ಕನ್ನಡ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಿ

| Published : Nov 04 2024, 12:30 AM IST

ಸಾರಾಂಶ

ಅತ್ಯಂತ ಸುಂದರ ಸುಲಲಿತವಾಗಿ ಮಾತನಾಡುವ ಕನ್ನಡ ಭಾಷೆ ಪಟ್ಟಣ ಪ್ರದೇಶಗಳಲ್ಲಿ ಗಟ್ಟಿಗೊಳ್ಳಬೇಕಿದೆ.

ಹಗರಿಬೊಮ್ಮಹನಹಳ್ಳಿ: ಕನ್ನಡ ಭಾಷೆ ಅನ್ನ ನೀಡುವ ಭಾಷೆ. ಪ್ರತಿಯೊಬ್ಬರಲ್ಲಿಯೂ ಭಾಷಾಭಿಮಾನ ಮೂಡಬೇಕು ಎಂದು ರಾಜ್ಯ ಕಾರ್ಮಿಕರ ಪರಿಷತ್‌ನ ತಾಲೂಕು ಅಧ್ಯಕ್ಷ ಹಡಗಲಿ ಖಾಜಾಹುಸೇನ್ ಹೇಳಿದರು.

ತಾಲೂಕಿನ ಹಂಪಾಪಟ್ಟಣ ಗ್ರಾಮದ ಜೈ ಆಂಜನೇಯ ಬಯಲು ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕರ ಪರಿಷತ್ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅತ್ಯಂತ ಸುಂದರ ಸುಲಲಿತವಾಗಿ ಮಾತನಾಡುವ ಕನ್ನಡ ಭಾಷೆ ಪಟ್ಟಣ ಪ್ರದೇಶಗಳಲ್ಲಿ ಗಟ್ಟಿಗೊಳ್ಳಬೇಕಿದೆ. ಕನ್ನಡದ ಮೇಲಿನ ಪ್ರೀತಿ ಕ್ಷೀಣಿಸಬಾರದು. ಕನ್ನಡ ರಂಗಭೂಮಿ ಕಲಾವಿದರನ್ನು ಸರಕಾರಗಳು ಪ್ರೋತ್ಸಾಹಿಸಿ ಮೇಲ್ಪಂಕ್ತಿಗೆ ತರಬೇಕು. ಭಾಷೆಯ ಮೇಲೆ ವಿಶೇಷ ಆಸಕ್ತಿ ಮೂಡಿಸುವ ಹಿನ್ನಲೆಯಲ್ಲಿ ವಿನೂತನ ಕಾರ್ಯಕ್ರಗಳು ಏರ್ಪಡಬೇಕು ಎಂದು ತಿಳಿಸಿದರು.

ಜನನಿ ಸೇವಾ ಟ್ರಸ್ಟ್ ಉಪಾಧ್ಯಕ್ಷ ಗೆದ್ಲಗಟ್ಟಿ ಸೋಮನಾಥ್ ಮಾತನಾಡಿ, ಪ್ರತಿನಿತ್ಯವೂ ನೆಲ, ಜಲ, ಭಾಷೆ ಸಂರಕ್ಷಣೆಗೆ ಪ್ರತಿಯೊಬ್ಬರೂ ಕಂಕಣಬದ್ಧರಾಗೋಣ. ಕಲೆಯನ್ನೇ ತಮ್ಮ ಉಸಿರಾಗಿಸಿಕೊಂಡಿರುವ ಗ್ರಾಮದ ಗೊಂದಳಿ ರಾಮಣ್ಣ ಅವರಿಗೆ ರಾಜ್ಯ ಸರ್ಕಾರ ಪ್ರಶಸ್ತಿ ನೀಡಿರುವುದು ಹೆಮ್ಮೆಯ ವಿಷೆಯ ಎಂದರು. ಯುವ ಮುಖಂಡ ಟಿ.ಮಹೇಂದ್ರ ಮಾತನಾಡಿದರು.

ಈ ಸಂದರ್ಭದಲ್ಲಿ ನವೋದಯ ಯುವಕ ಸಂಘದ ಅಧ್ಯಕ್ಷ ವಿ.ಹನುಮಂತ, ಕರವೇ ಅಧ್ಯಕ್ಷ ಪೂಜಾರ್ ಸೋಮನಾಥ, ಉಪ್ಪಾರ್ ಸೋಮನಾಥ, ಜಿಲ್ಲಾ ಡಿಎಸ್‌ಎಸ್ ಅಧ್ಯಕ್ಷ ಎಚ್.ರಮೇಶ್, ಟಿ.ಕೊಟ್ರೇಶ್, ಗೂಳಿ ಕೊಟ್ರೇಶ್, ಉಪ್ಪಾರ್ ಕನಕಪ್ಪ, Pಜನನಿ ಸೇವಾ ಟ್ರಸ್ಟ್ ಅಧ್ಯಕ್ಷ ಎ. ಕೇಶವಮೂರ್ತಿ, ರೈತ ಸಂಘದ ಕಾರ್ಯದರ್ಶಿ ಶೀಗೆನಹಳ್ಳಿ ಬಸವರಾಜ್, ದೇವೇಂದ್ರ, ಮಡಿವಾಳ ಮಹಾಂತೇಶ್, ರೆಹಮತ್, ಕಡ್ಲೆಪ್ಪ, ಇಸ್ಮಾಯಿಲ್, ಉಪ್ಪಾರ್ ಕೊಟ್ರೇಶ್, ಖಾದರ್, ತೀರ್ಥಪ್ರಸಾದ್, ಟಿ. ಗೌತಮ್, ಓ.ನಿರಂಜನ, ಮಂಜುನಾಥ ಕಿಟಗಿ ಇದ್ದರು.

ಈ ವೇಳೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜನಪದ ಕಲಾವಿದ ಗೊಂದಳಿ ರಾಮಣ್ಣನವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಗ್ರಾಮದ ಪ್ರಮುಖ ಬೀದಿಯಲ್ಲಿ ಕನ್ನಡ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮವನ್ನು ವಿ. ಗೋವಿಂದ, ಜಿ.ಫಕೀರಪ್ಪ, ಕೆ.ಹುಲುಗಪ್ಪ ನಿರ್ವಹಿಸಿದರು.

ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಟ್ಟಣದ ಗ್ರಾಮದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತ ಜನಪದ ಕಲಾವಿದ ಗೊಂದಳಿ ರಾಮಣ್ಣನವರಿಗೆ ಸನ್ಮಾನಿಸಿ ಗೌರವಿಸಲಾಯಿತು.