ಸಾರಾಂಶ
ಹುಬ್ಬಳ್ಳಿ:
ನವಲಗುಂದ ತಾಲೂಕಿನ ತಿರ್ಲಾಪುರ ಗ್ರಾಮದಲ್ಲಿ ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ರಾಜ್ಯಮಟ್ಟದ ಖಾಲಿ ಗಾಡಾ ಓಡಿಸುವ ಸ್ಪರ್ಧೆ ನಡೆಯಿತು. ಹಳೇಹುಬ್ಬಳ್ಳಿಯ ಸಿದ್ಧಾರೂಢ ಪ್ರಸನ್ನ ಎಂಬ ಜೋಡಿಯ ಗಾಡಾ ಪ್ರಥಮ ಸ್ಥಾನ ಪಡೆಯುವ ಮೂಲಕ ₹ 1 ಲಕ್ಷ ಬಹುಮಾನ ಪಡೆಯಿತು.ಬೆಳಗ್ಗೆ 10ರಿಂದ ಪ್ರಾರಂಭವಾಗಿದ್ದ ಸ್ಪರ್ಧೆಯೂ ಮಧ್ಯಾಹ್ನ12ರ ವರೆಗೆ ನಡೆಯಿತು. ಬಳಿಕ ಸಂಜೆ 4ಕ್ಕೆ ಪುನಃ ಪ್ರಾರಂಭವಾಗಿ ಸಂಜೆ 6ರ ವರೆಗೆ ನಡೆಯಿತು. ಮಧ್ಯಾಹ್ನ ಏರುಗತಿಯಲ್ಲಿ ಬಿಸಿಲು ಇದ್ದ ಕಾರಣ ಕೆಲಕಾಲ ಬಿಡುವು ನೀಡಲಾಗಿತ್ತು. ಬರೋಬ್ಬರಿ 32 ಜೋಡಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಹಳೇ ಹುಬ್ಬಳ್ಳಿಯ ಸಿದ್ಧಾರೂಢ ಪ್ರಸನ್ನ ಪ್ರಥಮ ಸ್ಥಾನ ಪಡೆಯಿತು. ಬೆಳಗಿನಕೊಪ್ಪದ ಈಶ್ವರ ಲಿಂಗೇಶ್ವರ ಪ್ರಸನ್ನ ದ್ವಿತೀಯ ಸ್ಥಾನ (₹75 ಸಾವಿರ ಬಹುಮಾನ) ಪಡೆದರೆ, ಬೆಳಗುಂದಿಯ ಜ್ಯೋತಿರ್ಲಿಂಗ ಪ್ರಸನ್ನ ತೃತೀಯ (₹ 50 ಸಾವಿರ), ಕರಡಿಗುಡ್ಡದ ಸಿದ್ದೇಶ್ವರ ಪ್ರಸನ್ನ ಚತುರ್ಥ (₹ 30 ಸಾವಿರ), ಬೆಳಗಾವಿಯ ಜ್ಯೋತಿರ್ಲಿಂಗ ಪ್ರಸನ್ನ ಐದನೆಯ ಬಹುಮಾನ (₹ 20 ಸಾವಿರ), 6ನೇ ಸ್ಥಾನವನ್ನು ಅಲಕವಾಡದ ಆಂಜನೇಯ ಪ್ರಸನ್ನ (₹ 15 ಸಾವಿರ) , ಇದೇ ಊರಿನ ಇದೇ ಹೆಸರಿನ ಮತ್ತೊಂದು ಜೋಡಿ ಏಳನೆಯ ಸ್ಥಾನ (₹ 12500), 8ನೆಯ ಸ್ಥಾನವನ್ನು ಕಡದಳ್ಳಿಯ ಕಲ್ಮೇಶ್ವರ ಪ್ರಸನ್ನ (₹ 10 ಸಾವಿರ), ಚಿಕ್ಕಮಲ್ಲಿಗವಾಡದ ಲಕ್ಷ್ಮೇಶ್ವರ ಪ್ರಸನ್ನ 9ನೇ ಸ್ಥಾನ (₹ 5 ಸಾವಿರ), ಹಲಗಲಿಯ ನಾಗಲಿಂಗೇಶ್ವರ ಪ್ರಸನ್ನ (₹ 4500) ಬಹುಮಾನ ಪಡೆದವು. ಇನ್ನು ಜೋಡಳ್ಳಿ ಗೋರಬಾಳದ ಗ್ರಾಮದೇವತಾ ಪ್ರಸನ್ನ ಎಂಬ ಜೋಡಿಯ ವಿಶೇಷ ಬಹುಮಾನ (₹ 6500) ಪಡೆಯಿತು.
ಸ್ಪರ್ಧೆಯಲ್ಲಿ ವೀರೇಶ ಸೊಬರದಮಠ, ಮುತ್ತು ಮುದ್ನೂರ, ಸಿದ್ದಪ್ಪ ಆಕಳದ, ಯಶವಂತಗೌಡ ಪಾಟೀಲ, ಮಲ್ಲಣ್ಣ ಅಲ್ಲೆಕಾರ, ಮಲ್ಲಿಕಾರ್ಜುನ ಬೊಮ್ಮನವರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.