ಗುಡಿ ಕೈಗಾರಿಕೆಗಳ ಪ್ರೋತ್ಸಾಹಿಸಿ: ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ

| Published : Mar 03 2025, 01:49 AM IST

ಗುಡಿ ಕೈಗಾರಿಕೆಗಳ ಪ್ರೋತ್ಸಾಹಿಸಿ: ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಧಾರವಾಡ, ಹುಬ್ಬಳ್ಳಿ, ಬೆಂಗಳೂರು, ರಾಮದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಮಾರಾಟಗಾರರು ಭಾಗವಹಿಸಿದ್ದಾರೆ. ಸಾರ್ವಜನಿಕರು ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಈ ವಸ್ತು ಪ್ರದರ್ಶನಕ್ಕೆ ತಪ್ಪದೇ ಭೇಟಿ ನೀಡಿ ಉತ್ಕೃಷ್ಟವಾದ ಕರಕುಶಲ ವಸ್ತುಗಳನ್ನು ಖರೀದಿಸಬೇಕು.

ಹಾವೇರಿ: ಗುಡಿ ಕೈಗಾರಿಕೆ ನಶಿಸುತ್ತಿದ್ದು, ಗೃಹ ಉತ್ಪನ್ನಗಳನ್ನು ಖರೀದಿಸುವ ಮೂಲಕ ಸ್ವದೇಶಿ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕಾಗಿದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ತಿಳಿಸಿದರು.ನಗರದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಹಾವೇರಿ ಗ್ರಾಮೀಣ ಕೈಗಾರಿಕಾ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕೈಗಾರಿಕಾ ವಸ್ತು ಪ್ರದರ್ಶನ ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದರು.ಗ್ರಾಮೀಣ ಕುಶಲಕರ್ಮಿಗಳು, ಅತಿ ಸಣ್ಣ, ಸಣ್ಣ ಕೈಗಾರಿಕೆಗಳು, ಖಾದಿ ಗ್ರಾಮೋದ್ಯೋಗ, ಕೈಮಗ್ಗ ಮತ್ತು ಜವಳಿ ಸಂಘಗಳು ಮತ್ತು ಸ್ವ-ಸಹಾಯ ಗುಂಪುಗಳು ತಯಾರಿಸುವ ಕರಕುಶಲ ವಸ್ತುಗಳು, ಬಿದಿರಿನ ಅಲಂಕಾರಿಕ ವಸ್ತುಗಳು, ಟೇರಾಕೋಟ, ಆಹಾರ ಉತ್ಪನ್ನಗಳು, ಖಾದಿ, ಕೈಮಗ್ಗ, ಜವಳಿ ಉತ್ಪನ್ನಗಳು, ಅಗರಬತ್ತಿ, ಕಸೂತಿ ಸೀರೆಗಳು, ಬ್ಯಾಗ್, ಗೊಂಬೆಗಳು, ಕೃತಕ ಆಭರಣಗಳು ಹಾಗೂ ಇತರೆ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಜರುಗಲಿದೆ. ಧಾರವಾಡ, ಹುಬ್ಬಳ್ಳಿ, ಬೆಂಗಳೂರು, ರಾಮದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಮಾರಾಟಗಾರರು ಭಾಗವಹಿಸಿದ್ದಾರೆ. ಸಾರ್ವಜನಿಕರು ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಈ ವಸ್ತು ಪ್ರದರ್ಶನಕ್ಕೆ ತಪ್ಪದೇ ಬೇಟಿ ನೀಡಿ ಉತ್ಕೃಷ್ಟವಾದ ಕರಕುಶಲ ವಸ್ತುಗಳನ್ನು ಖರೀದಿಸ ಬೇಕು ಎಂದರು.ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ ಮಾತನಾಡಿ, ಸಣ್ಣ ಸಣ್ಣ ಉದ್ಯಮಿಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಲು ಈ ಮೇಳ ಆಯೋಜಿಸಲಾಗಿದೆ. ಗಣಜೂರ- ಕೋಳೂರ ಪ್ರದೇಶಲ್ಲಿ 407 ಎಕರೆ ಕೈಗಾರಿಕೆ ಪ್ರದೇಶ ಅಭಿವೃದ್ಧಿ ಪಡಿಸಲಾಗುತ್ತಿದೆ. ರಸ್ತೆ, ವಿದ್ಯುತ್ ಸೌಲಭ್ಯ ಸೇರಿದಂತೆ ಮೂಲ ಸೌಲಭ್ಯಗಳು ದೊರೆಯಲಿವೆ. ಹಾಗಾಗಿ ಜಿಲ್ಲೆಯಲ್ಲಿ ಕೈಗಾರಿಕೆ ಆರಂಭಿಸಲು ಯುವ ಉದ್ಯಮಿಗಳು ಮುಂದಾಗಬೇಕು ಎಂದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಂ.ಎಂ. ಹಿರೇಮಠ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ ಹಾಗೂ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಂ.ಎಂ. ಮೈದೂರ ಇತರರು ಇದ್ದರು. ವಯಸ್ಕರ ಶಿಕ್ಷಣ ಇಲಾಖೆ ಅಧಿಕಾರಿ ಬಿ.ಎಂ. ಬೇವಿನಮರದ ನಿರೂಪಿಸಿದರು.ಇಂದಿನಿಂದ ೩೨ನೇ ಶರಣ ಸಂಸ್ಕೃತಿ ಉತ್ಸವ

ಶಿಗ್ಗಾಂವಿ: ಇಲ್ಲಿನ ವಿರಕ್ತಮಠದಲ್ಲಿ ೩೨ನೇ ಶರಣ ಸಂಸ್ಕೃತಿ ಉತ್ಸವ- ೨೦೨೫ರ ಪ್ರಯುಕ್ತ ಮಾ. ೩ರಿಂದ ೧೧ರ ವರೆಗೆ ಪ್ರತಿದಿನ ಸಂಜೆ ೭ ಗಂಟೆಗೆ ಪ್ರವಚನ ಜರುಗಲಿದೆ.ಪಟ್ಟಣದ ವಿರಕ್ತಮಠದ ಲಿಂ. ಸಂಗನಬಸವ ಸ್ವಾಮಿಗಳ ಹಾಗೂ ಲಿಂ. ಬಸವಲಿಂಗ ಸ್ವಾಮಿಗಳ ಪುಣ್ಯಾರಾಧನೆ ಪ್ರಯುಕ್ತ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಗ್ಗೆ ೬ ಗಂಟೆಗೆ ಕತೃ ಗದ್ದುಗೆಗೆ ರುದ್ರಾಭಿಷೇಕ ವೇದಮೂರ್ತಿ ಉಳವಯ್ಯನವರು ಬಮ್ಮಿಗಟ್ಟಿಮಠ ಹಾಗೂ ಬಸವಲಿಂಗ ದೇವರು ಅವರಿಂದ ನೆರವೇರುವುದು. ಬೆಳಗ್ಗೆ ೯.೩೦ಕ್ಕೆ ಪಟಸ್ಥಲ ಧ್ವಜಾರೋಹಣವನ್ನು ಸವಣೂರಿನ ಕಲ್ಮಠದ ಮಹಾಂತ ಸ್ವಾಮಿಗಳು ನೆರವೇರಿಸುವರು. ಸಂಜೆ ೭ಗಂಟೆಗೆ ಪ್ರವಚನ ಹಾಗೂ ೩೨ನೇ ಶರಣ ಸಂಸ್ಕೃತಿ ಉತ್ಸವ ಉದ್ಘಾಟನಾ ಸಮಾರಂಭ ಹಾಗೂ ಲಿಂ. ಪುಟ್ಟರಾಜ ಗವಾಯಿಗಳ ಜಯಂತ್ಯುತ್ಸವ ಕಾರ್ಯಕ್ರಮ ಜರುಗುವುದು.

ಸಾನ್ನಿಧ್ಯವನ್ನು ಹಾವೇರಿ ಹೊಸಮಠದ ಬಸವಶಾಂತಲಿಂಗ ಸ್ವಾಮಿಗಳು ವಹಿಸುವರು. ಕಾರ್ಯಕ್ರಮದ ಉದ್ಘಾಟನೆಯನ್ನು ಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಮ್‌ಪೀರ ಎಸ್. ಖಾದ್ರಿ ನೆರವೇರಿಸುವರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪುಟ್ಟರಾಜ ಗವಾಯಿಗಳ ಸಂಘದ ಅಧ್ಯಕ್ಷ ಫಕ್ಕಿರೇಶ ಕೊಂಡಾಯಿ, ಗೌರವ ಅಧ್ಯಕ್ಷ ಕೊಟ್ರೇಶ ಮಾಸ್ತರ ಬೆಳಗಲಿ, ಮುಖಂಡ ರಾಜು ಎಂ. ಕುನ್ನೂರ ಪಾಲ್ಗೊಳ್ಳುವರು. ಪ್ರವಚನವನ್ನು ಡಾ. ಎ.ಸಿ. ವಾಲಿ ಮಹಾರಾಜರು ನೀಡುವರು.