ಮಹಿಳೆಯರು ಸಬಲರಾದರೆ ಸಮುದಾಯದ ಶ್ರೇಯೋಭಿವೃದ್ಧಿ: ಶಾಸಕ ಶ್ರೀನಿವಾಸ ಮಾನೆ

| Published : May 17 2025, 01:39 AM IST

ಮಹಿಳೆಯರು ಸಬಲರಾದರೆ ಸಮುದಾಯದ ಶ್ರೇಯೋಭಿವೃದ್ಧಿ: ಶಾಸಕ ಶ್ರೀನಿವಾಸ ಮಾನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರ ಆರ್ಥಿಕ ಪ್ರಗತಿಗಾಗಿ ಹಲವಾರು ವೃತ್ತಿಪರ ತರಬೇತಿ ನೀಡಿ, ಕೌಶಲ್ಯ ಅಭಿವೃದ್ಧಿಪಡಿಸಿ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಶ್ರಮ ವಹಿಸಿದೆ.

ಹಾನಗಲ್ಲ: ಹೆಣ್ಣು ಕುಟುಂಬದ ಕಣ್ಣು. ಮಹಿಳೆಯರು ಆರ್ಥಿಕವಾಗಿ ಮಾತ್ರವಲ್ಲದೇ ಸಾಮಾಜಿಕ ಮತ್ತು ರಾಜಕೀಯವಾಗಿಯೂ ಸಬಲರಾಗಬೇಕಿದೆ. ಅಂದಾಗ ಮಾತ್ರ ಇಡೀ ಸಮುದಾಯದ ಶ್ರೇಯೋಭಿವೃದ್ಧಿ ಸಾಧ್ಯವಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ತಾಲೂಕಿನ ಕಂಚಿನೆಗಳೂರು ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಆಶ್ರಯದಲ್ಲಿ ನಡೆದ ಗ್ರಾಮ ಪಂಚಾಯಿತಿ ಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ ಮತ್ತು ಸಮುದಾಯ ಬಂಡವಾಳ ನಿಧಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರ ಆರ್ಥಿಕ ಪ್ರಗತಿಗಾಗಿ ಹಲವಾರು ವೃತ್ತಿಪರ ತರಬೇತಿ ನೀಡಿ, ಕೌಶಲ್ಯ ಅಭಿವೃದ್ಧಿಪಡಿಸಿ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಶ್ರಮ ವಹಿಸಿದೆ. ಮಹಿಳೆಯರ ಸಬಲೀಕರಣಕ್ಕಾಗಿ ನಮ್ಮ ಸರ್ಕಾರ ಗೃಹಲಕ್ಷ್ಮಿ, ಶಕ್ತಿ ಯೋಜನೆಗಳನ್ನು ಜಾರಿಗೊಳಿಸಿದೆ. ಕುಟುಂಬದ ಯಜಮಾನಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇನ್ನೂ ಹಲವು ಕಾರ್ಯಕ್ರಮ ನೀಡುತ್ತಿದೆ. ಹೆಣ್ಣುಮಕ್ಕಳು ಪ್ರಗತಿಯಾದರೆ ಒಂದು ಕುಟುಂಬ, ಗ್ರಾಮ, ರಾಜ್ಯವೇ ಪ್ರಗತಿಯಾದಂತೆ. ಹಾಗಾಗಿ ಸರ್ಕಾರ ಹೆಣ್ಣುಮಕ್ಕಳ ಅಭಿವೃದ್ಧಿಗೆ ಒತ್ತು ನೀಡಿದೆ ಎಂದರು.

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಹಳ ಪರಿಣಾಮಕಾರಿಯಾಗಿ ಪ್ರತಿಯೊಂದು ಕುಟುಂಬಗಳನ್ನು ಆರ್ಥಿಕವಾಗಿ ಸಬಲಗೊಳಿಸುತ್ತಿವೆ. ಒಂದು ಕುಟುಂಬಕ್ಕೆ ವಾರ್ಷಿಕ ಕನಿಷ್ಠ ₹55ರಿಂದ ₹60 ಸಾವಿರ ನೆರವು ಸಿಗುತ್ತಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನಸಾಮಾನ್ಯರ ನೆರವಿಗೆ ನಿಂತ ಏಕೈಕ ಸರ್ಕಾರ ನಮ್ಮದಾಗಿದೆ ಎಂದರು.ತಾಪಂ ಇಒ ಪರಶುರಾಮ ಪೂಜಾರ ಮಾತನಾಡಿ, ಸಾಮಾಜಿಕ ಆಂದೋಲನ ಅಭಿಯಾನದ ಮೂಲಕ ಸ್ವಸಹಾಯ ಸಂಘಗಳಿಂದ ಹೊರಗುಳಿದವರನ್ನು ಸೇರ್ಪಡೆಗೊಳಿಸಲು ಗಮನ ನೀಡಬೇಕಿದೆ ಎಂದರು.ಗ್ರಾಪಂ ಅಧ್ಯಕ್ಷೆ ರಾಧಾ ಇಂಗಳಕಿ, ಉಪಾಧ್ಯಕ್ಷೆ ಲಲಿತಾ ಪತ್ತಾರ, ಸನಾವುಲ್ಲಾ ಮುಲ್ಲಾ, ನಾರಾಯಣ ಕಠಾರಿ, ಮಾರುತಿ ಇಂಗಳಕಿ, ವಿರುಪಾಕ್ಷಪ್ಪ ತಳವಾರ, ಖಾದರಸಾಬ ಮೂಲಿಮನಿ, ಹಜ್ಜೆಖಾನ್ ಹೊಂಡದ, ಹಸನಖಾನ್ ಹೊಂಡದ, ದೇವೇಂದ್ರಪ್ಪ ಭೈರಕ್ಕನವರ, ಮಹೇಶ ಗಿರಿಯಣ್ಣನವರ, ಗುಡ್ಡಪ್ಪ ಜೋಲಿ, ಹುಲ್ಲಪ್ಪ ಬಾರ್ಕಿ, ಶಶಿಕುಮಾರ ಭೈರಕ್ಕನವರ ಸೇರಿದಂತೆ ಗ್ರಾಪಂ ಸದಸ್ಯರು, ಮಹಿಳಾ ಒಕ್ಕೂಟಗಳ ಪದಾಧಿಕಾರಿಗಳು ಇದ್ದರು.

Empowering women will improve the well-being of the community: MLA Srinivas Mane

ಹಾವೇರಿ ಸುದ್ದಿ, ಶಾಸಕ ಶ್ರೀನಿವಾಸ ಮಾನೆ, ಮಹಿಳಾ ಒಕ್ಕೂಟ, Haveri News, MLA Srinivasa Mane, Women''s Unionಮಹಿಳೆಯರ ಆರ್ಥಿಕ ಪ್ರಗತಿಗಾಗಿ ಹಲವಾರು ವೃತ್ತಿಪರ ತರಬೇತಿ ನೀಡಿ, ಕೌಶಲ್ಯ ಅಭಿವೃದ್ಧಿಪಡಿಸಿ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಶ್ರಮ ವಹಿಸಿದೆ.