ಸ್ತ್ರೀ ಮೇಲಿನ ದೌರ್ಜನ್ಯ ನಿವಾರಣೆಗೆ ಕಾನೂನು ಜಾರಿಗೊಳಿಸಿ: ಉಮಾ

| Published : Mar 29 2024, 12:49 AM IST

ಸ್ತ್ರೀ ಮೇಲಿನ ದೌರ್ಜನ್ಯ ನಿವಾರಣೆಗೆ ಕಾನೂನು ಜಾರಿಗೊಳಿಸಿ: ಉಮಾ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕಠಿಣ ಕಾನೂನು ರೂಪಿಸಿದೆ. ಆದಾಗ್ಯೂ ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ.

ಸಂಡೂರು: ಸರ್ಕಾರ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕಠಿಣ ಕಾನೂನು ರೂಪಿಸಿದೆ. ಆದಾಗ್ಯೂ ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ. ಮಹಿಳೆಯರು ಜಾಗೃತರಾಗಿ, ತಮಗೆ ಅನ್ಯಾಯವಾದಾಗ ಕೂಡಲೇ ಅದರ ವಿರುದ್ಧ ಧ್ವನಿ ಎತ್ತಿ, ಪ್ರತಿಭಟಿಸುವ ಅಗತ್ಯವಿದೆ ಎಂದು ಶಿಕ್ಷಕಿ ಡಾ.ಎಚ್.ಎಂ. ಉಮಾ ಅಭಿಪ್ರಾಯಪಟ್ಟರು.ಪಟ್ಟಣದ ಬಿಕೆಜಿ ಒಳ ಕ್ರೀಡಾಂಗಣದಲ್ಲಿ ಮಂಗಳವಾರ ಬಿಕೆಜಿ ಹಾಗೂ ಆರ್‌ಪಿಸಿಎಲ್ ಕಂಪನಿಗಳ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಸರ್ಕಾರ ಮಹಿಳೆಯರ ಸಬಲೀಕರಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ್ದಾರೆ. ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಲಭ್ಯವಿರುವ ಅವಕಾಶಗಳನ್ನು ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಬಿಕೆಜಿ ಕಂಪನಿಯ ನಿರ್ದೇಶಕರಾದ ಬಿ. ನಾಗನಗೌಡ ಮಾತನಾಡಿ, ಮಹಿಳೆಯರನ್ನು ಗೌರವಿಸುವ, ರಕ್ಷಿಸುವ ಹಾಗೂ ಸಮಾನ ಸ್ಥಾನವನ್ನು ನೀಡುವ ಜವಾಬ್ದಾರಿ ಪುರುಷರ ಮೇಲಿದೆ. ಈ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದಾಗ ಮಾತ್ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಅರ್ಥ ಬರಲಿದೆ ಎಂದರು.ಪಿ. ಶ್ರೀನಿವಾಸ್ ಮಾತನಾಡಿದರು. ರಾಜಶೇಖರ ಬೆಲ್ಲದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶೈಲಜಾ ಕಾರ್ಯಕ್ರಮವನ್ನು ನಿರ್ವಹಿಸಿದರು. ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ಗಣ್ಯರು ವಿತರಿಸಿದರು.ಬಿಕೆಜಿ ಕಂಪನಿಯ ನಿರ್ದೇಶಕ ಬಿ.ಕೆ. ಬಸವರಾಜ, ಜನರಲ್ ಮ್ಯಾನೇಜರ್ ಶ್ರೀನಿವಾಸರಾವ್, ಡಿಜಿಎಂ ಪ್ರಮೋದ್ ರಿತ್ತಿ, ಆರ್‌ಪಿಸಿಎಲ್ ಕಂಪನಿಯ ಇಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ದಾಮೋದರ್, ವೈದ್ಯರಾದ ಡಾ. ವೈ. ಸೀನಾರೆಡ್ಡಿ, ಪ್ರದೀಪ್, ಸಿಬ್ಬಂದಿ ಉಪಸ್ಥಿತರಿದ್ದರು.