ನೋಟ್‌ಬುಕ್ ಮುಂತಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.