ಶ್ರೀ ವೀರ ಮದಕರಿ ನಾಯಕರ ಧ್ಯೇಯ ಆದರ್ಶಗಳನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರು ತಿಳಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಶ್ರೀ ವೀರ ಮದಕರಿ ನಾಯಕರ ಧ್ಯೇಯ ಆದರ್ಶಗಳನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರು ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ವೀರ ಮದಕರಿ ನಾಯಕರ ಜಯಂತಿ ಕಾರ್ಯಕ್ರಮದಲ್ಲಿ ಮದಕರಿ ನಾಯಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಮಾಡಿ, ದುರ್ಗದ ಹುಲಿ ಎಂದೇ ಖ್ಯಾತರಾಗಿದ್ದ ವೀರ ಮದಕರಿ ನಾಯಕರು ಚಿತ್ರದುರ್ಗದಲ್ಲಿ ರಾಜರಾಗಿ ಉತ್ತಮವಾದ ಆಳ್ವಿಕೆ ಮಾಡಿದ್ದಾರೆ. ಅವರ ಧ್ಯೇಯ, ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಮದವೇರಿದ ಆನೆಯನ್ನು ಮದಿಸಿ, ಇಡೀ ವಿಶ್ವದಲ್ಲೇ ಹೆಸರುವಾಸಿಯಾದ ನಾಯಕರೇ ವೀರಮದಕರಿ ನಾಯಕರು. ಇವರ ಹೋರಾಟ, ಚಿಂತನೆ, ಆದರ್ಶ, ಆಡಳಿತ ಅತ್ಯುತ್ತಮವಾಗಿತ್ತು ಎಂದರು.ಜಿಪಂ ಮಾಜಿ ಸದಸ್ಯರಾದ ಅರಕಲವಾಡಿ ಸೋಮನಾಯಕ, ರಮೇಶ್, ನಗರಸಭಾ ಮಾಜಿ ಅಧ್ಯಕ್ಷ ಸುರೇಶ್ ನಾಯಕ, ನಗರಸಭಾ ಮಾಜಿ ಸದಸ್ಯ ಚಂಗುಮಣಿ, ಶಿವರಾಜ್, ಮುಖಂಡರಾದ ಶ್ರೀನಿವಾಸ ನಾಯಕ, ಕಂಡಕ್ಟರ್ ಸೋಮನಾಯಕ, ಶಿವು ವಿರಾಟ್, ಬದನಗುಪ್ಪೆ ಶಿವರಾಮ್, ವರದನಾಯಕ, ಹರದನಹಳ್ಳಿ ನಟರಾಜು, ರಂಗಸ್ವಾಮಿ ನಾಯಕ, ಅಮಚವಾಡಿ ಲಿಂಗರಾಜು, ಕೃಷ್ಣನಾಯಕ, ಬುಲೆಟ ಚಂದ್ರು, ಜಿ.ಬಂಗಾರ್, ಮಹದೇಶ್, ಆಟೋ ಮಂಜುನಾಥ್, ಬಸವಣ್ಣ ನಾಯಕ, ಲಿಂಗರಾಜು, ನಾರಾಯಣನಾಯಕ, ಸಿದ್ದರಾಜನಾಯಕ, ಜ್ಯೋತಿ, ಗೌಡನಪುರ ಗ್ರಾಪಂ ಸದಸ್ಯ ನಿಂಗರಾಜನಾಯಕ ಇತರರು ಹಾಜರಿದ್ದರು.