ಇಂದಿನ ಆಧುನಿಕ ಕೃಷಿ ಯಂತ್ರೋಪಕರಣ ಬಳಕೆಯಿಂದಾಗಿ ಹಳೆ ಕೃಷಿ ಪದ್ಧತಿಯನ್ನು ನಶಿಸಿ ಹೋಗುತ್ತಿದೆ. ರೈತರು ಜೋಡತ್ತಿನ ಮೂಲಕ ಕೃಷಿ ಪದ್ಧತಿಯನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ. ಅಂತಹವರಿಗೆ ಪ್ರೋತ್ಸಾಹ ನೀಡಬೇ ಎಂದು ಸರಕಾರಕ್ಕೆ ಒತ್ತಾಯಿಸಲಾಗುತ್ತಿದೆ ಎಂದು ಕೃಷಿಕ ವೀರಣ್ಣ ಗಂಗಾಣಿ ಹೇಳಿದರು
ಕನ್ನಡಪ್ರಭ ವಾರ್ತೆ ಚಿಂಚೋಳಿ
ಇಂದಿನ ಆಧುನಿಕ ಕೃಷಿ ಯಂತ್ರೋಪಕರಣ ಬಳಕೆಯಿಂದಾಗಿ ಹಳೆ ಕೃಷಿ ಪದ್ಧತಿಯನ್ನು ನಶಿಸಿ ಹೋಗುತ್ತಿದೆ. ರೈತರು ಜೋಡತ್ತಿನ ಮೂಲಕ ಕೃಷಿ ಪದ್ಧತಿಯನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ. ಅಂತಹವರಿಗೆ ಪ್ರೋತ್ಸಾಹ ನೀಡಬೇ ಎಂದು ಸರಕಾರಕ್ಕೆ ಒತ್ತಾಯಿಸಲಾಗುತ್ತಿದೆ ಎಂದು ಕೃಷಿಕ ವೀರಣ್ಣ ಗಂಗಾಣಿ ಹೇಳಿದರುಪಟ್ಟಣದ ಹಾರಕೂಡ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ಚಿಂಚೋಳಿ ತಾಲೂಕಿನ ರೈತರು ಮತ್ತು ನಾಗರಿಕರಿಗಾಗಿ ಏರ್ಪಡಿಸಿದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಜೋಡೆತ್ತಿನ ಕೃಷಿ ಪದ್ಧತಿಯನ್ನು ಉಳಿಸಿ ಬೆಳೆಸುತ್ತಿರುವ ರೈತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರೈತರಿಗೆ ಸನ್ಮಾನಿಸಿ ಅಭಿನಂದನೆ ಪತ್ರ ನೀಡಿರುವುದು. ಎತ್ತಿನ ಬಂಡಿ ಕೃಷಿ ಪದ್ಧತಿ ಅನುಸರಿಸುತ್ತಿರುವವರಿಗೆ ಸರ್ಕಾರವು ತಿಂಗಳಿಗೆ 11,000 ರು.ಪ್ರೋತ್ಸಾಹ ಧನ ನೀಡಬೇಕು ಎಂದು ಒತ್ತಾಯಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು .
ಅ.28ರಂದು ಚಿಂಚೋಳಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪ್ರಜಾಸೌಧ ಕಚೇರಿವರೆಗೆ 150ಕ್ಕೂ ಹೆಚ್ಚು ಎತ್ತಿನ ಬಂಡಿಗಳೊಂದಿಗೆ ರೈತರು ಮೆರವಣಿಗೆ ನಡೆಸಲಿದ್ದಾರೆ. ಹಳೆಯ ಕೃಷಿ ಪದ್ಧತಿ ಅನುಸರಿಸಿಕೊಂಡು ಜೋಡೆತ್ತಿನ ಕೃಷಿಕರಿಗೆ ಪ್ರೋತ್ಸಾಹ ಸಹಿತ ರೈತರ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.ಜೋಡೆತ್ತಿನ ಜಾತ್ರೆಯಲ್ಲಿ ತಾಲೂಕಿನ ವಿವಿಧ ಮಠಾಧೀಶರು ಹಾಗೂ,ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಅಬ್ದುಲ್ ಬಾಸಿತ್, ಭೀಮಶೆಟ್ಟಿ ಮುರುಡ ಮಾತನಾಡಿದರು. ಸಭೆಯಲ್ಲಿ ರೈತ ಮುಖಂಡರಾದ ಶಂಕರಗೌಡ ಅಲ್ಲಾಪೂರ, ಮಲ್ಲಿಕಾರ್ಜುನ ಬುಶೆಟ್ಟಿ, ಕೆ.ಎಂ.ಬರಿ, ಲಕ್ಷಣ ಅವಂಟಿ, ಹಣಮಂತ ಪೂಜಾರಿ, ಗೋಪಾಲ ಗಾರಂಪಳ್ಳಿ, ಮಲ್ಲು ಹೂಗಾರ್, ಸೂರ್ಯಕಾಂತ ಪಾಟೀಲ್, ಸಂಗಯ್ಯ ಸ್ವಾಮಿ, ವಿರೇಶ್ ಯಂಪಳ್ಳಿ, ಲೋಕೇಶ್ ಸೆಳ್ಳಿಗಿ, ಜಗನಾಥ್ ಗುತ್ತೆದಾರ, ಶ್ರೀಧರ್ ಪಾಟೀಲ್, ಶ್ರೀಶೈಲ ರೆಡ್ಡಿ, ಚಂದ್ರನಾಥ ಪಾಟೀಲ್, ಸಂಗಮೇಶ ಮಲಿ, ಶಿವಶರಣಪ್ಪ ಡೆಂಗಿ,ಪವನ ಪಾಟೀಲ್ ದೇಗಲಮಡಿ,ವಿವೇಕ್ ಪಾಟೀಲ್, ಚಂದ್ರು ಅವರಾದಿ, ವಿಶ್ವನಾಥ್ ಐನೋಳ್ಳಿ, ಚಿಂಚೋಳಿ ತಾಲೂಕಿನ ಅನೇಕ ರೈತರು ಭಾಗವಹಿಸಿದ್ದರು.
