ನೀರಿನ ಟ್ಯಾಂಕ್ ತೆರವು: ಜನರ ಆತಂಕ ನಿವಾರಣೆ

| Published : Sep 01 2024, 01:47 AM IST

ನೀರಿನ ಟ್ಯಾಂಕ್ ತೆರವು: ಜನರ ಆತಂಕ ನಿವಾರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದಲ್ಲಿರುವ ಶಿಥಿಲಗೊಂಡ ನೀರಿನ ಟ್ಯಾಂಕ್‌ ಅನ್ನು ಗ್ರಾಪಂನವರು ತೆರವುಗೊಳಿಸುವ ಮೂಲಕ ಜನತೆಯಲ್ಲಿದ್ದ ಆತಂಕ ಹೋಗಲಾಡಿಸಿದ್ದಾರೆ.

ಕುಷ್ಟಗಿ: ತಾಲೂಕಿನ ದೋಟಿಹಾಳ ಗ್ರಾಮದಲ್ಲಿರುವ ಶಿಥಿಲಗೊಂಡ ನೀರಿನ ಟ್ಯಾಂಕ್‌ ಅನ್ನು ಗ್ರಾಪಂನವರು ತೆರವುಗೊಳಿಸುವ ಮೂಲಕ ಜನತೆಯಲ್ಲಿದ್ದ ಆತಂಕ ಹೋಗಲಾಡಿಸಿದ್ದಾರೆ.

ದೋಟಿಹಾಳ ಗ್ರಾಮದಲ್ಲಿ ಸುಮಾರು 30 ವರ್ಷಗಳ ಹಿಂದೆ ನಿರ್ಮಾಣವಾದ ಈ ಟ್ಯಾಂಕ್‌ ಇತ್ತೀಚಿಗೆ ಶಿಥಿಲಗೊಂಡು ನೀರು ಸೋರಿಕೆಯಾಗುವುದು ಹಾಗೂ ಕಂಬದಲ್ಲಿನ ಕಬ್ಬಿಣದ ಚೂರುಗಳು ಕೆಳಗಡೆ ಬೀಳುವುದು, ಸಿಮೆಂಟ್‌ ಉದುರಿ ಬೀಳುವುದು ಹಾಗೂ ನೀರು ಸಂಪೂರ್ಣವಾಗಿ ತುಂಬಿದಾಗ ಅಲುಗಾಡುವುದು ಮಾಡುತ್ತಿತ್ತು. ಇದರಿಂದ ಟ್ಯಾಂಕಿನ ಸುತ್ತಮುತ್ತಲಿನನಿವಾಸಿಗಳು ಯಾವಾಗ, ಯಾರ ಮೇಲೆ ಬೀಳುತ್ತದೆಯೋ ಎಂಬ ಆತಂಕದಲ್ಲಿ ಕಾಲಕಳೆಯುತ್ತಿದ್ದರು.

ಇದನ್ನು ಮನಗಂಡು ''''ಕನ್ನಡಪ್ರಭ'''' ಆ. 22ರಂದು ''''ನೀರಿನ ಟ್ಯಾಂಕ್ ಶಿಥಿಲ ಆತಂಕದಲ್ಲಿ ನಿವಾಸಿಗಳು'''' ಎಂಬ ತಲೆಬರಹದಡಿ ವರದಿ ಪ್ರಕಟಿಸಿತ್ತು. ಈ ವರದಿಯಿಂದ ಎಚ್ಚೆತ್ತುಕೊಂಡ ಗ್ರಾಮ ಪಂಚಾಯಿತಿ ಆಡಳಿತ ಶನಿವಾರ ಬೆಳಗ್ಗೆ ಜೆಸಿಬಿ ಮೂಲಕ ತೆರವುಗೊಳಿಸಿದ್ದಾರೆ.

ವರದಿಗೆ ಶ್ಲಾಘನೆ:

ನಾವು ಅನೇಕ ಸಲ ಹೇಳಿದರೂ ಪಂಚಾಯಿತಿಯವರು ಕೇಳಿರಲಿಲ್ಲ. ''''ಕನ್ನಡಪ್ರಭ''''ದಲ್ಲಿ ಸುದ್ದಿ ಬಿತ್ತರವಾದ ನಂತರ ನೀರಿನ ಟ್ಯಾಂಕ್‌ ತೆರವುಗೊಳಿಸಿದ್ದಾರೆ. ಈಗ ನಮ್ಮಲ್ಲಿ ಮನೆ ಮಾಡಿದ್ದ ಆತಂಕ ದೂರವಾಗಿದೆ ಎಂದು ಕನ್ನಡಪ್ರಭಕ್ಕೆ ಧನ್ಯವಾದ ತಿಳಿಸಿದ್ದಾರೆ.

ತೆರವು

ಬಹು ದಿನಗಳ ಬೇಡಿಕೆಯಾಗಿದ್ದ ಶಿಥಿಲಾವಸ್ಥೆಯ ನೀರಿನ ಟ್ಯಾಂಕ್‌ ಮೊದಲೇ ತೆರವುಗೊಳಿಸಬೇಕಾಗಿತ್ತು. ಕೆಲ ಅನಿವಾರ್ಯ ಕಾರಣಗಳಿಂದ ಶನಿವಾರ ತೆರವು ಕಾರ್ಯ ಮಾಡುವ ಮೂಲಕ ಜನರಲ್ಲಿದ್ದ ಆತಂಕಕ್ಕೆ ತೆರೆ ಎಳೆಯಲಾಗಿದೆ.

ಮಹೇಶ ಕಾಳಗಿ, ಅಧ್ಯಕ್ಷರು ಗ್ರಾಪಂ ದೋಟಿಹಾಳ.