ಕ್ರಿಯಾಶೀಲತೆ ಹೆಚ್ಚಿಸುವ ನಿಟ್ಟಿನಲ್ಲಿ ಪೌಷ್ಟಿಕ ಆಹಾರ ಬಳಕೆ ಉತ್ತೇಜಿಸಿ: ಶಿಶು ಅಭಿವೃದ್ಧಿ ಅಧಿಕಾರಿ ಸಕಲೇಶ್ವರ್

| Published : Sep 26 2024, 10:20 AM IST

ಕ್ರಿಯಾಶೀಲತೆ ಹೆಚ್ಚಿಸುವ ನಿಟ್ಟಿನಲ್ಲಿ ಪೌಷ್ಟಿಕ ಆಹಾರ ಬಳಕೆ ಉತ್ತೇಜಿಸಿ: ಶಿಶು ಅಭಿವೃದ್ಧಿ ಅಧಿಕಾರಿ ಸಕಲೇಶ್ವರ್
Share this Article
  • FB
  • TW
  • Linkdin
  • Email

ಸಾರಾಂಶ

ದೈಹಿಕ ಕ್ಷಮತೆ ಹಾಗೂ ಕ್ರಿಯಾಶೀಲತೆ ಹೆಚ್ಚಿಸುವ ನಿಟ್ಟಿನಲ್ಲಿ ಪೌಷ್ಟಿಕ ಆಹಾರ ಬಳಕೆಯನ್ನು ಉತ್ತೇಜಿಸಬೇಕು ಎಂದು ಶಿಶು ಅಭಿವೃದ್ಧಿ ಅಧಿಕಾರಿ ಸಕಲೇಶ್ವರ್ ಹೇಳಿದರು. ಯಳಂದೂರಿನಲ್ಲಿ ಮಾತೃ ವಂದನ ಸಪ್ತಾಹ ಹಾಗೂ ಪೋಷಣ ಅಭಿಯಾನ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ದೈಹಿಕ ಕ್ಷಮತೆ ಹಾಗೂ ಕ್ರಿಯಾಶೀಲತೆ ಹೆಚ್ಚಿಸುವ ನಿಟ್ಟಿನಲ್ಲಿ ಪೌಷ್ಟಿಕ ಆಹಾರ ಬಳಕೆಯನ್ನು ಉತ್ತೇಜಿಸಬೇಕು ಎಂದು ಶಿಶು ಅಭಿವೃದ್ಧಿ ಅಧಿಕಾರಿ ಸಕಲೇಶ್ವರ್ ಹೇಳಿದರು.

ತಾಲೂಕಿನ ವೈ.ಕೆ.ಮೊಳೆ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಮಾತೃ ವಂದನ ಸಪ್ತಾಹ ಹಾಗೂ ಪೋಷಣ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪೋಷಕರು ಮತ್ತು ಅಂಗನವಾಡಿ ಸಹಾಯಕರು ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಸುವ ಜೊತೆಗೆ ಅದರ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು. ಬೀದಿಬದಿ ಆಹಾರ ಮತ್ತು ಜಂಕ್‌ಫುಡ್ ಸೇವನೆ ತಪ್ಪಿಸಬೇಕು. ಮನೆಯಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ಪದಾರ್ಥಗಳನ್ನು ನೀಡಬೇಕು ಎಂದರು.

ಹಿಂದಿನ ಕಾಲದಲ್ಲಿ ಅಕ್ಕಿಯನ್ನು ಸೇವಿಸುತ್ತಿರಲಿಲ್ಲ, ಸಿರಿಧಾನ್ಯ ಬಳಕೆ ಸಾಮಾನ್ಯವಾಗಿತ್ತು. ತರಕಾರಿ ಮತ್ತು ಹಾಲನ್ನು ಹೆಚ್ಚು ಬಳಸುತ್ತಿದ್ದರು. ಆದರೆ ಬದಲಾದ ಕಾಲಘಟ್ಟದಲ್ಲಿ ಹಣ್ಣು ತರಕಾರಿಗಳನ್ನು ದೂರ ಇಟ್ಟು ನಾಲಿಗೆಗೆ ರುಚಿ ನೀಡುವ ಪದಾರ್ಥಗಳನ್ನು ಮಕ್ಕಳಿಗೆ ನೀಡುವುದರಿಂದ ಸಮಸ್ಯೆಗಳು ಕಾಡುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮೊದಲನೇ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಗ್ರಾಪಂ ಅಧ್ಯಕ್ಷ ನಂಜುಂಡಸ್ವಾಮಿ, ಮೇಲ್ವಿಚಾರಕಿ ಸರಸ್ವತಿ, ಚಂಗಚಹಳ್ಳಿ, ಹೆಗಡೆ ಹುಂಡಿ ಮತ್ತು ವೈಕೆ ಮೊಳೆ ಅಂಗನವಾಡಿ ಕಾರ್ಯಕರ್ತೆಯರಾದ ಮೌನಶ್ರೀ, ಮಾದೇವಮ್ಮ ದೊಡ್ಡತಾಯಮ್ಮ ಸರೋಜಮ್ಮ ಸಾವಿತ್ರಮ್ಮ ರೇಣುಕಾ, ನಂಜಮಣಿ, ಭಾಗ್ಯ, ವಾಣಿ, ಗ್ರಾಮಸ್ಥರಾದ ವೆಂಕಟೇಶ್, ಲಿಂಗಣ್ಣ, ನಂಜ ಶೆಟ್ಟಿ, ಆಶಾ ಕಾರ್ಯಕರ್ತೆಯರು, ಪೋಷಕರು ಹಾಜರಿದ್ದರು.