ಧರ್ಮಸ್ಥಳ ಸಂಸ್ಥೆಯಿಂದ ಅಶಕ್ತರಿಗೆ ಬಲ ತುಂಬುವ ಕಾರ್ಯ: ಶಿವರಾಯಪ್ರಭು

| Published : Feb 19 2025, 12:45 AM IST

ಧರ್ಮಸ್ಥಳ ಸಂಸ್ಥೆಯಿಂದ ಅಶಕ್ತರಿಗೆ ಬಲ ತುಂಬುವ ಕಾರ್ಯ: ಶಿವರಾಯಪ್ರಭು
Share this Article
  • FB
  • TW
  • Linkdin
  • Email

ಸಾರಾಂಶ

ವಾತ್ಸಲ್ಯ ಕಾರ್ಯಕ್ರಮವು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಹಾಗೂ ಅವರ ಪತ್ನಿ ಹೇಮಾವತಿ ಅಮ್ಮನವರ ಕನಸಾಗಿದೆ.

ಹಾನಗಲ್ಲ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವಾತ್ಸಲ್ಯ ಕಾರ್ಯಕ್ರಮದಡಿ ತಾಲೂಕಿನ ಕಂಚಿನೆಗಳೂರಿನ ಯಲ್ಲಮ್ಮ ಕಳ್ಳೀಮನಿ, ಕೆಂಚನಗೌಡ ಪಾಟೀಲ ಈ ಇಬ್ಬರಿಗೆ ವಾತ್ಸಲ್ಯ ಮನೆಗಳನ್ನು ಹಸ್ತಾಂತರಿಸಲಾಯಿತು.

ಸೋಮವಾರ ಕಂಚಿನೆಗಳೂರಿನಲ್ಲಿ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಶಿವರಾಯಪ್ರಭು, ಅಶಕ್ತರಿಗೆ ಒಂದು ಶಕ್ತಿಯಾಗಿ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯವನ್ನೂ ಒಳಗೊಂಡು ನಮ್ಮ ಸಂಸ್ಥೆ ಸಮಾಜದ ದುರ್ಬಲರಿಗೆ ಸಹಾಯ ಸಲ್ಲಿಸುವ ಮಹತ್ಕಾರ್ಯದಲ್ಲಿದೆ ಎಂದರು.

ಎಲ್ಲ ಸಂದರ್ಭದಲ್ಲಿಯೂ ಅಶಕ್ತರಿಗೆ ಶಕ್ತಿ ತುಂಬುವ ಒಂದು ಸಣ್ಣ ಸೇವೆ ಅವರನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ದಿಟ್ಟ ಶಕ್ತಿಯಾಗಬಲ್ಲದು. ವಾತ್ಸಲ್ಯ ಕಾರ್ಯಕ್ರಮವು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಹಾಗೂ ಅವರ ಪತ್ನಿ ಹೇಮಾವತಿ ಅಮ್ಮನವರ ಕನಸಾಗಿದೆ ಎಂದರು.

ಉಳ್ಳವರಿಗೆ ಶಕ್ತಿ ಇರುತ್ತದೆ. ಆದರೆ ಇಲ್ಲದವರ ಶಕ್ತಿಯಾಗಿ ಕೆಲಸ ಮಾಡೋಣ ಎಂಬ ಸಂಕಲ್ಪದ ಹಿನ್ನೆಲೆಯಲ್ಲಿ ಸಮರೋಪಾದಿಯಲ್ಲಿ ಸೇವಾ ಕಾರ್ಯಗಳು ಮುನ್ನಡೆಯುತ್ತಿವೆ. ಇದರ ಒಂದು ಭಾಗವಾಗಿ ಜಿಲ್ಲೆಯಲ್ಲಿ ವಾತ್ಸಲ್ಯ ಹೆಸರಿನಲ್ಲಿ ಅತ್ಯಂತ ದುರ್ಬಲರಿಗೆ ಇದೇ ವರ್ಷ ೧೭ ಮನೆಗಳನ್ನು ಪ್ರತಿ ಮನೆಗೆ ಅಂದಾಜು ₹೧.೪ ಲಕ್ಷ ವೆಚ್ಚದಲ್ಲಿ ಸಿದ್ಧಪಡಿಸಿ ಹಸ್ತಾಂತರಿಸಲಾಗುತ್ತಿದೆ. ಈ ಮನೆಯವರಿಗೆ ಇದರೊಂದಿಗೆ ಪ್ರತಿ ತಿಂಗಳು ಒಂದು ಸಾವಿರ ರು. ಹಾಗೂ ಪೌಷ್ಟಿಕ ಆಹಾರ ಕೂಡ ನೀಡಲಾಗುವುದು. ಮನೆಯೊಂದಿಗೆ ವಾತ್ಸಲ್ಯ ಕಿಟ್ ಕೂಡ ನೀಡಲಾಗುತ್ತದೆ ಎಂದರು.ಜಿಲ್ಲಾ ಯೋಜನಾಧಿಕಾರಿ ರಾಘವೇಂದ್ರ ಪಟಗಾರ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಹಿಳಾ ಸಂಘಟನೆಗಳು ತಾಲೂಕಿನಲ್ಲಿ ಅತ್ಯಂತ ಉತ್ಸಾಹದಿಂದ ಕೆಲಸ ಮಾಡುತ್ತಿವೆ. ಡಾ. ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ ಅಮ್ಮನವರ ಕನಸು ಸಾಕಾರವಾಗುತ್ತಿದೆ. ನಮ್ಮ ಸಂಘಟನೆಯ ಮೂಲಕ ನಡೆಯುವ ಸೇವಾ ಕಾರ್ಯಗಳಿಗೆ ಎಲ್ಲ ಗ್ರಾಮಗಳ ಗ್ರಾಮಸ್ಥರು ಅತ್ಯುತ್ತಮ ಸಹಕಾರ ನೀಡುತ್ತಿದ್ದಾರೆ. ಅಲ್ಲದೆ ದುರ್ಬಲರ ಸೇವೆಗೆ ಇದೊಂದು ದೊಡ್ಡ ಅವಕಾಶ ಎಂದರು.ಮಾರುತಿ ಇಂಗಳಕಿ, ಗ್ರಾಪಂ ಅಧ್ಯಕ್ಷರು, ಹುಲ್ಲಪ್ಪ ಬಾರ್ಕಿ ಸದಸ್ಯರು, ಸಿದ್ದಪ್ಪ ಕನವಳ್ಳಿ, ರಾಘವೇಂದ್ರ ಪಟಗಾರ, ಜ್ಞಾನವಿಕಾಸ ಸಮನ್ವಯಾಧಿಕಾರಿ ಡಿ. ಜ್ವಾಲಮ್ಮ, ವಲಯ ಮೇಲ್ವಿಚಾರಕರ ಅಣ್ಣಪ್ಪ, ಒಕ್ಕೂಟದ ಅಧ್ಯಕ್ಷೆ ಮಂಗಳಾ ಹೊಳಬೈಲು, ಲಕ್ಷ್ಮೀ ಮಾಳಗಿ, ಹನುಮಂತೆವ್ವ ಜಾಡರ, ಸೇವಾ ಪ್ರತಿನಿಧಿಗಳಾದ ಶಶಿಕಲಾ, ಸವಿತಾ, ನೇತ್ರಾ ಮೊದಲಾದವರಿದ್ದರು. ವಾಯುಮಾಲಿನ್ಯ ತಪಾಸಣೆಯ ಪ್ರಮಾಣ ಪತ್ರ ಕಡ್ಡಾಯ

ರಾಣಿಬೆನ್ನೂರು: ನಗರದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ದ್ವಿಚಕ್ರ, ನಾಲ್ಕು ಚಕ್ರ, ಮಧ್ಯಮ ಹಾಗೂ ಭಾರಿ ವಾಹನಗಳಿಗೆ ಸಂಬಂಧಿಸಿದಂತೆ ಯಾವುದೇ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುವ ಮುನ್ನ ಕಡ್ಡಾಯವಾಗಿ ವಾಯುಮಾಲಿನ್ಯ ತಪಾಸಣೆಯ ಪ್ರಮಾಣ ಪತ್ರ(ಸರ್ಟಿಫಿಕೇಟ್) ಪಡೆದುಕೊಳ್ಳಬೇಕು ಎಂದು ತಾಲೂಕು ವಾಯುಮಾಲಿನ್ಯ ತಪಾಸಣಾ ಕೇಂದ್ರಗಳ ಅಧ್ಯಕ್ಷ ಪ್ರಭುಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.