ಕೇಂದ್ರದ ಯೋಜನೆಗಳಿಂದ ಮಹಿಳಾ ಸಬಲೀಕರಣ

| Published : Sep 02 2024, 02:16 AM IST

ಸಾರಾಂಶ

ಮಹಿಳಾ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಆ ಯೋಜನೆಗಳ ಪ್ರಯೋಜನ ಪಡೆಯುವುದರ ಮೂಲಕ ಮಹಿಳೆಯರು ಸ್ವಾವಲಂಭಿಗಳಾಗಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡೋರಿನ್ ಸ್ನೇಹಲತ ತಿಳಿಸಿದರು.

ಹೊಸಕೋಟೆ: ಮಹಿಳಾ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಆ ಯೋಜನೆಗಳ ಪ್ರಯೋಜನ ಪಡೆಯುವುದರ ಮೂಲಕ ಮಹಿಳೆಯರು ಸ್ವಾವಲಂಭಿಗಳಾಗಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡೋರಿನ್ ಸ್ನೇಹಲತ ತಿಳಿಸಿದರು.

ನಗರದ ಟಿಜಿ ಬಡಾವಣೆಯಲ್ಲಿರುವ ಯಾರಾ ಪೌಂಡೇಶನ್ ಹಾಗೂ ರೀಜಿನಲ್ ಕಚೇರಿ ಕೈರ್ ಬೋರ್ಡ್ ಬೆಂಗಳೂರು ಸಹಯೋಗದಲ್ಲಿ ತೆಂಗಿನ ನಾರಿನ ಉತ್ಪನ್ನಗಳ ತಯಾರಿಗೆ ಹಾಗೂ ಮಾರಾಟ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳೆಯರು ನಿಷ್ಠೆ ಉತ್ಸಾಹದಿಂದ ಕೆಲಸ ಕಲಿತಲ್ಲಿ ಯಶಸ್ಸು ದೊರೆಯಲಿದೆ, ಮಹಿಳೆ ಸಬಲರಾದಲ್ಲಿ ಸಮಾಜ ದೇಶ ಪ್ರಗತಿಹೊಂದುವುದರಲ್ಲಿ ಯಾವ ಅನುಮಾನವಿಲ್ಲ ಎಂದ ಅವರು ನಮ್ಮ ಕಾಲೇಜಿನಲ್ಲಿಯೂ ಸಹ ಕರಕುಶಲ ತರಬೇತಿ ಕಾರ್ಯಾಗಾರಗಳನ್ನು ಏರ್ಪಡಿಸಲಾಗುವುದು, ಇದರಿಂದ ಮಕ್ಕಳಲ್ಲಿ ಕರಕುಷಲ ಕೌಶಲ್ಯ ವೃದ್ದಿಯ ಜೊತೆಗೆ ಕಾಲೇಜು ಮುಗಿದು ಕೆಲಸ ಹುಡುಕುವ ಸಂದರ್ಭದಲ್ಲಿ ಪಾರ್ಟ್ ಟೈಮ್ ನಲ್ಲಿ ಕರಕುಶಲ ಕೆಲಸದಿಂದ ಕನಿಷ್ಟ ಅವರ ಸಣ್ಣ ಪುಟ್ಟ ಖರ್ಚುಗಳಿಗೆ ಹಣಗಳಿಸಬಹುದಾಗಿದೆ ಎಂಬ ಉದ್ದೇಶ ಎಂದರು.ದಿಶಾ ಸಮಿತಿಯ ನಾಗವೇಣಿ ಶ್ರೀನಿವಾಸ್ ಮಾತನಾಡಿ, ಮಹಿಳೆಯರು ಸಮಾಜದಲ್ಲಿ ಎಲ್ಲಾ ರಂಗದಲ್ಲಿ ತಮ್ಮ ಶಕ್ತಿ ಪ್ರದರ್ಶನ ತೋರುತ್ತಿದ್ದಾರೆ. ಮಹಿಳೆಯರು ತಮ್ಮ ಬಿಡುವಿನ ಸಮಯದಲ್ಲಿ ಇಂತಕ ತರಬೇತಿ ಕಾರ್ಯಗಾರಗಳಲ್ಲಿ ಬಾಗವಹಿಸಿದಲ್ಲಿ ಅವರ ಕೌಶಲ್ಯ ವೃದ್ಧಿಯ ಜೊತೆ ಗುಡಿ ಕೈಗಾರಿಗೆ ತೆರೆಯುವ ಹಲವಾರು ಅವಕಾಶಗಳು ದೊರೆಯಲಿದೆ, ಸರ್ಕಾರ ಮಹಿಳೆಯಾ ಉದ್ಯಮಿಗಳಿಗೆ ಅತೀ ಕಡಿಮೆ ಬಡ್ಡಿ ದರದಲ್ಲಿ ಸಬ್ಸಿಡಿ ಸಮೇತ ಹಣಕಾಸು ನೆರವು ನೀಡುತಿದೆ. ಇದರ ಸದುಪಯೋಗ ಪಡೆದು ತಮ್ಮ ಗುಡಿ ಕೈಗಾರಿಕೆಯನ್ನು ಸಣ್ಣ ಕೈಗಾರಿಕೆ ಹಾಗೂ ಉದ್ಯಮವಾಗಿ ಪರಿವರ್ತನೆ ಮಾಡಿಕೊಳ್ಳಬಹುದಾಗಿದೆ.ಇದರಿಂದ ಕುಟುಂಬದ ಯಶಸ್ಸಿನ ಜೊತೆ ದೇಶದ ಅಭಿವೃದ್ಧಿಗೂ ಪೂರಕವಾಗಲಿದೆ ಎಂದರು.

ಈ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾ ಉದ್ಯಮಗಳ ಇಲಾಖೆಯ ಶ್ರೀಕಾಂತ್, ನಗರಸಭೆಯ ಆರೋಗ್ಯಾಧಿಕಾರಿ ಆಂಜಿನಪ್ಪ, ಕೈರ್ ಬೋರ್ಡ್ ನ ರೀಜಿನಲ್ ಅಧಿಕಾರಿ ಸುರೇಶ್, ಟಿ ಅಗ್ರಹಾರ ಪಂಚಾಯ್ತಿ ಸದಸ್ಯ ಮುನಿರಾಜ್, ಯಾರಾ ಪೌಂಡೇಶ್‌ನ ಅಧ್ಯಕ್ಷ ರಾಜೇಂದ್ರ ಪ್ರಸಾದ್, ಕೈರ್ ಬೋರ್ಡ್ ನ ಸತ್ಯಭಾಮ ಹಾಗೂ ಇತರರು ಹಾಜರಿದ್ದರು.

ರಾಷ್ಟ್ರದಲ್ಲಿ ತೆಂಗಿನ ನಾರಿನ ಉತ್ಪನ್ನಗಳು ಹೆಚ್ಚಾಗಿ ಕೇರಳ ರಾಜ್ಯದಲ್ಲಿ ತಯಾರಿಕೆಯಾಗುತ್ತಿದೆ, ಇನ್ನು ಕರ್ನಾಟಕದಲ್ಲಿ ಮೈಸೂರು ಮಂಡ್ಯ ಹಾಸನ ತುಮಕೂರುಗಳಂತಹ ತೆಂಗು ಬೆಳೆಯುವ ಭಾಗಗಳಲ್ಲಿ ತೆಂಗಿನ ನಾರಿನ ವಸ್ತುಗಳ ತಯಾರಿಕೆ ಮಾಡಬಹುದಾಗಿದೆ, ಇದರಿಂದ ಮಹಿಳೆಯರಿಗೆ ಉತ್ತಮ ಲಾಭಗಳು ಇದ್ದು ತಾವು ತಯಾರಿಸಿದ ವಸ್ತುಗಳನ್ನು ಮಾರಾಟದ ಜೊತೆಗೆ ವಿದೇಶಗಳಿಗೂ ರಪ್ತು ಮಾಡುವ ಅವಕಾಶನನ್ನು ಸರ್ಕಾರದ ವತಿಯಿಂದ ಮಾಡಲಾಗುತ್ತದೆ ಎಂದು ಕೈರ್ ಬೋರ್ಡ್‌ನ ರೀಜಿನಲ್ ಮ್ಯಾನೇಜರ್ ಪ್ರಶಾಂತ್ ತಿಳಿಸಿದರು.