ಮಹಿಳೆಯರ ಮತ್ತು ಯುವ ಸಮುದಾಯದ ಸಬಲೀಕರಣಕ್ಕಾಗಿ ಪಂಚ ಗ್ಯಾರಂಟಿ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಅಣವೀರಯ್ಯ ಪ್ಯಾಟಿಮಠ ಹೇಳಿದರು.
ಕನ್ನಡಪ್ರಭ ವಾರ್ತೆ ಬೀಳಗಿ
ಮಹಿಳೆಯರ ಮತ್ತು ಯುವ ಸಮುದಾಯದ ಸಬಲೀಕರಣಕ್ಕಾಗಿ ಪಂಚ ಗ್ಯಾರಂಟಿ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಅಣವೀರಯ್ಯ ಪ್ಯಾಟಿಮಠ ಹೇಳಿದರು.ತಾಲೂಕಿನ ನಾಗರಾಳ, ಹೆಗ್ಗೂರ ಹಾಗೂ ಹೊಸ ಕೊರ್ತಿ ಗ್ರಾಮದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಹಾಗೂ ಗ್ರಾಮ ಪಂಚಾಯತಿಗಳ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಗಳ ಸಾರ್ವಜನಿಕ ಕುಂದು-ಕೊರತೆ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಜಗತ್ತಿಗೆ ಬಡತನ ನಿವಾರಣೆ ಹಾಗೂ ಸ್ವಾವಲಂಬನೆ ಜೀವನ ಸಾಗಿಸಲು ಬೇಕಾಗಿರುವ ,ಸಾಮಾಜಿಕ ಚಿಂತನೆಯೊಂದಿಗೆ ಈ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ರೂಪಿಸಿ ಮಾದರಿ ರಾಜ್ಯವನ್ನಾಗಿ ಮಾಡಿದೆ ಎಂದರು.ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಹನುಮಂತ ಸೂಳಿಕೇರಿ ಪ್ರಾಸ್ತಾವಿಕ ವಾಗಿ ಮಾತನಾಡಿ, ಜನಸಾಮಾನ್ಯರ ಆರ್ಥಿಕ ಸ್ಥಿತಿಗತಿ ಸುಧಾರಿಸಲು ಗ್ಯಾರಂಟಿ ಯೋಜನೆ ಸಹಕಾರಿಯಾಗಿದೆ ಎಂದರು.ತಾಪಂ ಅಧಿಕಾರಿ ಮಾಹಾನಂದ ಭೂಷಗೊಂಡ , ಹೆಸ್ಕಾಂ ಇಲಾಖೆಯ ಎಇಇ ಮಂಜುನಾಥ ಬೋಕಿ, ಅಧಿಕಾರಿ ಮಾಹಾಂತೇಶ ಹೊನ್ಯಾಳ, ಆಹಾರ ಇಲಾಖೆಯ ಎ.ಎಲ್. ಸನದಿ, ಎಸ್.ಕೆ. ಭಜಂತ್ರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಭಾಗ್ಯಾ ಜಾಧವ, ಕೆ.ಎಸ್.ಆರ್.ಟಿ.ಸಿ ಅಧಿಕಾರಿ ಮಾಹಾಂತೇಶ ಬಿರಾದಾರ ಇದ್ದರು.ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ರಸೂಲ್ ಮುಜಾವಾರ, ಸದಾಶಿವ ಜುಂಜೂರಿ, ಎಂ.ಆರ್.ಪಾಟೀಲ, ಚಂದಶೇಖರ ಪಂಡರಿ, ವೆಂಕನಗೌಡ ಪಾಟೀಲ ಇದ್ದರು. ಹೆಗ್ಗೂರ, ಹೊಸಕೊರ್ತಿ, ನಾಗರಾಳ, ಗ್ರಾಮಗಳ ಪ್ರಮುಖರಾದ ಸತ್ಯಪ್ಪ ಮೇಲ್ನಾಡ, ಕಿರಣ ಬಾಳಾಗೋಳ, ರಾಜೇಂದ್ರ ದೇಶಪಾಂಡೆ, ಪಡಿಯಪ್ಪ ತಿರಕನ್ನವರ, ಗ್ರಾಪಂ ಪಿಡಿಒಗಾಳಾದ ರಮೇಶ ಮೆಲ್ನಾಡ, ಎನ್.ಬಿ.ದೆಸಂಗಿ, ಗೋಪಾಲ ಮಾಳಿ ಇದ್ದರು.